ರಾಜ್ಯ

ಮುಂಬೈ - ಮಂಗಳೂರು ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಅನೌನ್ಸ್​ಮೆಂಟ್, ಪ್ರಯಾಣಿಕರು ಫುಲ್ ಖುಷ್!

Lingaraj Badiger

ಬೆಂಗಳೂರು: ಎರಡು ದಿನಗಳ ಹಿಂದೆ ಮುಂಬೈನಿಂದ ಮಂಗಳೂರಿಗೆ ಹೊರಟ್ಟಿದ್ದ ಇಂಡಿಯೋ ವಿಮಾನಲ್ಲಿ ಪೈಲಟ್ ತುಳು ಭಾಷೆಯಲ್ಲಿ ಅನೌನ್ಸ್​ಮೆಂಟ್ ಮಾಡುವ ಮೂಲಕ ಪ್ರಯಾಣಿಕರಿಗೆ ಸರ್‌ಪ್ರೈಸ್‌ ನೀಡಿದ್ದಾರೆ. 

ಡಿಸೆಂಬರ್ 24 ರ ರಾತ್ರಿ ವಿಮಾನ ಸಂಖ್ಯೆ. 6E 6051 ವಿಮಾನದ ಫಸ್ಟ್ ಆಫೀಸರ್ ಪ್ರದೀಪ್ ಪದ್ಮಶಾಲಿ ಅವರು 26 ಸೆಕೆಂಡ್‌ಗಳ ಪ್ರಕಟಣೆಯಲ್ಲಿ, ಪ್ರಯಾಣಿಕರನ್ನು ತುಳು ಭಾಷೆಯಲ್ಲಿ ಸ್ವಾಗತಿಸಿದರು ಮತ್ತು ಒಂದು ಗಂಟೆ 5 ನಿಮಿಷಗಳ ಕಾಲ ಪ್ರಯಾಣದ ಸಮಯದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಹಾರೈಸಿದರು. ನಂತರ ಅವರು ಇಂಗ್ಲಿಷ್‌ ನಲ್ಲಿ ಮಾತನಾಡಿದ್ದಾರೆ.

ಈ ವೇಳೆ ವಿಮಾನದಲ್ಲಿ ಕುಳಿತಿದ್ದವರಿಗೆಲ್ಲ ಇದ್ದಕ್ಕಿದ್ದಂತೆ ತುಳು ಭಾಷೆಯಲ್ಲಿ ಅನೌನ್ಸ್‌ ಮಾಡ್ತಿದ್ದಾರಲ್ಲ ಅನ್ನೋ ಅಚ್ಚರಿಯ ಜೊತೆಗೆ ಸಂತೋಷವೂ ಆಗಿದೆ.

ಮೂಲತಃ ಮಂಗಳೂರಿನವರಾದ ಪ್ರದೀಪ್ ಪದ್ಮಶಾಲಿ ಅವರು ವಿಮಾನದಲ್ಲಿ ತುಳು ಭಾಷೆಯಲ್ಲಿ ಅನೌನ್ಸ್​ಮೆಂಟ್ ಮಾಡುವ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತುಳುವಿನಲ್ಲಿ ಪ್ರಕಟಣೆ ಕೇಳಿದ ಪ್ರಯಾಣಿಕರು ಸಂತೋಷ ವ್ಯಕ್ತಪಡಿಸಿದ್ದಾರೆ. “ಸಾಮಾನ್ಯವಾಗಿ ಪೈಲಟ್‌ಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅನೌನ್ಸ್​ಮೆಂಟ್ ಮಾಡುವುದನ್ನು ನಾವು ಕೇಳುತ್ತೇವೆ. ಆದರೆ ತುಳುವಿನಲ್ಲಿ ಕೇಳಲು ತುಂಬಾ ಸಂತೋಷವಾಯಿತು ಎಂದು ಹಲವರು ಹೇಳಿದ್ದಾರೆ.

“ದೇಶದಲ್ಲಿ ಎಲ್ಲಾ ಕಡೆಯೂ ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ ಅನ್ನು ಬಳಸಬೇಕು”  ಎಂದು ಮಾಜಿ ಶಿಪ್ ಕ್ಯಾಪ್ಟನ್ ಮುರಳಿ ಪದ್ಮನಾಭನ್ ಅವರು ಟ್ವೀಟ್ ಮಾಡಿದ್ದಾರೆ.

ಇಂಡಿಗೋ ವಕ್ತಾರರು ಈ ಘಟನೆಯನ್ನು ಖಚಿತಪಡಿಸಿದ್ದು, “ಪೈಲಟ್ ಪ್ರದೀಪ್ ಪದ್ಮಶಾಲಿ ಮಂಗಳೂರಿನವರು. ಇಂಡಿಗೋ ತನ್ನ ಪ್ರಯಾಣಿಕರೊಂದಿಗೆ ಸಂಪರ್ಕ ಸಾಧಿಸಲು ನಿಯಮಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಪ್ರಾದೇಶಿಕ ಭಾಷೆಗಳನ್ನು ಬಳಸುವುದು ಅದರ ಉಪಕ್ರಮಗಳಲ್ಲಿ ಒಂದಾಗಿದೆ. ಕಳೆದ ತಿಂಗಳು, ನಮ್ಮ ಪೈಲಟ್ ಒಬ್ಬರು ಬೋಜ್‌ಪುರಿಯನ್ನು ಬಳಸಿದ್ದರು ಮತ್ತು ಅದನ್ನು ಪ್ರಯಾಣಿಕರು ಚೆನ್ನಾಗಿ ಸ್ವೀಕರಿಸಿದ್ದರು ಎಂದು ಹೇಳಿದ್ದಾರೆ.

SCROLL FOR NEXT