ಉದ್ಘಾಟನಾ ರೈಲಿನಲ್ಲಿ ಗುತ್ತಿಗೆದಾರರು 
ರಾಜ್ಯ

ಕೆಂಗೇರಿ ಮಾರ್ಗ ನಿರ್ಮಿಸಿದ ಅಪ್ರತಿಮ ವೀರರ ಪಾತ್ರವನ್ನು ಗೌರವಿಸಿದ ಬೆಂಗಳೂರು ಮೆಟ್ರೋ!

ಕಳೆದ ಭಾನುವಾರ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಲಾಗಿದ್ದು, ಈ ಮಾರ್ಗ ಪೂರ್ಣಗೊಳಿಸಲು ಅದರ ಗುತ್ತಿಗೆದಾರರು ಮತ್ತು ಇತರ ಸಹಾಯಕ ಸಿಬ್ಬಂದಿ ನಿರ್ವಹಿಸಿದ ಅದ್ಭುತ...

ಬೆಂಗಳೂರು: ಕಳೆದ ಭಾನುವಾರ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಲಾಗಿದ್ದು, ಈ ಮಾರ್ಗ ಪೂರ್ಣಗೊಳಿಸಲು ಅದರ ಗುತ್ತಿಗೆದಾರರು ಮತ್ತು ಇತರ ಸಹಾಯಕ ಸಿಬ್ಬಂದಿ ನಿರ್ವಹಿಸಿದ ಅದ್ಭುತ ಕೆಲಸಕ್ಕೆ ನಮ್ಮ ಮೆಟ್ರೋ ಒಂದು ಸೆಲ್ಯೂಟ್ ಸಲ್ಲಿಸಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(ಬಿಎಂಆರ್‌ಸಿಎಲ್) ಉದ್ಘಾಟನಾ ದಿನದಂದು ಮಾರ್ಗ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ 88 ವ್ಯಕ್ತಿಗಳನ್ನು, ಹೆಚ್ಚಿನವರು ಗುತ್ತಿಗೆ ಕೆಲಸಗಾರರಾಗಿದ್ದು, ಅವರಿಗೆ ನಾಯಂಡಹಳ್ಳಿಯಲ್ಲಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರು ಫ್ಲ್ಯಾಗ್ ಮಾಡಿದ ಮೊದಲ ರೈಲಿನಲ್ಲಿ ಪ್ರಯಾಣಿಸಲು ಅನುಮತಿ ನೀಡುವ ಮೂಲಕ ಗೌರವಿಸಲಾಯಿತು.

ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಮೆಟ್ರೋ ರೈಲಿಗೆ ಚಾಲನೆ ನೀಡಿದ ಬಳಿಕ ಭಾಷಣ ಮಾಡಿ, ನಾಯಂಡಹಳ್ಳಿಯಿಂದ ಹೊರಟ ಎರಡನೇ ರೈಲಿನಲ್ಲಿ ತೆರಳಿದರು.

ಮಹಿಳಾ ರೈಲು ನಿರ್ವಾಹಕರಾದ ಬಿ ಗೌತಮಿ ಮತ್ತು ಸ್ಮಿತಾ ಎಂ ರೇವಣಕರ್ ನೇತೃತ್ವದಲ್ಲಿ ಉದ್ಘಾಟನಾ ರೈಲು 10.30 ಕ್ಕೆ ಹೊರಟುಹೋಯಿತು. ಈ ರೈಲಿನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 88 ಸಿಬ್ಬಂದಿಗಳಿಗೆ ಪ್ರಯಾಣಿಸಲು ಅವಕಾಶ ನೀಡುವ ಮೂಲಕ ಗೌರವಿಸಲಾಯಿತು. ಅವರೊಂದಿಗೆ ಕೆಲವು ಭದ್ರತಾ ಸಿಬ್ಬಂದಿ ಸಹ ಸೇರಿಕೊಂಡರು.

'ಇದು ನಮಗೆಲ್ಲರಿಗೂ ಒಂದು ದೊಡ್ಡ ದಿನವಾಗಿತ್ತು. ವೈಯಕ್ತಿಕವಾಗಿ, ನಾನು ಕಳೆದ ಐದು ವರ್ಷಗಳಿಂದ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೆ. ಮೊದಲ ರೈಲಿನಲ್ಲಿ ಪ್ರಯಾಣಿಸುವುದು ನನಗೆ ಮತ್ತು ನನ್ನ ತಂಡಕ್ಕೆ ಬಹಳ ರೋಮಾಂಚಕಾರಿ ಮತ್ತು ಅವಿಸ್ಮರಣೀಯವಾಗಿತ್ತು' ಎಂದು ಬಿಎಂಆರ್‌ಸಿಎಲ್‌ಗಾಗಿ ಸಿವಿಲ್ ಕೆಲಸಗಳನ್ನು ನಿರ್ವಹಿಸಿದ ಸೋಮ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಸುರಕ್ಷಾ ವ್ಯವಸ್ಥಾಪಕ ಎ ಸುರೇಶ್ ಕುಮಾರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

"ನಾವು ಕೆಂಗೇರಿಯಲ್ಲಿ ಟರ್ಮಿನೇಟಿಂಗ್ ಸ್ಟೇಷನ್ ವರೆಗೆ ಪ್ರಯಾಣ ಮಾಡಿದೆವು. ಸಿಎಂ ಸ್ವತಃ ಈ ರೈಲನ್ನು ಫ್ಲ್ಯಾಗ್‌ಆಫ್ ಮಾಡಿದ್ದರಿಂದ ನಮಗೆಲ್ಲರಿಗೂ ಇದು ಒಂದು ಅದ್ಭುತ ಕ್ಷಣವಾಗಿತ್ತು. ಲೈನ್ ಆರಂಭಿಸಲು ನಾವು ಕಾತರದಿಂದ ಕಾಯುತ್ತಿದ್ದೆವು ಮತ್ತು ಆದ್ದರಿಂದ ಇದು ನಮಗೆ ವಿಶೇಷ ದಿನವಾಗಿತ್ತು. ನಮ್ಮಲ್ಲಿ ಹೆಚ್ಚಿನವರು ಪ್ರಯಾಣದುದ್ದಕ್ಕೂ ಸೆಲ್ಫಿ ತೆಗೆದುಕೊಳ್ಳುತ್ತಲೇ ಇದ್ದರು" ಎಂದು ಇನ್ನೊಬ್ಬ ಸಿವಿಲ್ ಗುತ್ತಿಗೆದಾರ , ಸ್ಟಾರ್ವರ್ತ್ ಇನ್ಫ್ರಾಸ್ಟ್ರಕ್ಚರ್ ಕಾರ್ಪೊರೇಷನ್ ಲಿಮಿಟೆಡ್ ನ ಗುಣಮಟ್ಟದ ಎಂಜಿನಿಯರ್ ಸಿವಿ ಅಲ್ಜೊ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್