ಬೆಂಗಳೂರು: ಮಾದಕ ವಸ್ತು ಮಾರಾಟಗಾರರ ಬೃಹತ್ ಜಾಲವೊಂದನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ 50 ಲಕ್ಷ ರೂ.ಮೌಲ್ಯದ 90 ಕೆ.ಜಿ.ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕಾಡುಗೋಡಿ ಬೆಳತ್ತೂರು ಕಾಲೋನಿ, ಜ್ಯೂನಿಯರ್ ಕಾಲೇಜು ಹತ್ತಿರ ನಿವಾಸಿ ಆಜಾಮ್ ಪಾಷ (25), ಬೆಳತ್ತೂರು ಅಯ್ಯಪ್ಪ ದೇವಸ್ಥಾನದ ರಸ್ತೆ ನಿವಾಸಿ ಮಸ್ತಾನ್ ವಾಲಿ (25), ಬೆಂಗಳೂರು ಗ್ರಾಮಾಂತರ, ಹೊಸಕೋಟೆ ಎ ಆರ್. ಎಕ್ಸ್ ಟೆಂಕ್ಷನ್ ನಿವಾಸಿ ಮುಹಮ್ಮದ್ ಅಬ್ಬಾಸ (27) ಬಂಧಿತ ಆರೋಪಿಗಳು.
ಬೆಂಗಳೂರು ನಗರವನ್ನು ಮಾದಕವಸ್ತು ಮುಕ್ತ ನಗರವಾಗಿ ಮಾಡುವ ಉದ್ದೇಶದಿಂದ ಡ್ರಗ್ಸ್ ಸೇವನೆ, ಅಕ್ರಮ ಸಾಗಾಟ, ಸರಬರಾಜು, ಮಾರಾಟಗಾರರ ವಿರುದ್ಧ ಸಿಸಿಬಿ ಕಾರ್ಯಾಚರಣೆ ಕೈಗೊಂಡಿದೆ.