ಡ್ರಗ್ಸ್ ಪ್ರಕರಣ 
ರಾಜ್ಯ

ಪಾರ್ಟಿಯಲ್ಲಿ ಒಮ್ಮೆ ನಟಿ ಅನುಶ್ರೀಯನ್ನು ನೋಡಿದ್ದೆ: ಆಸ್ಕಾ

ಸ್ಯಾಂಡಲ್ ವುಡ್ ನಟಿ, ನಿರೂಪಕಿ ಅನುಶ್ರೀ ಅವರನ್ನು ತಾನು ಈ ಹಿಂದೆ ಪಾರ್ಟಿಯೊಂದರಲ್ಲಿ ನೋಡಿದ್ದೆ ಎಂದು ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ಆಸ್ಕಾ ಸಿಸಿಬಿ ಅಧಿಕಾರಿಗಳ ಬಾಯಿ ಬಿಟ್ಟಿದ್ದಾಳೆ ಎಂದು ಹೇಳಲಾಗಿದೆ.

ಮಂಗಳೂರು: ಸ್ಯಾಂಡಲ್ ವುಡ್ ನಟಿ, ನಿರೂಪಕಿ ಅನುಶ್ರೀ ಅವರನ್ನು ತಾನು ಈ ಹಿಂದೆ ಪಾರ್ಟಿಯೊಂದರಲ್ಲಿ ನೋಡಿದ್ದೆ ಎಂದು ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ಆಸ್ಕಾ ಸಿಸಿಬಿ ಅಧಿಕಾರಿಗಳ ಬಾಯಿ ಬಿಟ್ಟಿದ್ದಾಳೆ ಎಂದು ಹೇಳಲಾಗಿದೆ.

ಮಾದಕ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಸಿಸಿಬಿ ವಿಚಾರಣೆ ಎದುರಿಸಿದ್ದ ಸ್ಯಾಂಡಲ್ ವುಡ್ ನಟಿ, ನಿರೂಪಕಿ ಅನುಶ್ರೀಗೆ ಬಂಧಿತ ಆಸ್ಕಾ ಮುಳುವಾಗುವ ಸಾಧ್ಯತೆ ಇದೆ.

ಈ ಬಗ್ಗೆ ಯುಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಪ್ರಸ್ತುತ ಸಿಸಿಬಿ ಅಧಿಕಾರಿಗಳ ವಶದಲ್ಲಿರುವ ಮಣಿಪುರದ ಮೂಲದ ಆಸ್ಕಾ, ವಿಚಾರಣೆ ವೇಳೆ ತಾನು ಅನುಶ್ರೀಯನ್ನು ಪಾರ್ಟಿಯಲ್ಲಿ ನೋಡಿದ್ದಾಗಿ ಹೇಳಿದ್ದಾಳೆ ಎನ್ನಲಾಗಿದೆ. ಮಂಗಳೂರು ಸಿಸಿಬಿ ಪೊಲೀಸರ ವಶದಲ್ಲಿರುವ ಮಣಿಪುರದ ಮೂಲದ ಆಸ್ಕಾ, ತಾನೊಮ್ಮೆ ಅನುಶ್ರೀಯನ್ನು ಪಾರ್ಟಿಯಲ್ಲಿ ನೋಡಿದ್ದಾಗಿ ವಿಚಾರಣೆ ವೇಳೆ ತನಿಖಾಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ.

ಆಸ್ಕಾ ಮಾಹಿತಿ ಹಿಡಿದು ಮುಂಬೈ ಆಪರೇಷನ್​ಗೆ ಹೊರಟ ಮಂಗಳೂರು ಸಿಸಿಬಿ
ಮೂಲಗಳ ಪ್ರಕಾರ ಪ್ರಸ್ತುತ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿರುವ ಅಸ್ಕಾ ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದು, ತನಗೆ ಬಾಲಿವುಡ್​ನ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಟನ ಜೊತೆ  ನಂಟದೆ ಎಂದು ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ಇದೇ ಮಾಹಿತಿಯನ್ನಾಧರಿಸಿ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಮುಂಬೈಗೆ ಹೊರಟಿದ್ದಾರೆ ಎನ್ನಲಾಗಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

SCROLL FOR NEXT