ಸಾಂದರ್ಭಿಕ ಚಿತ್ರ 
ರಾಜ್ಯ

ಭೂಮಿಯ ಅಲಭ್ಯತೆಯಿಂದ ಸರ್ಕಾರದ ಗೋಶಾಲೆ ನಿರ್ಮಾಣ ಯೋಜನೆಗೆ ಹಿನ್ನಡೆ

ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದ ಕರ್ನಾಟಕ ಸರ್ಕಾರ ಇದೀಗ ಗೋಶಾಲೆಗಳ ನಿರ್ಮಾಣಕ್ಕೆ ಭೂಮಿ ಹುಡುಕಲು ಹರಸಾಹಸ ಪಡುತ್ತಿದೆ. ಹಲವಾರು ಜಿಲ್ಲೆಗಳಲ್ಲಿ ಖಾಲಿ ಇರುವ ಸರ್ಕಾರಿ ಭೂಮಿ ಒಂದೋ ಒತ್ತುವರಿ ಮಾಡಲ್ಪಟ್ಟಿದೆ ಇಲ್ಲವೇ ಇತರೆ ಉದ್ದೇಶಗಳಿಗೆ ಬಳಸಲ್ಪಡುತ್ತಿದೆ. 

ಬೆಂಗಳೂರು: ಈ ಹಿಂದೆ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದ ಕರ್ನಾಟಕ ಸರ್ಕಾರ ಇದೀಗ ಗೋಶಾಲೆಗಳ ನಿರ್ಮಾಣಕ್ಕೆ ಭೂಮಿ ಹುಡುಕಲು ಹರಸಾಹಸ ಪಡುತ್ತಿದೆ. ಹಲವಾರು ಜಿಲ್ಲೆಗಳಲ್ಲಿ ಖಾಲಿ ಇರುವ ಸರ್ಕಾರಿ ಭೂಮಿ ಒಂದೋ ಒತ್ತುವರಿ ಮಾಡಲ್ಪಟ್ಟಿದೆ ಇಲ್ಲವೇ ಇತರೆ ಉದ್ದೇಶಗಳಿಗೆ ಬಳಸಲ್ಪಡುತ್ತಿದೆ. 

ಪ್ರಸ್ತುತ ರಾಜ್ಯದಲ್ಲಿ ಒಟ್ಟು 188 ಗೋಶಾಲೆಗಳಿವೆ. ಅವುಗಳಲ್ಲಿ ಬಹುತೇಕ ಗೋಶಾಲೆಗಳನ್ನು ಧಾರ್ಮಿಕ ಮಠಗಳು ಹಾಗೂ ಎನ್ ಜಿ ಓಗಳು ನಡೆಸುತ್ತಿವೆ. 

ಈ ಹಿಂದೆ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಪಶುಸಂಗೋಪನಾ ಸಚಿವರಾಗಿದ್ದ ಪ್ರಭು ಚೌಹಾಣ್ ಅವರು ಸರ್ಕಾರ ಪ್ರತಿ ತಾಲ್ಲೂಕಿನಲ್ಲಿ ಎರಡು ಗೋಶಾಲೆಗಳನ್ನು ನಿರ್ಮಿಸುವುದಾಗಿ ತಿಳಿಸಿದ್ದರು. ನಂತರದ ದಿನಗಳಲ್ಲಿ ಈ ಸಂಖ್ಯೆ ಜಿಲ್ಲೆಗೆ ಒಂದು ಗೋಶಾಲೆಯಾಗಿ ಇಳಿಕೆಯಾಗಿತ್ತು. ನಂತರ ಜಿಲ್ಲೆಗೊಂದರಂತೆಯೂ ಗೋಶಾಲೆ ನಿರ್ಮಾಣಕ್ಕೆ ಸೂಕ್ತ ಭೂಮಿ ಲಭ್ಯವಾಗದೆ ತನ್ನ ಮಾತನ್ನು ಉಳಿಸಿಕೊಳ್ಳಲಾಗದ ಸ್ಥಿತಿ ಒದಗಿತು. 

ಸಚಿವ ಪ್ರಭು ಚೌಹಾಣ್ 'ಗೋಶಾಲೆಗಳು ಮತ್ತು ಗೋಮಾಳಗಳನ್ನು ನಿರ್ಮಿಸಲು ನಮಗೆ ಕನಿಷ್ಟ 50- 100 ಎಕರೆಗಳಷ್ಟು ಭೂಮಿ ಬೇಕು. 5- 15 ಜಿಲ್ಲೆಗಳಲ್ಲಿ ಭೂಮಿ ಸಿಗಬಹುದಷ್ಟೆ' ಎಂದು ಹೇಳಿದ್ದರು. ಅವೆಲ್ಲದರ ಹೊರತಾಗಿಯೂ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆಗಳ ನಿರ್ಮಾಣಕ್ಕೆ ಕಂಕಣಬದ್ಧವಾಗಿದೆ ಎಂದರು. ಅವುಗಳಲ್ಲಿ ಹಲವು ಗೋಶಾಲೆಗಳು ಅಕ್ಟೋಬರ್ 2 ಒಳಗಾಗಿ ತೆರೆಯಲಿವೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದ್ದಾರೆ. ಈ ನಡುವೆ ಕಂದಾಯ ಇಲಾಖೆ ಈ ಉದ್ದೇಶಕ್ಕಾಗಿ ಭೂಮಿ ನೀಡುವ ಆಶಾವಾದ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಇಲಾಖೆ, ಹಲವೆಡೆಗಲಲ್ಲಿ ಇಲಾಖೆ ಧಾರ್ಮಿಕ ಸಂಸ್ಥೆಗಳು, ಮಠಗಳಿಗೆ ಈಗಾಗಲೇ ಭೂಮಿಯನ್ನು ನೀಡಿದ್ದು, ಹಲವು ಬಳಕೆಯಾಗದೆ ಉಳಿದಿವೆ. ಪಶುಸಂಗೋಪನಾ ಇಲಾಖೆಗೆ ನೀಡಲು ಸೂಕ್ತ ಭೂಮಿ ಸಿಗುತ್ತಿಲ್ಲ ಎಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT