ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕ ಜಿಎಸ್ ಟಿ ಸಂಗ್ರಹದಲ್ಲಿ ದಾಖಲೆ ಏರಿಕೆ, ಕಳೆದ ವರ್ಷಕ್ಕಿಂತ ಶೇ.31ರಷ್ಟು ಹೆಚ್ಚಳ

ಕರ್ನಾಟಕದಲ್ಲಿ ಜಿಎಸ್‌ಟಿ ಸಂಗ್ರಹವು ಪ್ರಬಲ ಏರಿಕೆ ಕಂಡಿದ್ದು, ಶೇ.31ರಷ್ಟು ಏರಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಕರ್ನಾಟಕದಲ್ಲಿ ಜಿಎಸ್‌ಟಿ ಸಂಗ್ರಹವು ಪ್ರಬಲ ಏರಿಕೆ ಕಂಡಿದ್ದು, ಶೇ.31ರಷ್ಟು ಏರಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 2021 ರಲ್ಲಿ ಸುಮಾರು 8,200 ಕೋಟಿ ರೂ.ಗಳು ಜಿಎಸ್ ಟಿ ಸಂಗ್ರಹವಾಗಿದ್ದರೆ, ನವೆಂಬರ್ 30, 2021 ರ ವೇಳೆಗೆ ರೂ. 9,048 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ನವೆಂಬರ್ ನಲ್ಲಿ 6,915 ಕೋಟಿ ರೂ ಸಂಗ್ರಹವಾಗಿತ್ತು. ಇದು ಶೇ. 31 ರಷ್ಟು ಏರಿಕೆಯಾಗಿದೆ. 

ದೇಶ ಮತ್ತು ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರ ಭೀತಿ ಇರುವಂತೆಯೇ ಜಿಎಸ್ಟಿ ಸಂಗ್ರಹಣೆ ಏರುಗತಿಯಲ್ಲಿರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೂಲಭೂತ ಅಂಶಗಳು ಪ್ರಬಲವಾಗಿದ್ದು, ಬೆಳವಣಿಗೆ ದರ ಮುಂದುವರಿದರೆ ಮುಂದಿನ ವರ್ಷದ ಡಿಸೆಂಬರ್ ಅಥವಾ ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹಗಳು 10,000 ಕೋಟಿ ರೂಪಾಯಿಗಳ ಸಮೀಪ ಬರಬಹುದು ಎಂದು ಅವರು ಹೇಳಿದ್ದಾರೆ.

ತೆರಿಗೆ ವಂಚಕರ ಮೇಲೆ ತೀವ್ರ ನಿಗಾ
ಇನ್ನು ತೆರಿಗೆ ವಂಚಕರ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಈ ಬಗ್ಗೆ ಮಾತನಾಡಿರುವ ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ.ಆರ್.ಎಸ್.ದೇಶಪಾಂಡೆ ಅವರು, ವ್ಯಾಪಾರದಲ್ಲಿನ ಸುಧಾರಣೆಯಿಂದಾಗಿ ಮಧ್ಯಮ ಶ್ರೇಣಿಯ ಜಿಎಸ್‌ಟಿ ಸಂಗ್ರಹ ಪ್ರಮಾಣವು ದೊಡ್ಡದಾಗಿದೆ ಎಂಬುದು ನಿಜ. ಆದರೆ ಉನ್ನತ ಮಟ್ಟದ ರಿಯಲ್ ಎಸ್ಟೇಟ್ ವಲಯದಿಂದ ಜಿಎಸ್‌ಟಿ ಸಂಗ್ರಹವು ನಿರೀಕ್ಷಿತ ಮಟ್ಟದಲ್ಲಿಲ್ಲ ಮತ್ತು ಅದು ಬೆಳೆಯಲು ಹೆಚ್ಚಿನ ಉತ್ತೇಜನದ ಅಗತ್ಯವಿದೆ ಎಂದು ಹೇಳಿದ್ದಾರೆ. 

ರಾಜ್ಯ ಸರ್ಕಾರದ ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ.ಮನೋಹರ್ ಮಾತನಾಡಿ, ತೆರಿಗೆ ಅನುಸರಣೆ ಉತ್ತೇಜನಕಾರಿಯಾಗಿದೆ. ವರ್ಕ್ ಫ್ರಮ್ ಹೋಮ್ ಗೆ ಬಿಡುವು ನೀಡಲಾಗಿದೆ. ಹಬ್ಬದ ಸೀಸನ್, ವ್ಯಾಪಾರ ಮತ್ತು ಸೇವಾ ಚಟುವಟಿಕೆಯಲ್ಲಿ ಸಮಂಜಸವಾದ ಹೆಚ್ಚಳ, ಬಾಕಿ ರಿಟರ್ನ್ಸ್ ಸಲ್ಲಿಸುವಲ್ಲಿ ಅನುಸರಣೆಯನ್ನು ಸುಧಾರಿಸುವ ಕ್ರಮಗಳು ಮತ್ತು ಗ್ರಾಹಕರಿಂದ ಖರೀದಿ ಆಯ್ಕೆಗಳಲ್ಲಿ ಸುಧಾರಣೆ ಸುಧಾರಿತ GST ಸಂಗ್ರಹಣೆಗೆ ಪೂರಕವಾದ ಕೆಲವು ಅಂಶಗಳಾಗಿವೆ ಎಂದು ಹೇಳಿದ್ದಾರೆ.

ವಾಣಿಜ್ಯ ತೆರಿಗೆ ಅಯುಕ್ತರಾದ ಸಿ ಶಿಖಾ ಅವರು ಮಾತನಾಡಿ, 'ವ್ಯವಹಾರವನ್ನು ಸುಲಭಗೊಳಿಸಲು ತೆರಿಗೆ ಸುಧಾರಣೆಗಳು ಹೆಚ್ಚಿನ ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತವೆ. ತೆರಿಗೆ ಪಾವತಿ ತಪ್ಪಿಸಿಕೊಳ್ಳುವಿಕೆಯನ್ನು ಪತ್ತೆಹಚ್ಚುವ ಪ್ರಯತ್ನಗಳು ಸಹಾಯ ಮಾಡಿದೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಜಾರಿ ತಂಡಗಳು ವಂಚಕರು ಮತ್ತು ವಂಚನೆಯ ಘಟನೆಗಳ ಮೇಲೆ ಕೇಂದ್ರೀಕರಿಸಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT