ಮಹದಾಯಿ ನದಿ ಯೋಜನೆ 
ರಾಜ್ಯ

ಅನುಷ್ಠಾನದಲ್ಲಿ ವಿಳಂಬತೆ: ರಾಜ್ಯಾದ್ಯಂತ ಅನೇಕ ಯೋಜನೆಗಳು ಆಮೆಗತಿಯಲ್ಲಿ!

ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಸಾಕಷ್ಟು ಮೂಲಸೌಕರ್ಯಗಳ ಅಗತ್ಯತೆಯ ನಡುವಿನ ಹೊಂದಾಣಿಕೆಯ ಕಾರಣದಿಂದ ರಾಜ್ಯಾದ್ಯಂತ ಅನೇಕ ಯೋಜನೆಗಳು ಬಾಕಿ ಉಳಿದಿದ್ದು, ಆಮೆಗತಿಯಲ್ಲಿ ಸಾಗುತ್ತಿವೆ.

ಬೆಂಗಳೂರು: ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಸಾಕಷ್ಟು ಮೂಲಸೌಕರ್ಯಗಳ ಅಗತ್ಯತೆಯ ನಡುವಿನ ಹೊಂದಾಣಿಕೆಯ ಕಾರಣದಿಂದ ರಾಜ್ಯಾದ್ಯಂತ ಅನೇಕ ಯೋಜನೆಗಳು ಬಾಕಿ ಉಳಿದಿದ್ದು, ಆಮೆಗತಿಯಲ್ಲಿ ಸಾಗುತ್ತಿವೆ.

ಹೆಚ್ಚುತ್ತಿರುವ ಜನಸಂಖ್ಯೆಯು ಜನಸಾಮಾನ್ಯರಿಗೆ ಅಗತ್ಯವಾದ ಆಹಾರ, ನೀರು, ಸಾರಿಗೆ, ಸಂಪರ್ಕ, ಕಾನೂನು ಮತ್ತು ಸುವ್ಯವಸ್ಥೆ ಸಮಾನ ವಿತರಣೆ ಮತ್ತು  ಮೂಲಸೌಕರ್ಯಗಳ ಅಗತ್ಯವನ್ನು ಸೂಚಿಸುತ್ತದೆ. ಆದರೆ ಕರ್ನಾಟಕದಲ್ಲಿ ಹಾಗಿಲ್ಲ. ಹಲವಾರು ಪ್ರಮುಖ ಯೋಜನೆಗಳು  ವರ್ಷಗಳಿಂದ ಬಾಕಿ ಉಳಿದಿವೆ ಮತ್ತು ಸುಮಾರು ಎರಡು ವರ್ಷಗಳ ಸಾಂಕ್ರಾಮಿಕ ರೋಗವು ಅವುಗಳ ಅನುಷ್ಠಾನವನ್ನು ಇನ್ನಷ್ಟು ವಿಳಂಬಗೊಳಿಸಿರಬಹುದು.

ಯೋಜನೆಗಳನ್ನು  ವಿಳಂಬವಾಗಲು ಸಾಂಕ್ರಾಮಿಕ ರೋಗವು ಒಂದು ಕಾರಣವಾದರೂ, ಅಧಿಕಾರಿಗಳ ನಡುವಿನ ಸಮನ್ವಯ ಮತ್ತು ಇಚ್ಛಾಶಕ್ತಿಯ ಕೊರತೆಯೂ ಪ್ರಮುಖ ಕಾರಣ ಎಂದು ನಗರ ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ.

ಬೆಂಗಳೂರು ಉಪನಗರ ರೈಲು: 15,767 ಕೋಟಿ ರೂಪಾಯಿಗಳ ಬೆಂಗಳೂರು ಉಪನಗರ ರೈಲು ಯೋಜನೆಯ ಒಂದು ಕಾರಿಡಾರ್‌ಗೆ ಮೊದಲ ಟೆಂಡರ್ ಅನ್ನು ಅದರ ಅನುಷ್ಠಾನ ಸಂಸ್ಥೆ ನವೆಂಬರ್ 24 ರಂದು ಹೊರಡಿಸಿತ್ತು. ರೈಲ್ವೆ ಅಧಿಕಾರಿಗಳು 2026 ರ ಗಡುವನ್ನು ನಿಗದಿಪಡಿಸಲಾಗಿದೆ ಎಂದು ಪುನರುಚ್ಚರಿಸಿದ್ದಾರೆ, ಆದರೆ ಅದು ಅಸಂಭವವಾಗಿದೆ. .

ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) 25.01 ಕಿ.ಮೀ ಉದ್ದದ  ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಮಾರ್ಗ (ಎರಡನೇ ಕಾರಿಡಾರ್ )ಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಕರೆಯಬೇಕಾಗಿತ್ತು.  ಆದರೆ, ಅದು ಮುಂದೂಡಲ್ಪಟ್ಟಿದೆ.

ಇದರ ಹೊರತಾಗಿ, 148.17-ಕಿಮೀ ಉದ್ದದ ಉಪನಗರ ರೈಲು ಯೋಜನೆಯು  ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ, ಕೆಂಗೇರಿ-ಕಂಟೋನ್ಮೆಂಟ್-ವೈಟ್‌ಫೀಲ್ಡ್ ಮತ್ತು ಹೀಲಲಿಗೆ-  ರಾಜನಕುಂಟೆಯ ಇತರ ಮೂರು ಕಾರಿಡರ್ ಗಳನ್ನು ಒಳಗೊಂಡಿದೆ. ಹೀಲಲಿಗೆ ಮಾರ್ಗ( ನಾಲ್ಕನೇ ಕಾರಿಡಾರ್) ಮುಂದಿನ ಮಾರ್ಗಕ್ಕೆ ಟೆಂಡರ್ ಕರೆಯುವ ಸಾಧ್ಯತೆಯಿದೆ.

ಪೆರಿಫೆರಲ್ ರಿಂಗ್ ರೋಡ್: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) 21,091 ಕೋಟಿ ರೂಪಾಯಿಗಳ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಕಳೆದ ವರ್ಷ 65.5 ಕಿ.ಮೀ ಉದ್ದದ ಯೋಜನೆಯನ್ನು ಎಂಟು ಪಥಗಳು ಮತ್ತು ನಾಲ್ಕು ಸರ್ವೀಸ್ ಪಥದೊಂದಿಗೆ  73 ಕಿ.ಮೀ.ಗೆ ಮೇಲ್ದರ್ಜೆಗೇರಿಸಲಾಗಿತ್ತು. ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಮತ್ತು ಆನೇಕಲ್ ಮೂರು ತಾಲ್ಲೂಕುಗಳಲ್ಲಿ 1,810 ಎಕರೆ ಭೂಮಿಯಲ್ಲಿ ಇದು ಬರಬೇಕಿದೆ. ಇದು ತುಮಕೂರು ರಸ್ತೆಯಿಂದ ನೈಸ್ ರಸ್ತೆ ಜಂಕ್ಷನ್‌ನಲ್ಲಿ ಪ್ರಾರಂಭವಾಗಿ ಎನ್ ಹೆಚ್ 44 ನಲ್ಲಿ ಹೊಸೂರು ರಸ್ತೆಯಲ್ಲಿ ಕೊನೆಗೊಳ್ಳುತ್ತದೆ. ಭೂಸ್ವಾಧೀನವೇ ದೊಡ್ಡ ತೊಡಕಾಗಿದೆ.

ಕೆಂಪೇಗೌಡ, ಅರ್ಕಾವತಿ ಮತ್ತು ಶಿವರಾಮ ಕಾರಂತ ಬಡಾವಣೆಗಳ ರಚನೆಗೆ ಕೆಂಪುಪಟ್ಟಿ ವಿಳಂಬವಾಗಿದೆ. ಒಂದು ವರ್ಷದ ಹಿಂದೆ ನಗರ ಮಿತಿಗೆ ಒಳಪಟ್ಟ 110 ಹಳ್ಳಿಗಳಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಮಾರ್ಗಗಳು ಪೂರ್ಣಗೊಂಡಿವೆ ಎಂದು ತಜ್ಞರು ಪಟ್ಟಿ ಮಾಡಿದ್ದಾರೆ. “ಯೋಜನೆಗಳಿಗಾಗಿ ಸಾಲವನ್ನು ತೆಗೆದುಕೊಳ್ಳಲಾಗಿದೆ, ಆದರೆ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ನಗರಕ್ಕೆ ಅತ್ಯಗತ್ಯವಾಗಿರುವ ಮತ್ತೊಂದು ಯೋಜನೆ ಪಾರ್ಕಿಂಗ್ ನೀತಿ ಅಗತ್ಯವಾಗಿದೆ ಎಂದು ತಜ್ಞರು ಹೇಳುತ್ತಾರೆ. 

ಶಿವಮೊಗ್ಗದಲ್ಲಿ ರೈಲು ಯೋಜನೆಗಳು: ಶಿವಮೊಗ್ಗದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಎರಡು ರೈಲ್ವೆ ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ. 2011-12ರ ಬಜೆಟ್ ನಲ್ಲಿ ಶಿವಮೊಗ್ಗ- ಹರಿಹರ ಮಾರ್ಗದ ಯೋಜನೆಯನ್ನು ಘೋಷಿಸಲಾಗಿತ್ತು. ಶಿವಮೊಗ್ಗ- ಹೊನ್ನಾಳ್ಳಿ- ಹರಿಹರ ಮಾರ್ಗದ ಸರ್ವೆ ಕಾರ್ಯ ನಡೆಸಲಾಯಿತು. ಆದರೆ, ಅಲ್ಲಿಂದ ಯಾವುದೇ ಪ್ರಗತಿಯಾಗಿಲ್ಲ. ಶಿವಮೊಗ್ಗ- ಶೃಂಗೇರಿ- ಮಂಗಳೂರು ಮಾರ್ಗ ಯೋಜನೆಯನ್ನು ಜುಲೈ 2014ರಲ್ಲಿ ಅಂದಿನ ರೈಲ್ವೆ ಮಂತ್ರಿ ಡಿ. ವಿ. ಸದಾನಂದಗೌಡ ಘೋಷಿಸಿದ್ದರು. ಆದರೆ, ಏಳು ವರ್ಷವಾದರೂ ಯೋಜನೆ ಮಾತ್ರ ಅನುಷ್ಠಾನಗೊಂಡಿಲ್ಲ.

ಮಹದಾಯಿ ಯೋಜನೆ: ಆಗಸ್ಟ್ 22, 2000 ರಂದು, ಕರ್ನಾಟಕ ಸರ್ಕಾರವು ಮಹದಾಯಿ ನದಿಯ ಎರಡು ಉಪನದಿಗಳಾದ ಕಳಸಾ ಮತ್ತು ಭಂಡೂರಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ನಿರ್ಮಿಸುವ ಮಹದಾಯಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿತು.  ಇದು ಮಲಪ್ರಭ ನದಿಗೆ ನೀರನ್ನು ತಿರುಗಿಸುವ ಯೋಜನೆಯಿಂದ ಧಾರವಾಡ, ಬೆಳಗಾವಿ ಮತ್ತು ಗದಗ ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಆದರೆ, ಇದನ್ನು ಗೋವಾ ವಿರೋಧಿಸಿದೆ. ಇದು ರಾಷ್ಟ್ರೀಯ ಜಲ ನೀತಿಯನ್ನು ಉಲ್ಲಂಘಿಸುತ್ತದೆ ಮತ್ತು ಭವಿಷ್ಯದಲ್ಲಿ ಗೋವಾದಲ್ಲಿ ಕುಡಿಯುವ ನೀರಿನ ಕೊರತೆಯನ್ನು ಉಂಟುಮಾಡಬಹುದು ಎಂದು ಹೇಳಿಕೊಂಡಿದೆ.

 ಮಹದಾಯಿ ನ್ಯಾಯಾಧೀಕರಣ ಆಗಸ್ಟ್ 14, 2018 ರಂದು ಮಧ್ಯಂತರ ಆದೇಶವನ್ನು ನೀಡಿದ ನಂತರ, ಕರ್ನಾಟಕ ಮಹದಾಯಿ ನದಿಯಿಂದ ತನ್ನ ಪಾಲಿನ 13.4 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು, ಅದರ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರ ಇದುವರೆಗೆ 1677 ಕೋಟಿ ರೂ. ವೆಚ್ಚ ಮಾಡಿದೆ. ಆದರೆ, ಕೇಂದ್ರ ಸರ್ಕಾರ ಇನ್ನೂ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಅಂತಿಮಗೊಳಿಸಿಲ್ಲ.

ಕೃಷ್ಣಾ ಮೇಲ್ದಂಡೆ ಯೋಜನೆ: ಕೃಷ್ಣಾ ನದಿಗೆ ಅಡ್ಡಲಾಗಿ  ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ)ಯಿಂದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ  ನೀರು ಒದಗಿಸಲು ಮತ್ತು 15,36,000 ಎಕರೆ ಭೂಮಿಗೆ ನೀರುಣಿಸಲು ಯೋಜಿಸಲಾಗಿದೆ. ಯುಕೆಪಿ ಹಂತ-1 ಯೋಜನೆಗೆ 1964 ರಲ್ಲಿ ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಡಿಗಲ್ಲು ಹಾಕಿದರು.

ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿಯಿಂದ ಕರ್ನಾಟಕಕ್ಕೆ ಹಂಚಿಕೆಯಾದ 173 ಟಿಎಂಸಿ ನೀರನ್ನು ಯುಕೆಪಿ ಬಳಸಲು ಉದ್ದೇಶಿಸಿದೆ. ಈಗ ಕೃಷ್ಣಾ ಮೇಲ್ದಂಡೆ ಮೂರನೇ ಯೋಜನೆಯಲ್ಲಿ ಕೃಷ್ಣಾ ನದಿ ನೀರಿನ 130 ಟಿಎಂಸಿ ನೀರನ್ನು ಬಳಸಿಕೊಳ್ಳಲು 65,000 ಕೋಟಿ ಅಂದಾಜು ವೆಚ್ಟ ಮಾಡಲಾಗಿದೆ. ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಕರ್ನಾಟಕಕ್ಕೆ 173 ಟಿಎಂಸಿ ನೀರನ್ನು ಏಳು ವರ್ಷಗಳ ಹಿಂದೆಯೇ ಹಂಚಿಕೆ ಮಾಡಿದ್ದರು. ಆದರೆ, ಹಿಂದಿನ ಮೈತ್ರಿ ಸರ್ಕಾರ ಯೋಜನೆಗಾಗಿ ಯಾವುದೇ ಹಣ ಬಿಡುಗಡೆ ಮಾಡಿರಲಿಲ್ಲ.

ವರಾಹಿ ಕುಡಿಯುವ ನೀರು ಯೋಜನೆ: ಉಡುಪಿ ಜಿಲ್ಲೆಗೆ ಕುಡಿಯುವ ನೀರು ಪೂರೈಸುವ 300 ಕೋಟಿ ರೂ. ವೆಚ್ಚದ ವರಾಹಿ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಇದರ ಡೆಡ್ ಲೈನ್ ಇದೀಗ ಮಾರ್ಚ್ 2022ಕ್ಕೆ ಮುಂದೂಡಲ್ಪಟ್ಟಿದೆ. 

ಭದ್ರಾ ಮೇಲ್ದಂಡೆ ಯೋಜನೆ: ಬರಪೀಡಿತ ಚಿತ್ರದುರ್ಗ ಜಿಲ್ಲೆಯ ರೈತರ ಕೃಷಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಮೈಸೂರು ನಗರದ ಮಹತ್ವಕಾಂಕ್ಷೆಯ ಫಿಲ್ಮಂ ಸಿಟಿ ನಗರ ಯೋಜನೆ ಕಳೆದ ಏಳು ವರ್ಷಗಳಿಂದ ಬಾಕಿಯಿದೆ.  ಕಲಬುರಗಿಯಲ್ಲಿ ಬೆಣ್ಣೆತೋರಾ, ಅಮಾಜ್ರ ಯೋಜನೆಗೆ ಮೂರು ದಶಕಗಳ ಹಿಂದೆ ಶಂಕುಸ್ಥಾಪನೆ ನೆರವೇರಿಸಿದ್ದರೂ. ಇನ್ನೂ ಯೋಜನೆ ಪೂರ್ಣಗೊಂಡಿಲ್ಲ. ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾಕ್ ಯೋಜನೆಗೆ ವಿಸ್ತೃತಾ ಯೋಜನಾ ವರದಿಯನ್ನು ಕಳುಹಿಸಲಾಗಿದ್ದು, ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಬೇಕಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT