ಬಿಬಿಎಂಪಿ ಕಚೇರಿ 
ರಾಜ್ಯ

'ನಾಪತ್ತೆಯಾಗಿರುವ 50 ಸಾವಿರ ಕೋಟಿ ರು.ಮೌಲ್ಯದ ಆಸ್ತಿ ವಶಕ್ಕೆ ಪಡೆದರೇ ಬಿಬಿಎಂಪಿ ಆದಾಯ ದುಪ್ಪಟ್ಟಾಗಲಿದೆ'

ಬಿಬಿಎಂಪಿಗೆ ಸೇರಿದ ಸುಮಾರು 50 ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರೆ ಪಾಲಿಕೆ ವರಮಾನ ದುಪ್ಪಟ್ಟಾಗಲಿದೆ ಎಂದು ಬಿಬಿಎಂಪಿ ಹಣಕಾಸು ಸ್ಥಾತಿ ಸಮಿತಿ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು: ಬಿಬಿಎಂಪಿಗೆ ಸೇರಿದ ಸುಮಾರು 50 ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರೆ ಪಾಲಿಕೆ ವರಮಾನ ದುಪ್ಪಟ್ಟಾಗಲಿದೆ ಎಂದು ಬಿಬಿಎಂಪಿ ಹಣಕಾಸು ಸ್ಥಾತಿ ಸಮಿತಿ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಜನಾಗ್ರಹ ಸಂಘಟನೆ ಶನಿವಾರ ಆಯೋಜಿಸಿದ್ದ ‘ನಮ್ಮ ನಾಯಕರು’ ವೆಬಿನಾರ್ ಕಾರ್ಯಕ್ರಮದಲ್ಲಿ ಕಳೆದ ಅವಧಿಯ ಮೇಯರ್‌ಗಳು, ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಪಾಲಿಕೆ ಆಡಳಿತ ಸುಧಾರಣೆ ಬಗ್ಗೆ ಸಲಹೆ ನೀಡಿದರು. ಐದು ವರ್ಷಗಳ  ಅಧಿಕಾರವಧಿಯ ಅನುಭವಗಳನ್ನು ಹಂಚಿಕೊಂಡರು.

ಇದಕ್ಕೆ ಧ್ವನಿಗೂಡಿಸಿದ ದೊಮ್ಮಲೂರು ವಾರ್ಡ್‌ನ ಸದಸ್ಯರಾಗಿದ್ದ ಸಿ.ಆರ್.ಲಕ್ಷ್ಮೀನಾರಾಯಣ, ‘ಪಾಲಿಕೆಯ ಕಾನೂನು ಕೋಶ ಗಟ್ಟಿಯಾದಷ್ಟೂ ಬಿಬಿಎಂಪಿ ಬಲಿಷ್ಠವಾಗಲಿದೆ. ಆ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ’ ಎಂದರು. ಮೋಹನ್‌ಕುಮಾರ್, ‘ನಗರದ ಹಲವೆಡೆ ಪಾಲಿಕೆ ಆಸ್ತಿಗಳಿವೆ. ಅವುಗಳನ್ನು ವಶಕ್ಕೆ ಪಡೆಯಬೇಕು. ಮೈಕೊ ಕಾರ್ಖಾನೆ ಎದುರಿನಲ್ಲಿರುವ 10 ಎಕರೆ ಜಾಗ ಪಾಲಿಕೆ ಸ್ವತ್ತು. ಅದರ ಮೌಲ್ಯ ಸುಮಾರು ₹500 ಕೋಟಿ’ ಎಂದು ಉದಾಹರಣೆ ನೀಡಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ 1,400 ಕಿ.ಮೀ. ಉದ್ದದ ಪ್ರಮುಖ ರಸ್ತೆ ಜಾಲ, 840 ಕಿ.ಮೀ ಉದ್ದ ರಾಜಕಾಲುವೆ ಜಾಲವಿದೆ ಇವೆಲ್ಲವುಗಳ ನಿರ್ವಹಣೆ ಜತೆಗೆ ಹೊಸ ಯೋಜನೆಗಳ ಅನುಷ್ಠಾನಕ್ಕೆ ಪಾಲಿಕೆ ಆರ್ಥಿಕವಾಗಿ ಇನ್ನಷ್ಟು ಬಲಿಷ್ಠವಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು. 

‘ಮುಂಬೈ ಪಾಲಿಕೆಗೆ ಹೋಲಿಸಿದರೆ ಬಿಬಿಎಂಪಿ ಬಜೆಟ್ ಗಾತ್ರ ತೀರಾ ಕಡಿಮೆ. ಅಲ್ಲಿ ಪಾಲಿಕೆ ಆಸ್ತಿ ಬೇರೆಯವರ ಪಾಲಾಗಲು ಬಿಟ್ಟಿಲ್ಲ. ನಮ್ಮಲ್ಲಿ ಪಾಲಿಕೆ ಆಸ್ತಿ ವಿವರವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸುವುದೇ ಇಲ್ಲ. ಸುಮಾರು 40 ಸಾವಿರ ಕೋಟಿಯಿಂದ 50 ಸಾವಿರ ಕೋಟಿಯಷ್ಟು ಬೆಲೆಬಾಳುವ ಪಾಲಿಕೆಯ  ಆಸ್ತಿಗಳು ಯಾರದೋ ಸ್ವಾಧೀನದಲ್ಲಿವೆ. ಇವುಗಳನ್ನು ವಶಕ್ಕೆ ಪಡೆಯುವ ಪ್ರಯತ್ನಗಳೇ ಆಗಿಲ್ಲ. ವರಮಾನ ಹೆಚ್ಚಿಸಿಕೊಳ್ಳಲು ಈ ಅವಕಾಶ ಬಳಸುವ ಇಚ್ಛಾಶಕ್ತಿ ಅಧಿಕಾರಿಗಳಿಗೆ ಇರಬೇಕು ಎಂದು ಮಾಜಿ ಮೇಯರ್ ಗೌತಮ್ ಕುಮಾರ್ ಜೈನ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!