ಡಾ ಆರತಿ ಕೌಂಡಿನ್ಯ 
ರಾಜ್ಯ

ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚಬೇಡಿ ಎಂದರೆ ತಪ್ಪಾಗುತ್ತದೆ: ಆಧ್ಯಾತ್ಮಿಕ, ಸಂಸ್ಕೃತಿ ಚಿಂತಕಿ ಡಾ. ಆರತಿ ಕೌಂಡಿನ್ಯ

ಪಟಾಕಿ ಹಚ್ಚುವ ಪರಂಪರೆ ಭಾರತೀಯರದ್ದು, ಇದನ್ನು ಸಹಸ್ರಮಾನಗಳಿಂದ, ಶತಮಾನಗಳಿಂದ ಆಚರಿಸಿಕೊಂಡು ಬಂದಿದ್ದೇವೆ. ನಮ್ಮದನ್ನು ನೋಡಿಕೊಂಡು ಪಾಶ್ಚಾತ್ಯ ದೇಶಗಳು ಪಟಾಕಿ ಹಚ್ಚಲು ಆರಂಭಿಸಿದ್ದು, ಅದಕ್ಕೆ ಮೊದಲು ವಿದೇಶಗಳಲ್ಲಿ ಪಟಾಕಿ ಹಚ್ಚುವ ಸಂಸ್ಕೃತಿ, ಪದ್ಧತಿ ಇರಲಿಲ್ಲ. 

ಪಟಾಕಿ ಹಚ್ಚುವ ಪರಂಪರೆ ಭಾರತೀಯರದ್ದು, ಇದನ್ನು ಸಹಸ್ರಮಾನಗಳಿಂದ, ಶತಮಾನಗಳಿಂದ ಆಚರಿಸಿಕೊಂಡು ಬಂದಿದ್ದೇವೆ. ನಮ್ಮದನ್ನು ನೋಡಿಕೊಂಡು ಪಾಶ್ಚಾತ್ಯ ದೇಶಗಳು ಪಟಾಕಿ ಹಚ್ಚಲು ಆರಂಭಿಸಿದ್ದು, ಅದಕ್ಕೆ ಮೊದಲು ವಿದೇಶಗಳಲ್ಲಿ ಪಟಾಕಿ ಹಚ್ಚುವ ಸಂಸ್ಕೃತಿ, ಪದ್ಧತಿ ಇರಲಿಲ್ಲ. 

ಈಗ ಅವರು ಹಚ್ಚಬಹುದು, ನಾವು ಭಾರತೀಯರು, ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಮಾಲಿನ್ಯವಾಗುತ್ತದೆ ಪಟಾಕಿ ಹಚ್ಚುವುದು ಬೇಡ ಎಂದರೆ ಹೇಗೆ, ಅತಿಯಾಗದೆ, ತುಂಬಾ ಶಬ್ದ ಉಂಟುಮಾಡುವ,ಅತಿ ಮಾಲಿನ್ಯವಾಗುವ ಪಟಾಕಿಗಳನ್ನು ಹಚ್ಚುವುದು ಬೇಡ ಎನ್ನುತ್ತಾರೆ.

ಅಮೆರಿಕ ಸ್ವಾತಂತ್ರ್ಯ ದಿನ ಅಲ್ಲಿ ಹೊಡೆಯುವ ಪಟಾಕಿಗೆ ಹೋಲಿಸಿದರೆ ನಾವಿಲ್ಲಿ ದೀಪಾವಳಿ ಸಮಯದಲ್ಲಿ ಮೂರು ದಿನ ಸಾಯಂಕಾಲ ಒಂದೊಂದು ಗಂಟೆ ಅಷ್ಟೂ ಜನ ಹಚ್ಚುವ ಪಟಾಕಿಗಿಂತ ಹತ್ತು ಪಟ್ಟು ಹೆಚ್ಚಿರುತ್ತದೆ. ದುಬೈಗೆ ಹೋಗಿ ನೋಡಿದರೆ ಅಲ್ಲಿ ಪ್ರತಿದಿನ ವಾಹನಗಳು, ಕಾರ್ಖಾನೆಗಳಿಂದ ಬರುವ ಹೊಗೆ ಇಲ್ಲಿಗಿಂತ ಎರಡು ಮೂರು ಪಟ್ಟು ಹೆಚ್ಚಿರುತ್ತದೆ. ಆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ, ಮಾಲಿನ್ಯ ತಡೆಗಟ್ಟಲು ಗಮನಹರಿಸುವುದಿಲ್ಲ.

ಈ ಬಾರಿ ಕೊರೋನಾ ಒಂದು ನೆಪವಷ್ಟೆ ದೀಪಾವಳಿಗೆ ಪಟಾಕಿ ಹಚ್ಚಬೇಡಿ ಎಂದು ಹೇಳಲು, ಬೇರೆ ಸಂದರ್ಭಗಳಲ್ಲಿ, ಅನ್ಯಧರ್ಮೀಯರು ಅವರ ಧಾರ್ಮಿಕ ಆಚರಣೆಗಳಲ್ಲಿ ಗುಂಪು ಗುಂಪು ಸೇರಿದಾಗ, ಹಬ್ಬ ಹರಿದಿಗಳನ್ನು ಮಾಡುವಾಗ ಜನಜಂಗುಳಿ ಸೇರಿದಾಗ ಕೊರೋನಾ ಹರಡುವುದಿಲ್ಲವೇ, ಇನ್ನು ಮಾಲಿನ್ಯವಾಗುವುದು ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚುವುದರಿಂದ ಮಾತ್ರವೇ, ಇಲ್ಲಿ ಪಟಾಕಿ ಹಚ್ಚಬೇಡಿ ಎಂದು ಹಿಂದೂ ಧರ್ಮೀಯರಿಗೆ ಮಾತ್ರ ನಿಯಮ ತರುವುದು ಬೇಡ, ಪಟಾಕಿಗಳನ್ನು ಹಚ್ಚುವುದೇ ಬೇಡ ಎಂದು ಸರ್ಕಾರ ಅಥವಾ ಯಾರೇ ಹೇಳಿದರೂ ಕ್ರೌರ್ಯ, ಪಾಪ ಆಗುತ್ತದೆ. ವರ್ಷಕ್ಕೊಂದು ಸಾರಿ ಬರುವ ದೀಪಾವಳಿಗೆ ಯಾಕೆ ಪಟಾಕಿ ಹಚ್ಚಬಾರದು, ರಾಜಕೀಯ ನಾಯಕರು ಚುನಾವಣೆಯಲ್ಲಿ ಗೆದ್ದಾಗ, ಇನ್ನಿತರ ಕಾರ್ಯಕ್ರಮಗಳಲ್ಲಿ ಪಟಾಕಿ ಹಚ್ಚುವುದಿಲ್ಲವೇ? ಕಾನೂನು ತರುವುದಾದರೆ ಇಡೀ ಮನುಷ್ಯ ಕುಲಕ್ಕೆ ಮಾಡಲಿ ಎಂದು ಆಧ್ಯಾತ್ಮಿಕ, ಸಂಸ್ಕೃತಿ ಚಿಂತಕಿ, ವಿಭು ಅಕಾಡೆಮಿ ಮುಖ್ಯಸ್ಥೆ ಡಾ. ಆರತಿ ಕೌಂಡಿನ್ಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 

ತುಂಬಾ ಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನು ಹಚ್ಚುವುದು ಬೇಡ, ಹಿತಮಿತವಾಗಿ, ನಮ್ಮ ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ಪಟಾಕಿ ಹಚ್ಚಿ ದೀಪ ಬೆಳಗೋಣ ಎನ್ನುತ್ತಾರೆ ಡಾ ಆರತಿ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; ಆ ದೃಶ್ಯಕ್ಕೆ ಆಕ್ಷೇಪ!

ಲೂಟಿಕೋರನ ಭಯವೇ? ಖರ್ಗೆಯವರೇ, ಭಿಕ್ಷೆ ಬೇಡುವ 'ದಯನೀಯ ಸ್ಥಿತಿ' ಬರಬಾರದಿತ್ತು! ಜೆಡಿಎಸ್ ಟಾಂಗ್

ಕುರ್ಚಿ ಕದನ: ಡಿಕೆಶಿ ಸಿಎಂ ಆಗುವುದು ಯಾವಾಗ?; ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

SCROLL FOR NEXT