ರಾಜ್ಯ

ದಾಂಡೇಲಿ ಪಟ್ಟಣದ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಮೊಸಳೆ: ಆತಂಕಗೊಂಡ ಗ್ರಾಮಸ್ಥರು

Sumana Upadhyaya

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಕೋಗಿಲುಬನ ಗ್ರಾಮದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಮೊಸಳೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕವನ್ನುಂಟುಮಾಡಿತು.

ಕಾಳಿ ನದಿಯಿಂದ ಹೊರಬಂದ ಮೊಸಳೆ ಈ ಗ್ರಾಮದ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಂಚರಿಸಿತು. ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯು ಮೊಸಳೆಯನ್ನ ಮತ್ತೆ ನದಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಸಮೀಪದ ಕಾಳಿ ನದಿಯಲ್ಲಿ ಮೊಸಳೆ ಪಾರ್ಕ್ ಇದ್ದು, ಇಲ್ಲಿ ನೂರಾರು ಮೊಸಳೆಗಳಿವೆ.

ಜನವಸತಿ ಪ್ರದೇಶಕ್ಕೆ ಮೊಸಳೆ ಬಂದಿದ್ದು ಇದೇ ಮೊದಲು ಎಂದು ನಿವಾಸಿಗಳು ಹೇಳುತ್ತಾರೆ.

SCROLL FOR NEXT