ಕೆರೆಯಲ್ಲಿ ಮೃತಪಟ್ಟಿರುವ ಆನೆಗಳು 
ರಾಜ್ಯ

ನೀರು ಕುಡಿಯಲು ಕೆರೆಗಿಳಿದ 2 ಆನೆಗಳಿಗೆ ವಿದ್ಯುತ್ ಶಾಕ್ ಹೊಡೆದು ಸಾವು: ಬನ್ನೇರುಘಟ್ಟ ಉದ್ಯಾನದಲ್ಲಿ ಘಟನೆ

ನೀರು ಕುಡಿಯಲು ಕೆರೆಗಿಳಿದ ಎರಡು ಆನೆಗಳು ವಿದ್ಯುತ್ ಸ್ಪರ್ಶದಿಂದಾಗಿ ಸಾವನ್ನಪ್ಪಿರುವ ಧಾರುಣ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಕನಕಪುರ: ನೀರು ಕುಡಿಯಲು ಕೆರೆಗಿಳಿದ ಎರಡು ಆನೆಗಳು ವಿದ್ಯುತ್ ಸ್ಪರ್ಶದಿಂದಾಗಿ ಸಾವನ್ನಪ್ಪಿರುವ ಧಾರುಣ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

35ರಿಂದ 40 ವರ್ಷ ವಯಸ್ಸಿನ ಹೆಣ್ಣಾನೆ. 15 ರಿಂದ 16 ವರ್ಷ ವಯಸ್ಸಿನ ಮರಿ ಆನೆ ಸಾವನ್ನಪ್ಪಿದೆ. ಕೋಡಿಹಳ್ಳಿ ವಲಯ ಬನ್ನೈರುಘಟ್ಟ ರಾಷ್ಟ್ರೀಯ ಅಭಯಾರಣ್ಯ ಪ್ರದೇಶದ ಚಿಕ್ಕಗೊಂಡನಹಳ್ಳಿ ಬಳಿಯಿರುವ ಹೊಸಕೆರೆಗೆ ಶುಕ್ರವಾರ ಸಂಜೆ ಸುಮಾರು 8ರಿಂದ 10 ಆನೆಗಳ ಹಿಂಡು ನೀರು ಕುಡಿಯಲು ಬಂದಿವೆ. 

ಅದರಲ್ಲಿ ಎರಡು ಆನೆಗಳು ಕೆರೆಯ ಮಧ್ಯಭಾಗಕ್ಕೆ ತೆರಳಿವೆ. ಕೆರೆಯ ಮಧ್ಯದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ತಗುಲಿದ ಪರಿಣಾಮ ಎರಡೂ ಆನೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಶನಿವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ. 

ಘಟನೆ ಕುರಿತು ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR: ‘ಜ್ಞಾನೇಶ್ ಕುಮಾರ್ ಬಿಜೆಪಿಯ ಅಸ್ತ್ರ, SIR ರದ್ದುಪಡಿಸಿ': ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆಗೆ ಠಾಕ್ರೆ ಸೋದರ ಸಂಬಂಧಿಗಳ ಆಗ್ರಹ!

ಉಕ್ರೇನ್ ನಲ್ಲಿ ರಷ್ಯಾ ಡ್ರೋನ್ ದಾಳಿ: ಭಾರತೀಯರ ಒಡೆತನದ ಔಷಧ ಘಟಕ ಧ್ವಂಸ, ಓರ್ವ ಸಾವು, ಹಲವರಿಗೆ ಗಾಯ! Video

‘ನಿವೃತ್ತಿಗೂ ಮುನ್ನ ಈ ದಾಖಲೆ ಬೇಕು’: 92 ರನ್ ಗೆ ಔಟಾದ ರೋಹಿತ್ ಶರ್ಮಾಗೆ ಗವಾಸ್ಕರ್ ಟಾರ್ಗೆಟ್!

2006ರ KSTP ಯೋಜನೆ ಪ್ರಕರಣ: CEC ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಕೇರಳಂ ಗೃಹ ಸಚಿವ ಆದೇಶ

ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ವೇಳೆ 'One8' ಬ್ರ್ಯಾಂಡ್‌ ಶೂ ತೋರಿಸಿದ ಅಭಿಮಾನಿ! ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? Video