ರಾಜ್ಯ

ರಾಗಿಣಿ, ಆದಿತ್ಯ ಆಳ್ವ, ವಿರೇನ್ ಖನ್ನಾ: ಎತ್ತಣಿಂದೆತ್ತಣ ಸಂಬಂಧ? ಡ್ರಗ್ಸ್ ನಂಟಿನ  ಮಾಹಿತಿ ಇಲ್ಲಿದೆ

Shilpa D

ಬೆಂಗಳೂರು: ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಮತ್ತು ವಿರೇನ್ ಖನ್ನ ಹೆಸರು ಡ್ರಗ್ ಮಾಫಿಯಾದಲ್ಲಿ ಕೇಳಿ ಬಂದಿದ್ದು, ವಿಶೇಷವಾಗಿ ವಲಸಿಗರಿಗೆ ಪೂರೈಕೆ ಮಾಡುತ್ತಿರುವ ವಿಷಯ ಎಲ್ಲರಲ್ಲೂ ಆಘಾತ ಮೂಡಿಸಿದೆ.

ಇತ್ತೀಚೆಗೆ ಕಾಟನ್ ಪೇಟೆ ಪೊಲೀಸರು ಡ್ರಗ್ ಪೆಡ್ಲರ್ ಅನಿಕಾ ಎಂಬಾಕೆಯನ್ನು ಬಂಧಿಸಿದ್ದು, ಆಕೆಯ ಮಾಹಿತಿ ಮೇರೆಗೆ ಆದಿತ್ಯ ಆಳ್ವ, ವೀರೇನ್ ಮತ್ತು ಪ್ರಶಾಂತ್ ರಾಂಕಾ ಎಂಬುವರು ಸೇರಿದಂತೆ ಒಟ್ಟು 12 ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಅನಿಕಾ ಜತೆ ಮೊಹಮದ್ ಅನೂಪ್ ಮತ್ತು ಆರ್. ರವಿಚಂದ್ರನ್ ಎಂಬುವರನ್ನು ಎನ್ ಸಿಬಿ ಬಂಧಿಸಿತ್ತು. ಅನೂಪ್ ಕೊಚ್ಚಿಯವನಾಗಿದ್ದು, ಕೇರಳ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೊಡೆಯೇರಿ ಬಾಲಕೃಷ್ಣ ಅವರ ಮಗನಾಗಿದ್ದಾನೆ.

ಆದಿತ್ಯ ಮತ್ತು ವಿರೇನ್ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದು ಅವರ ಹೆಸರು ಪ್ರಕಟಿಸಿದಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮನವಿ ಮಾಡಿದ್ದಾರೆ.

ಈ ವ್ಯಕ್ತಿಗೆ ಆದಿತ್ಯ ಪರಿಚಯವಿದ್ದು, ವಿರೇನ್ ಬಗ್ಗೆಯೂ ಮಾಹಿತಿಯಿದೆ.  ಹೆಬ್ಬಾಳದ ನಾಗವಾರ ಕೆರೆ ಬಳಿಯಿರುವ ಹೌಸ್ ಆಫ್ ಲೈಫ್ ಎಂಬ ಸ್ಥಳದಲ್ಲಿ ಮದುವೆ ಸೇರಿದಂತೆ ಹಲವು ಕಾರ್ಕ್ರಮಗಳನ್ನು ಆಯೋಜಿಸಲಾಗುತ್ತಿದೆ. “ಹೌಸ್ ಆಫ್ ಲೈಫ್” ಬೆಂಗಳೂರಿನ ‘ಫ್ಲೈ ಡೈನಿಂಗ್’ ಅನುಭವದ ಮೊದಲ ಸ್ಥಳವಾಗಿತ್ತು ಆದರೆ ಕಾನೂನು ಮತ್ತು ಪರಿಸರ ಇಲಾಖೆ ಅನುಮತಿಯಿಲ್ಲದ ಕಾರಣ ಅದು ಮುಂದುವರಿಯಲಿಲ್ಲ.

ಆದಿತ್ಯ ಅವರ ಸ್ನೇಹಿತ ಡಿಸ್ಕೋ ಜಾಕಿಯಾಗಿದ್ದು, ಈತ ರಾಗಿಣಿಗೂ ಸ್ನೇಹಿತನಾಗಿದ್ದಾನೆ, ರಾಗಿಣಿ ಆತನ ಸ್ನೇಹಿತ ರವಿಶಂಕರ್ ಜೊತೆ ಕಾಣಿಸಿಕೊಳ್ಳುತ್ತಿದ್ದಳು, ಈ ಮೂವರು ಕಾಮನ್ ಫ್ರೆಂಡ್ಸ್ ಸ್ಟಾರ್ ಹೋಟೆಲ್ ಗಳಲ್ಲಿ ನಡೆಯುವ ನೈಟ್ ಪಾರ್ಟಿಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದರು.

ರವಿಶಂಕರ್ ಆರ್ ಟಿ ಓ ಗುಮಾಸ್ತನಾಗಿದ್ದು ಡ್ರಗ್ ಕೇಸ್ ನಲ್ಲಿ ಆತನ ಹೆಸರು ಕೇಳಿ ಬಂದಿದೆ, ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಆತನ ವಿರುದ್ಧ ಎಫ್ ಐಆರ್ ದಾಖಲಿಸಿಲ್ಲ.

ನಗರದ ಎಲ್ಲಾ ಸ್ಟಾರ್ ಹೋಟೆಲ್ ಗಳಲ್ಲಿ ವಿರೇನ್ ಚಿರಪರಿಚಿತ, ಆದಾಯದ ಆಧಾರದ ಮೇಲೆ ಅತಿಥಿಗಳನ್ನು ಪಟ್ಟಿ ಅವರಿಗೆ ಆಹ್ವಾನ ನೀಡಿ ಪಾರ್ಟಿ ಕರೆಯುತ್ತಿದ್ದನು. ದೊಡ್ಡ ದೊಡ್ಡ ಮಟ್ಟದ ಪಾರ್ಟಿಗಳನ್ನು ಆಯೋಜಿಸುತ್ತಿದ್ದ, ಆ ಪಾರ್ಟಿಯಲ್ಲಿ ಕೆಲವು ನಿರ್ಧಿಷ್ಟ ವರ್ಗದ ಜನರಿಗೆ ಮಾತ್ರ ಆಹ್ವಾನ ನೀಡುತ್ತಿದ್ದ. ದಶಕಗಳಿಂದಲೂ ಆತ ಪಾರ್ಟಿಗಳನ್ನು ಆಯೋಜಿಸುತ್ತಾ ಬಂದಿದ್ದಾನೆ. ಬೆಂಗಳೂರು ಕ್ಲಬ್ ಗಳಲ್ಲಿಯೂ ಆತ ಚಿರಪರಿಚಿತ.

ಡ್ರಗ್ ಮಾಫಿಯದಲ್ಲಿ ಹಲವು ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳ ಖ್ಯಾತನಾಮರ ಹೆಸರುಗಳು ಹೊರಬರುವ ಸಾಧ್ಯತೆಗಳಿವೆ.  ಪಾರ್ಟಿಗಳಲ್ಲಿ ಡ್ರಗ್ಸ್ ಸೇವಿಸುವುದುರಹಸ್ಯವಾಗೇನು ಉಳಿದಿಲ್ಲ, ಪೊಲೀಸರು ಡ್ರಗ್ ಡೀಲರ್ ಗಳನ್ನು ಮೊದಲು ಮಟ್ಟ ಹಾಕಬೇಕು.

ಡ್ರಗ್ ಮಾಫಿಯಾದಲ್ಲಿ ಹೆಸರು ಕೇಳಿಬಂದ ನಂತರ ಆದಿತ್ಯ ಆಳ್ವ ಬೆಂಗಳೂರಿನಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರ ಬಾಡಿಗಾರ್ಡ್ ಗಳನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

SCROLL FOR NEXT