ರಾಜ್ಯ

2 ಪ್ರತ್ಯೇಕ ಪ್ರಕರಣ: ಐವರ ಬಂಧನ, 17 ಕೆಜಿ ಗಾಂಜಾ, 2 ಕೆಜಿ ಚರಸ್ ವಶಕ್ಕೆ

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ನಗರದಲ್ಲಿ ಪೊಲೀಸರ ದಾಳಿ ಕೂಡ ಮುಂದುವರೆದಿದ್ದು, 2 ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಮತ್ತು ಚರಸ್ ಮಾರುತ್ತಿದ್ದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಂತೆಯೇ ಬಂಧಿತರಿಂದ 17.5ಕೆಜಿ ಗಾಂಜಾ ಮತ್ತು 2 ಕೆಜಿ ಚರಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ 4.5 ಲಕ್ಷ ನಗದನ್ನೂ ಕೂಡ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ನಗರದ ಮಾಗಡಿ ರಸ್ತೆಯಲ್ಲಿರುವ ಕಾವೇರಿಪುರ ಜಂಕ್ಷನ್ ನಲ್ಲಿರುವ ಗಾಂಜಾ ಮಾರಾಟಗಾರರ ಮನೆಗಳ ಮೇಲೆ ದಾಳಿ ಮಾಡಿದ ಪೊಲೀಸರು, ಪುನೀತ್ ಎಂ (30 ವರ್ಷ)ಮತ್ತು ಆನಂದ್ ಕುಮಾರ್ (39 ವರ್ಷ) ಎಂಬುವವರನ್ನು ಬಂಧಿಸಿದ್ದು, ಬಂಧಿತರಿಂದ ಸುಮಾರು 3.5 ಲಕ್ಷ ರೂ ಮೌಲ್ಯದ 17 ಕೆಜಿ ಗಾಂಜಾ ವಶಕ್ಕೆ  ಪಡೆದಿದ್ದಾರೆ. ಈ ಗಾಂಜಾವನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲುಬಂಧಿತರು ಮುಂದಾಗಿದ್ದರು. ಆದರೆ ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಬ್ಬರೂ ವಿಧ್ಯಮಾನ್ಯ ನಗರದ ನಿವಾಸಿಗಳು ಎಂದು ಹೇಳಲಾಗಿದೆ.

ಈ ವೇಳೆ ಬಂಧಿತ ಆನಂದ್ ನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಆತ ಆಂಧ್ರ ಪ್ರದೇಶದಿಂದ ಮಾರಿಜುವಾನಾ ತರಿಸುತ್ತಿದ್ದೆ ಎಂದು ಹೇಳಿದ್ದಾನೆ. ಅಲ್ಲದೆ ತನ್ನ ಈ ಕೃತ್ಯದಲ್ಲಿ ಭಾಗಿಯಾದ ಹಲವರ ಹೆಸರನ್ನೂ ಕೂಡ ಈತ ಬಾಯಿ ಬಿಟ್ಟಿದ್ದು, ಅವರ ಬಂಧನಕ್ಕೂ ಪೊಲೀಸರು ಕಾರ್ಯಾಚರಣೆ ರೂಪಿಸಿದ್ದಾರೆ.  ಇನ್ನು ಬಂಧಿತ ಮತ್ತೋರ್ವ ಆರೋಪಿ ಪುನೀತ್ ಈ ಹಿಂದೆ ಕೂಡ ಇದೇ ಗಾಂಜಾ ಮಾರುತ್ತಿದ್ದ ಆರೋಪದ ಮೇರೆಗೆ ಬಂಧಿತನಾಗಿದ್ದ. 

ಅಂತೆಯೇ ಮತ್ತೊಂದು ಯಶವಂತಪುರ ಪೊಲೀಸರು ಕಾರಿನಲ್ಲಿ ಹಶೀಶ್ ಮತ್ತು ಗಾಂಜಾ ಸಾಗಿಸುತ್ತಿದ್ದ ಆರೋಪದ ಮೇರೆಗೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ಒಂದು ಲಕ್ಷ ರೂ ಮೌಲ್ಯದ 500 ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಜೆಪಿ ಪಾರ್ಕ್ ಲೇಔಟ್ ನ  ಮೊಹಮ್ಮದ್ ಸಲೀಮ್, (26), ಸೈಯದ್ ತಾಂಜಿಮ್, (32) ಮತ್ತು ಮೊಹಮ್ಮದ್ ಶಿಬಾನ್, (21) ಎಂದು ಗುರುತಿಸಲಾಗಿದೆ. 

SCROLL FOR NEXT