ಸಂಗ್ರಹ ಚಿತ್ರ 
ರಾಜ್ಯ

ಕೊರೋನಾ 3ನೇ ಅಲೆ ವೇಳೆ ಮಕ್ಕಳ ಪ್ರಕರಣಗಳ ಮೇಲೆ ಹೆಚ್ಚಿನ ಗಮನಹರಿಸಬೇಕಿದೆ: ವೈದ್ಯರು

ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಆಸ್ಪತ್ರೆಗಳು ಸಜ್ಜಾಗುತ್ತಿದ್ದು, ಈ ನಡುವಲ್ಲೇ ಈ ಬಾರಿ ಮೂಲಭೂತ ಸೌಕರ್ಯಗಳಿಗಿಂತಲೂ ಮಾನವ ಸಂಪನ್ಮೂಲದ ಅಗತ್ಯ ಹೆಚ್ಚಾಗಿ ಬೀಳಲಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. 

ಬೆಂಗಳೂರು: ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಆಸ್ಪತ್ರೆಗಳು ಸಜ್ಜಾಗುತ್ತಿದ್ದು, ಈ ನಡುವಲ್ಲೇ ಈ ಬಾರಿ ಮೂಲಭೂತ ಸೌಕರ್ಯಗಳಿಗಿಂತಲೂ ಮಾನವ ಸಂಪನ್ಮೂಲದ ಅಗತ್ಯ ಹೆಚ್ಚಾಗಿ ಬೀಳಲಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. 

ಸೋಂಕಿಗೊಳಗಾದ ಮಕ್ಕಳನ್ನು ಒಬ್ಬಂಟಿಯಾಗಿ ಬಿಡಲು ಸಾಧ್ಯವಿಲ್ಲ. ಮಕ್ಕಳ ಜೊತೆಗೆ ಪೋಷಕರು ಅಥವಾ ಸಂಬಂಧಿಕರು ಪಿಪಿಇ ಕಿಟ್ ಹಾಕಿಕೊಂಡು ಇರಬೇಕು. ಆ ಪಿಪಿಇ ಕಿಟ್ ಗಳನ್ನು ಪ್ರತೀನಿತ್ಯ ಬದಲಿಸುತ್ತಿರಬೇಕು. ಪಿಪಿಇ ಕಿಟ್ ಹಾಕಿಕೊಂಡು ಮಕ್ಕಳ ಹಾರೈಕೆ ಹೇಗೆ ಮಾಡಬೇಕು, ಪಿಪಿಇ ಕಿಟ್ ಗಳನ್ನು ಯಾವ ರೀತಿ ಬಳಕೆ ಮಾಡಬೇಕೆಂಬ ತರಬೇತಿಯನ್ನೂ ಅವರಿಗೆ ನೀಡಬೇಕಾಗುತ್ತದೆ. ಮಕ್ಕಳನ್ನು ನೋಡಿಕೊಳ್ಳಲು ಬರುವ ಪೋಷಕರಿಗೆ ಊಟ ಹಾಗೂ ವಸತಿಗೆ ವ್ಯವಸ್ಥೆಗಳನ್ನು ಕಲ್ಪಿಸಬೇಕಾಗುತ್ತದೆ ಎಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. 

ಸಾಮಾನ್ಯವಾಗಿ ಚಿಕ್ಕ ಮಕ್ಕಳು ಇಂಟ್ರಾವೆನಸ್ (ಐವಿ)ಲೈನ್ ಇಂಜೆಕ್ಷನ್ ಕಿತ್ತು ಹಾಕಿ ಬಿಡುತ್ತಾರೆ. ಈ ವೇಳೆ ಮರಳಿ ಹಾಕಲು ನರ್ಸ್ ಗಳಿಗೆ ಸಮಯ ಬೇಕಾಗುತ್ತದೆ. ಮಕ್ಕಳು ಒಂದು ಜಾಗದಲ್ಲಿ ಕುಳಿತುಕೊಳ್ಳುವುದಿಲ್ಲ. ಅವರನ್ನು ಸಮಾಧಾನ ಪಡಿಸಲು ಜನರು ಬೇಕು. ಗಲೀಜು ಮಾಡಿಕೊಂಡಾಗ ಸ್ವಚ್ಛಗೊಳಿಸಲು ಸಿಬ್ಬಂದಿಗಳು ಬೇಕು. ಕೋವಿಡ್ ಕೇರ್ ಕೇಂದ್ರಗಳಲ್ಲಿ ಮಕ್ಕಳು ಬಿಝಿಯಾಗಿರುವಂತೆ ಮಾಡಲು ಟಿವಿ, ಗೇಮ್, ಆಟಿಕೆ ವಸ್ತುಗಳು ಹಾಗೂ ಮಕ್ಕಳ ಸ್ನೇಹಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದೆಲ್ಲಕ್ಕೂ ಮಾನವಶಕ್ತಿ ಹೆಚ್ಚಾಗಿ ಬೇಕಾಗುತ್ತದೆ. ಪ್ರಮುಖವಾಗಿ ನರ್ಸ್ ಗಳ ಸಂಖ್ಯೆ ಹೆಚ್ಚಾಗಿ ಬೇಕಾಗಬಹುದು ಎಂದು ತಿಳಿಸಿದ್ದಾರೆ. 

ಅಪೌಷ್ಟಿಕ ಕೋವಿಡ್ -19 ಸೋಂಕಿತ ಮಕ್ಕಳಿಗೆ ಹೆಚ್ಚಿನ ಪೋಷಕಾಂಶವುಳ್ಳ ಆಹಾರ ನೀಡುವ ಅಗತ್ಯವಿರುತ್ತದೆ. ದಡಾರ, ಇನ್ಫ್ಲುಯೆನ್ಸ, ಹೆಪಟೈಟಿಸ್-ಎ, ಚಿಕನ್ಪಾಕ್ಸ್ ಇತ್ಯಾದಿಗಳಿ ಎಂದಿನ ಲಸಿಕೆಗಳು ತಪ್ಪಿಸಿಕೊಳ್ಳಂತೆ ನೋಡಿಕೊಳ್ಳಬೇಕು. ನವಜಾತ ಶಿಶುಗಳ ತೀವ್ರ ನಿಗಾ ಘಟಕಗಳಿಗೆ ಪ್ರತಿ ಮಗುವಿಗೆ ಒಬ್ಬ ನರ್ಸ್ ಗಳ ಅಗತ್ಯವಿರುತ್ತದೆ, ಇನ್ನು ಮಕ್ಕಳ ವಾರ್ಡ್‌ಗಳಿಗೆ ಪ್ರತಿ ಮೂರು ಮಕ್ಕಳಿಗೆ ಒಬ್ಬ ನರ್ಸ್ ಅಗತ್ಯವಿರುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘದ ಮಕ್ಕಳ ಸಮಿತಿಯ ಸ್ಥಾಯಿ ಸಮಿತಿಯ ಅಧ್ಯಕ್ಷ ಡಾ. ಶ್ರೀನಿವಾಸ ಎಸ್ ಅವರು ಹೇಳಿದ್ದಾರೆ.

ಪರಿಸ್ಥಿತಿ ಎದುರಿಸಲು ಇದೀಗ ಆಸ್ಪತ್ರೆಗಳೇ ಸ್ವಯಂ ಸಜ್ಜಾಗುತ್ತಿದ್ದು, ನಗರದ ಬೌರಿಂಗ್ ಆಸ್ಪತ್ರೆಯು 40 ವೈದ್ಯರು ಮತ್ತು 60 ನರ್ಸ್'ಗಳಿಗೆ ಮಕ್ಕಳ ಆರೈಕೆ ಕುರಿತು ತರಬೇತಿ ನೀಡುವ ಕಾರ್ಯ ಆರಂಭಿಸಿದ್ದು, ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಹಾಸಿಗೆಗಳ ಸಂಖ್ಯೆಯ್ನು 20 ರಿಂದ 30 ಕ್ಕೆ ಹೆಚ್ಚಿಸುತ್ತಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್