ಸಂಗ್ರಹ ಚಿತ್ರ 
ರಾಜ್ಯ

ಮುಂದಿನ ಆಗಸ್ಟ್ 15ರ ವೇಳೆಗೆ ಕಾರಂತ್ ಲೇಔಟ್ ಫಲಾನುಭವಿಗಳಿಗೆ ಸೈಟ್ ವಿತರಣೆ: ಬಿಡಿಎ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಡಾ.ಶಿವರಾಮ ಕಾರಂತ್ ಲೇಔಟ್‌ನ ಸೈಟ್ ಫಲಾನುಭವಿ ಮುಂದಿನ ಆಗಸ್ಟ್ 15, 2022 ರ ವೇಳೆ ಸೈಟ್‌ಗಳನ್ನು ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಡಾ.ಶಿವರಾಮ ಕಾರಂತ್ ಲೇಔಟ್‌ನ ಸೈಟ್ ಫಲಾನುಭವಿ ಮುಂದಿನ ಆಗಸ್ಟ್ 15, 2022 ರ ವೇಳೆ ಸೈಟ್‌ಗಳನ್ನು ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ.

ಈಗಾಗಲೇ ಈ ಸಂಬಂಧ ಕಡತಗಳ ಕಾರ್ಯವನ್ನು ಮತ್ತು ಇತರೆ ಕಾಮಗಾರಿಗಳನ್ನು ಬಿಡಿಎ ವೇಗಗೊಳಿಸಿದ್ದು, ಕಾಮಗಾರಿ ಪೂರ್ಣಗೊಂಡಾಗ, ಬಿಡಿಎ ಅಭಿವೃದ್ಧಿಪಡಿಸಿದ 58ರಲ್ಲಿ ಇದು ಎರಡನೇ ದೊಡ್ಡ ಲೇಔಟ್ ಆಗಲಿದೆ.

ಈ ಬಗ್ಗೆ ಮಾತನಾಡಿದ ಬಿಡಿಎದ ಹಿರಿಯ ಬಿಡಿಎ ಅಧಿಕಾರಿಯೊಬ್ಬರು, 'ನಮ್ಮ ಗಡುವು ಸಾಕಷ್ಟು ಮಹತ್ವಾಕಾಂಕ್ಷೆಯಾಗಿದೆ. ನಾವು ಅದರ ಬಗ್ಗೆ ಉತ್ಸುಕರಾಗಿದ್ದು, ಇದು ಭಾರತದ ಸ್ವಾತಂತ್ರ್ಯದ ಪ್ಲಾಟಿನಂ ಜುಬಿಲಿ ವರ್ಷವನ್ನು ಸೂಚಿಸುತ್ತದೆ. 2008ರ ಮೂಲ ಯೋಜನೆಯಂತೆ ಹೆಸರಘಟ್ಟ ಮತ್ತು ದೊಡ್ಡಬಳ್ಳಾಪುರ ಹೋಬಳಿಗಳ ನಡುವಿನ 17 ಗ್ರಾಮಗಳಲ್ಲಿ 3,546 ಎಕರೆ 12 ಗುಂಟಾ ಭೂಮಿಯಲ್ಲಿ 18,975 ನಿವೇಶನಗಳನ್ನು ಸಜ್ಜುಗೊಳಿಸಬೇಕಿದೆ. ಶೇ.2ರಷ್ಟು ಭೂಮಿಯನ್ನು ಸಮುದಾಯ ಸೌಕರ್ಯದ ನಿವೇಶನಗಳಿಗೆ ಮೀಸಲಿಡುವುದರೊಂದಿಗೆ ಲೇಔಟ್‌ನ ಕರಡು ಯೋಜನೆಯನ್ನು ಪ್ರಸ್ತುತ ಉತ್ತಮವಾಗಿ ಯೋಜಿಸಲಾಗುತ್ತಿದೆ ಎಂದು ಹೇಳಿದರು.

ಅಂತೆಯೇ ಹಲವು ವರ್ಷಗಳಿಂದ ಭೂ ಮಾಲೀಕರು ಹಲವು ಪ್ರಕರಣಗಳನ್ನು ದಾಖಲಿಸಿದ್ದರಿಂದ ಹೈಕೋರ್ಟ್ 2015ರ ಸೆಪ್ಟೆಂಬರ್ 2ರಂದು ಲೇಔಟ್ ಯೋಜನೆಯನ್ನು ರದ್ದುಗೊಳಿಸಿತ್ತು. ಆದರೆ ಬಿಡಿಎ ಈ ವಿಷಯವನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ದಿತ್ತು. ಅಲ್ಲಿ ಆಗಸ್ಟ್ 3, 2018 ರಂದು ಸರ್ವೋಚ್ಛ ನ್ಯಾಯಾಲಯ ಲೇಔಟ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು.

ಇದರ ಪ್ರಸ್ತುತ ಸ್ಥಿತಿಯ ವಿವರಗಳನ್ನು ನೀಡಿದ ಮತ್ತೊಬ್ಬ ಅಧಿಕಾರಿ, ಸುಮಾರು 2,500 ಎಕರೆ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಂಚಿಕೊಳ್ಳಬೇಕಾದ ಸೈಟ್‌ಗಳ ನಿಖರವಾದ ಸಂಖ್ಯೆಯು ಈಗಿರುವಂತೆ ಸ್ಥೂಲ ಅಂದಾಜು ಮಾತ್ರ. ಸಾರ್ವಜನಿಕರಿಗೆ 10,000 ನಿವೇಶನ ಹಾಗೂ ಬಡಾವಣೆಗೆ ಭೂಮಿ ಬಿಟ್ಟುಕೊಟ್ಟವರಿಗೆ ಸಮಾನ ಸಂಖ್ಯೆ ನೀಡಲು ಬಿಡಿಎ ಸಿದ್ಧವಿದೆ. ಜತೆಗೆ ಕಂದಾಯ ನಿವೇಶನ ಕಳೆದುಕೊಂಡವರಿಗೆ (ಅಕ್ರಮವಾಗಿ ನಿವೇಶನ ಪಡೆದವರಿಗೆ) ಇನ್ನೂ 4 ಸಾವಿರ ನಿವೇಶನಗಳನ್ನು ಆದ್ಯತೆ ಮೇಲೆ ನೀಡಲಾಗುವುದು ಎಂದು ಹೇಳಿದರು. 

ದೊಡ್ಡ ಸೈಟ್‌ಗಳನ್ನು ಸಣ್ಣ ಆಯಾಮಗಳಾಗಿ ವಿಭಜಿಸಿದರೆ ಮೂಲತಃ ಯೋಜಿಸಲಾದ 18,975 ಸೈಟ್‌ಗಳು ಹೆಚ್ಚಾಗಬಹುದು. ಆರು ತಿಂಗಳೊಳಗೆ ಲೇಔಟ್ ರಚನೆಗೆ ಟೆಂಡರ್ ನೀಡಲು ಬಿಡಿಎ ಉತ್ಸುಕವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ವಿದ್ಯುತ್, ನೀರು ಮತ್ತು ಒಳಚರಂಡಿ ಮಾರ್ಗಗಳನ್ನು ಎಳೆಯುವ ಕೆಲಸಗಳನ್ನು ಏಕಕಾಲದಲ್ಲಿ ಪ್ರಾರಂಭಿಸಲಾಗುವುದು ಮತ್ತು ನಾವು ಆಗಸ್ಟ್ ಮಧ್ಯದ ವೇಳೆಗೆ ಹಂಚಿಕೆಯನ್ನು ಪ್ರಾರಂಭಿಸಬಹುದು. ನಾವು ಪರಿಸರ ಇಲಾಖೆ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿದ್ದೇವೆ ಎಂದೂ ಅವರು ಹೇಳಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT