ಮುತ್ತಪ್ಪ ರೈ 
ರಾಜ್ಯ

ಮುತ್ತಪ್ಪ ರೈ ಮನೆ ಮೇಲೆ ಸಿಸಿಬಿ ದಾಳಿ: ಮಾಜಿ ಡಾನ್ ಪುತ್ರನಿಗೆ ಡ್ರಗ್ಸ್ ನಂಟು?

ದಿ. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಇಂದು ಬೆಳಿಗ್ಗೆ ಎರಡೂ ಮನೆಗಳಿಗೆ ದಾಳಿ ಮಾಡಲಾಗಿದೆ.

ಬೆಂಗಳೂರು: ಇತ್ತೀಚೆಗೆ ನಿಧನರಾದ ಮಾಜಿ ಡಾನ್ ಮುತ್ತಪ್ಪ ರೈ ಅವರ ಮನೆಗೆ ಸಿಸಿಬಿ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿದ್ದಾರೆ.

ದಿ. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಇಂದು ಬೆಳಿಗ್ಗೆ ಎರಡೂ ಮನೆಗಳಿಗೆ ದಾಳಿ ಮಾಡಲಾಗಿದೆ.

ಮುತ್ತಪ್ಪ ರೈಗೆ ಸೇರಿದ ಎರಡು ಕಡೆ ಸಿಸಿಬಿ ದಾಳಿ ಮಾಡಿದೆ. ಬಿಡದಿ ಮತ್ತು ಬೆಂಗಳೂರಿನ ವೈಯಾಲಿಕಾವಲ್ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮುತ್ತಪ್ಪ ರೈ ಮಗ ರಿಕ್ಕಿ ಮನೆ ಮೇಲೆ ಸಿಸಿಬಿ ದಾಳಿ ಮಾಡಿದ್ದು, ಮನೆಯಲ್ಲಿ ಸಿಸಿಬಿ ಅಧಿಕಾರಿಗಳು ಶೋಧ ಕಾರ್ಯ ಮಾಡುತ್ತಿದ್ದಾರೆ.

ಮುತ್ತಪ್ಪ ರೈ ಮಗ ಡಿಕ್ಕಿ ಡ್ರಗ್ ಪೆಡ್ಲರ್ಸ್ ರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಮನಗರ ಬಿಡದಿಯ ಮನೆಯಲ್ಲಿ ಸಿಸಿಬಿ ಶೋಧ ಕಾರ್ಯ ನಡೆಸುತ್ತಿದೆ. ಎಸಿಬಿ ವೇಣುಗೋಪಾಲ್ ನೇತೃತ್ವದಲ್ಲಿ ರೇಡ್ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಪ್ಸ್ಟೀನ್ ದಾಖಲೆಗಳ ಉಲ್ಲೇಖ, ಹರ್ದೀಪ್ ಪುರಿ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ: ಮಾರ್ಚ್ 9 ರವರೆಗೆ ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ

ಬಾಂಗ್ಲಾದೇಶ ಚುನಾವಣೆಯಲ್ಲಿ BNP ಭರ್ಜರಿ ಗೆಲುವು: ತಾರಿಕ್ ರೆಹಮಾನ್ ಗೆ ಪ್ರಧಾನಿ ಮೋದಿ ಅಭಿನಂದನೆ; ಹೇಳಿದ್ದೇನು?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಗಳಿಗಷ್ಟೇ ತಾತ್ವಿಕ ಒಪ್ಪಿಗೆ, ಸಂಭ್ರಮಾಚರಣೆಗೆ ಬ್ರೇಕ್?: ಪರಮೇಶ್ವರ ಹೇಳಿದ್ದೇನು?

T20 World Cup 2026: ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆಗೆ ಜಯ; 19 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗರೂಗಳನ್ನು ಸೋಲಿಸಿದ ಚೆವ್ರಾನ್‌ಗಳು!

T20 WC: 19 ವರ್ಷಗಳ ನಂತರ ಆಸೀಸ್ ಅನ್ನು ಸೋಲಿಸಿ ಜಿಂಬಾಬ್ವೆ ಮತ್ತೆ ಇತಿಹಾಸ ಸೃಷ್ಟಿ: 3ನೇ ಸ್ಥಾನಕ್ಕೆ ಕುಸಿದ Australia!

SCROLL FOR NEXT