ರಾಜ್ಯ

ಮಡಿಕೇರಿ: ನಾಪೋಕ್ಲು ಪಟ್ಟಣದಲ್ಲಿ ಅಪರೂಪದ ಕಾಡು ಪಾಪ ಪತ್ತೆ

Raghavendra Adiga

ಮಡಿಕೇರಿ: ಅಳಿವಿನಂಚಿನಲ್ಲಿರುವ ಕಾಡು ಪಾಪವೊಂದನ್ನು ಕೊಡಗಿನ ನಾಪೋಕ್ಲು ಪಟ್ಟಣ ಪ್ರದೇಶದಲ್ಲಿ ಪತ್ತೆ ಮಾಡಲಾಗಿದೆ/

ಫ್ರೀಲ್ಯಾನ್ಸ್ ಪತ್ರಕರ್ತರಾದ, ನಾಪೋಕ್ಲುವಿನ ರಮ್ಯಾ ಫೋಟೋ ಸ್ಟುಡಿಯೊ ಮಾಲೀಕ ದುಗ್ಗಲಾ ಸದಾನಂದ್ ಈ ಕಾಡು ಪಾಪವನ್ನು ಪತ್ತೆ ಮಾಡಿದ್ದಾರೆ. ಅವರು ತಮ್ಮ ಸ್ಟುಡಿಯೊದ ಮುಂದೆ ಬೆಳಿಗ್ಗಿನ ಸಮಯದಲ್ಲಿ ಈ ಆಪರೂಪದ ಪ್ರಾಣಿಯನ್ನು ಕಂಡಿದ್ದಾರೆ.

ಕಾಡು ಪಾಪವನ್ನು ಮುಟ್ಟಲು ಹೋದಾಗ ಅದು ಅವರಿಗೆ ಕಚ್ಚಿದೆ. ಆದರೂ ಸಹ ಕಡೆಗೊಮ್ಮೆ ಅದನ್ನು ಪೆಟ್ಟಿಯಲ್ಲಿ ಹಿಡಿದಿಡಲು ಅವರು ಯಶಸ್ವಿಯಾಗಿದ್ದಾರೆ.

ಬಳಿಕ ಕಾಡು ಪಾಪವನ್ನು ಭಾಗಮಂಡಲ ವಲಯದ ಅರಣ್ಯ ಅಧಿಕಾರಿ ದೇವರಾಜ್ ಅವರಿಗೆ ಹಸ್ತಾಂತರಿಸಲಾಯಿತು. ವನ್ಯಜೀವಿ ಕಾಯ್ದೆ, 1972 ರಲ್ಲಿ ಕಾಡು ಪಾಪವನ್ನು ಅಳಿವಿನಂಚಿನಲ್ಲಿರುವ ಜೀವಿಗಳ ಸಾಲಿನಲ್ಲಿ ಪಟ್ಟಿ ಮಾಡಲಾಗಿದೆ.

SCROLL FOR NEXT