ತೊಟ್ಟಿಯಂಡ ಸೋಮಣ್ಣ 
ರಾಜ್ಯ

ಮಡಿಕೇರಿಯಲ್ಲಿ ದಾರುಣ ಘಟನೆ: ಆಟದ ಮೈದಾನದಲ್ಲೇ ಕುಸಿದು ಬಿದ್ದು ಯುವ ಹಾಕಿ ಆಟಗಾರ ಸಾವು

ಮೂರ್ನಾಡು ಎಂಬಲ್ಲಿ ಚೌರಿರ ಹಾಕಿ ಪಂದ್ಯಾವಳಿಗೆ ಇಂದು ಚಾಲನೆ ನೀಡಲಾಗಿತ್ತು. ಒಟ್ಟು 90 ಕೊಡವ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.

ಮಡಿಕೇರಿ: ಯುವ ಹಾಕಿ ಆಟಗಾರನೊಬ್ಬ ಆಟವಾಡುತ್ತಲೇ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಡಿಕೇರಿಯಲ್ಲಿ ಜರುಗಿದೆ. ಮೃತ ಆಟಗಾರನ ಹೆಸರು ತೊಟ್ಟಿಯಂಡ ಸೋಮಣ್ಣ ಎಂದು ತಿಳಿದುಬಂದಿದೆ.

ಮೂರ್ನಾಡು ಎಂಬಲ್ಲಿ ಚೌರಿರ ಹಾಕಿ ಪಂದ್ಯಾವಳಿಗೆ ಇಂದು ಚಾಲನೆ ನೀಡಲಾಗಿತ್ತು. ಒಟ್ಟು 90 ಕೊಡವ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.

ಬತ್ತಿರ ಕುಟುಂಬ ಹಾಗೂ ತೊಟ್ಟಿಯಂಡ ಕುಟುಂಬಗಳ ನಡುವೆ ಹಾಕಿ ಪಂದ್ಯ ಏರ್ಪಟ್ಟಿತ್ತು. ಈ ಪಂದ್ಯ ನಡೆಯುತ್ತಿರುವ ವೇಳೆ 23 ವರ್ಷದ ತೊಟ್ಟಿಯಂಡ ತಂಡದ ಆಟಗಾರ ಸೋಮಣ್ಣ ಮೂರ್ಛೆ ತಪ್ಪಿದ್ದರು. 

ಕೂಡಲೆ ಸೋಮಣ್ಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ. ಸಾವಿಗೆ ಹೃದಯಾಘಾತ ಕಾರಣ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ