ರಾಜ್ಯ

47 ಬಾರಿ ಸಂಚಾರಿ ನಿಯಮ ಉಲ್ಲಂಘನೆ: ಬೈಕ್ ಮಾಲೀಕನಿಂದ 23,000 ರೂ. ದಂಡ ವಸೂಲಿ

Lingaraj Badiger

ಬೆಂಗಳೂರು: ಬೆಂಗಳೂರು ನಗರದಲ್ಲಿ 47 ಬಾರಿ ಸಂಚಾರ ನಿಯಮ ಉಲ್ಲಂಘಿಸಿದಕ್ಕಾಗಿ ದ್ವಿಚಕ್ರ ವಾಹನ ಮಾಲೀಕನಿಂದ ಸಂಚಾರಿ ಪೊಲೀಸರು ಬರೋಬ್ಬರಿ 23,000 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಸಂಚಾರ ಪೂರ್ವ ವಿಭಾಗದ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಇನ್ಸ್ ಪೆಕ್ಟರ್ ಉಮಾ ಮಹೇಶ್ ಎಸ್ ವಿ ಅವರು ವಾಹನ ಮಾಲೀಕನಿಂದ ದೊಡ್ಡ ಮೊತ್ತದ ದಂಡ ವಸೂಲಿ ಮಾಡಿದ್ದಾರೆ.

ನಗರದಲ್ಲಿ ಸುಮಾರು 47 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಕೆಎ-01-ಹೆಚ್ ಕೆ -2716 ದ್ವಿ-ಚಕ್ರ ವಾಹನದ ಮಾಲೀಕರಿಂದ ಬರೋಬ್ಬರಿ ಅವರು 23,000 ದಂಡ ವಸೂಲಿ ಮಾಡಿದ್ದಾರೆ.

ಎರಡು ದಿನಗಳಿಂದ ಹಿಂದೆ ಆಡುಗೋಡಿ ಸಂಚಾರ ಪೊಲೀಸರು, 32 ಬಾರಿ ಸಂಚಾರ ನಿಯಮ ಉಲ್ಲಂಘಿಸಿದಕ್ಕಾಗಿ ದ್ವಿಚಕ್ರ ವಾಹನದ ಮಾಲೀಕನಿಂದ ಬರೋಬ್ಬರಿ 15,000 ರೂ. ದಂಡ ವಸೂಲಿ ಮಾಡಿದ್ದರು.

SCROLL FOR NEXT