ರಾಜ್ಯ

ಮಾಜಿ ಸಚಿವ ಆರ್ ರೋಷನ್ ಬೇಗ್ 3 ದಿನಗಳ ಕಾಲ ಸಿಬಿಐ ವಶಕ್ಕೆ

Raghavendra Adiga

ಬೆಂಗಳೂರು: ಮಾಜಿ ಸಚಿವ ಆರ್ ರೋಷನ್ ಬೇಗ್ ಗೆ ಮತ್ತೆ ಮೂರು ದಿನಗಳ ಕಾಲ ಸಿಬಿಐ  ಕಸ್ಟಡಿ ವಿಧಿಸಿ ಕೋರ್ಟ್ ಆದೇಶಿಸಿದೆ.

ಐಎಂಎ ಪ್ತಕರಣದಲ್ಲಿ ಮನ್ಸೂರ್ ಖಾನ್ ನಿಂದ 200 ಕೋಟಿ ರೂ. ಪಡೆದಿದ್ದಾರೆಂಬ ಆರೋಪದ ಹಿನ್ನೆಲೆ ಸಿಬಿಐನಿಂದ ಬಂಧನಕ್ಕೊಳಗಾಗಿರುವ ರೋಷನ್ ಬೇಗ್ ಅವರನ್ನು ನವೆಂಬರ್ 28 ರವರೆಗೆ ಸಿಬಿಐ ಕಸ್ಟಡಿಗೆ ನೀಡಿ ಸಿಬಿಐ ವಿಶೇಷ ಕೋರ್ಟ್ ನ ನ್ಯಾಯಾಧೀಶೆ ಮಂಜುಳ ಇಟ್ಟಿ ಆದೇಶಿಸಿದ್ದಾರೆ.

ನವೆಂಬರ್ 28 ರಂದು ಬೆಳಿಗ್ಗೆ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದ ಕೋರ್ಟ್  ಮಧ್ಯೆ ನವೆಂಬರ್ 27ಕ್ಕೆ ಜಾಮೀನಿಗೆ ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಿದೆ.

ಇದೇ ವೇಳೆ ಬೇಗ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. 
 

SCROLL FOR NEXT