ರಾಜ್ಯ

ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಲು ಮಡಿಕೇರಿಯಲ್ಲಿ ಸಿಸಿ ಟಿವಿ ಅಳವಡಿಕೆ

Harshavardhan M

ಮಡಿಕೇರಿ: ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದಾಗಿ ಉದ್ಭವವಾಗಿರುವ ಸಮಸ್ಯೆಯನ್ನು ಬಗೆಹರಿಸಲು ಮಡಿಕೇರಿ ಸಿಟಿ ಮುನಿಸಿಪಲ್ ಕಾರ್ಪೊರೇಷನ್ ತಂತ್ರಜ್ಞಾನದ ಮೊರೆ ಹೋಗಿದೆ. ಕಸ ಎಸೆಯಬಾರದ ಜಾಗಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯಕ್ಕೆ ಅದು ಮುಂದಾಗಿದೆ. 

ಒಟ್ಟು 28 ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದ್ದು, ಸಾರ್ವಜನಿಕರು ಆ ಪ್ರದೇಶಗಳಲ್ಲಿ ಕಸ ಎಸೆಯುವುದು ಕಂಡುಬಂದರೆ ಅವರ ಹೆಸರನ್ನು ಜಗಜ್ಜಾಹೀರುಗೊಳಿಸಿ ಅವರಿಗೆ ಅವಮಾನಕ್ಕೀಡು ಮಾಡಲಾಗುವುದು. ಈ ಶಿಕ್ಷೆಯ ಭಯದಿಂದಲಾದರೂ ಜನರು ಕಸ ಎಸೆಯದೇ ಇರಲಿ ಎನ್ನುವ ಆಶಯ ಅಧಿಕಾರಿಗಳದು.

ಈ ಹಿಂದೆ ಸಿಸಿ ಕ್ಯಾಮೆರಾಗಳನ್ನು ಅಧಿಕಾರಿಗಳೇ ತಂದು ಅಳವಡಿಸುವುದು ಎಂದಿತ್ತು, ಆದರೆ ಅದರೆ ವೆಚ್ಚ ಹೆಚ್ಚಿದ್ದರಿಂದ ಇದೀಗ ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ನಿರ್ವಹಣೆಯ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. 

SCROLL FOR NEXT