ರಾಜ್ಯ

ಬೆಂಗಳೂರು: ಆಸ್ತಿ ವಿಚಾರವಾಗಿ ಗಲಾಟೆ, ಬ್ಯಾಟ್ ನಿಂದ ತಂಗಿಯನ್ನು ಹೊಡೆದುಕೊಂದ ಲಾಯರ್, ಅನಾಥರಾದ ಮಕ್ಕಳು!

ಬೆಂಗಳೂರು: ಆಸ್ತಿ ವಿಚಾರವಾಗಿ ಗಲಾಟೆ, ಬ್ಯಾಟ್ ನಿಂದ ತಂಗಿಯನ್ನು ಹೊಡೆದುಕೊಂದ ಲಾಯರ್, ಅನಾಥರಾದ ಮಕ್ಕಳು!
Published On :

ಬೆಂಗಳೂರು: ಆಸ್ತಿ ವಿಚಾರವಾಗಿ ನಡೆದ ಗಲಾಟೆ ವೇಳೆ ತನ್ನ ಸ್ವಂತ ತಂಗಿಯ ತಲೆಗೆ ಬ್ಯಾಟ್‌ನಿಂದ ಹೊಡೆದು ಅಣ್ಣನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ಇಂದು ಬೆಳಗ್ಗೆ 11:30ರ ಸುಮಾರಿಗೆ ಈ ಘಟನೆ ನಡೆದಿದೆ.

ಮೃತಳನ್ನು 39 ವರ್ಷದ ಮೀನಾಕ್ಷಿ ಎಂದು ಗುರುತಿಸಲಾಗಿದೆ. ಕೆಲ ತಿಂಗಳುಗಳ ಹಿಂದೆ ಗಂಡನನ್ನು ಬಿಟ್ಟು ತನ್ನ ಎರಡು ಮಕ್ಕಳ ಜೊತೆ ಮೀನಾಕ್ಷಿ ತವರು ಮನೆ ಸೇರಿದ್ದಳು. ಆರೋಪಿ ಜಯರಾಮ್ ಮನೆಯ ಎದುರಿನಲ್ಲೇ ಇದ್ದ ಶೀಟ್ ಮನೆಯಲ್ಲಿ ಮೀನಾಕ್ಷಿ ತಮ್ಮ ಮಕ್ಕಳೊಂದಿಗೆ ವಾಸವಿದ್ದರು. ಆದರೆ, ತಂಗಿ ಅಲ್ಲಿ ಇರುವುದನ್ನು ಸಹಿಸದ ಅಣ್ಣ ಜಯರಾಮ್, ಮನೆ ಖಾಲಿ ಮಾಡುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದನು.

ಇಂದು ಬೆಳಗ್ಗೆ ಜಯರಾಮ್ ಪತ್ನಿ ಕಿಟಕಿಯಿಂದ ನೀರು ಎರಚಿದ್ದಾರೆ. ಈ ವಿಚಾರವಾಗಿ ಜಯರಾಮ್ ಪತ್ನಿ ಹಾಗೂ ಮೀನಾಕ್ಷಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಿಚಾರ ತಿಳಿದು ಆಕ್ರೋಶಿತನಾದ ಜಯರಾಮ್ ಏಕಾಏಕಿ ಮೀನಾಕ್ಷಿ ತಲೆಗೆ ಬ್ಯಾಟ್‌ನಿಂದ ಬಲವಾಗಿ ಹೊಡೆದಿದ್ದಾನೆ. ಇನ್ನು ಗಂಭೀರವಾಗಿ ಗಾಯಗೊಂಡ ಮೀನಾಕ್ಷಿ ಮೃತಪಟ್ಟಿದ್ದಾಳೆ. ತಾಯಿಯ ಸಾವಿನಿಂದ ಇಬ್ಬರು ಮಕ್ಕಳು ಈಗ ಅನಾಥರಾಗಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಂದೂರು ಠಾಣೆ ಪೊಲೀಸರು ಜಯರಾಮ್‌ನನ್ನು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.