ರಾಜ್ಯ

ಕೋವಿಡ್ ಲಸಿಕೆ: 2 ಕೋಟಿ ವ್ಯಾಕ್ಸಿನ್ ವಿತರಣೆ ಮುಗಿಸಿದ ಕರ್ನಾಟಕ, ದಕ್ಷಿಣ ಭಾರತದಲ್ಲಿ ನಂ.1

Raghavendra Adiga

ಬೆಂಗಳೂರು: ಕೋವಿಡ್-19 ವಿರುದ್ಧ ಲಸಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಮಂಗಳವಾರ ಎರಡು ಕೋಟಿಯ ಮೈಲಿಗಲ್ಲು ದಾಟಿದೆ.

"ಕೋವಿಡ್ -19 ಲಸಿಕೆ ಅಭಿಯಾನದಲ್ಲಿ ಕರ್ನಾಟಕವು ಇಂದು 2 ಕೋಟಿ ಸಂಖ್ಯೆ ದಾಟುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಅರ್ಹ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ನೀಡುವುದು ನಮ್ಮ ಉದ್ದೇಶವಾಗಿದೆ ಮತ್ತು ಅದನ್ನು ಸಾಧಿಸಲು ನಾವು ಸದಾ ಸಿದ್ದವಿದ್ದೇವೆ." ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ ಈ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

"ಕರ್ನಾಟಕ ಇಂದು 2 ಕೋಟಿ ವ್ಯಾಕ್ಸಿನ್ ವಿತರಣೆ ಮುಗಿಸಿತು. ಲಸಿಕೆ ವಿತರಣೆಯಲ್ಲಿ ಕರ್ನಾಟಕ ದಕ್ಷಿಣ ಭಾರತದಲ್ಲಿ No.1 ರಾಜ್ಯವಾಗಿದೆ.  ಈ ವರ್ಷದ ಡಿಸೆಂಬರ್ 31ರ ಒಳಗೆ ಕರ್ನಾಟಕದ ಎಲ್ಲ ವಯಸ್ಕರಿಗೂ ವ್ಯಾಕ್ಸಿನ್ ಹಾಕುವ ಗುರಿಗೆ ನಾವು ಬದ್ಧರಾಗಿದ್ದೇವೆ. ಧನ್ಯವಾದಗಳು ನರೇಂದ್ರ ಮೋದಿಜಿ." ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

ರಾಜ್ಯವು ಮಂಗಳವಾರ 3,709 ಹೊಸ ಕೊರೋನಾ ಕೇಸ್ ಹಾಗೂ 139 ಸಾವುಗಳನ್ನು ವರದಿ ಮಾಡಿದೆ. ಒಟ್ಟು ಸೋಂಕು ಸಂಖ್ಯೆ 28,15,029 ಮತ್ತು ಸಾವಿನ ಪ್ರಮಾಣ 34,164 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 1,18,592.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು ಹೊಸ ಪ್ರಕರಣದಲ್ಲಿ 486 ಹೊಸ ಪ್ರಕರಣಗಳೊಂದಿಗೆ ಮೈಸೂರು ಅಗ್ರಸ್ಥಾನದಲ್ಲಿದೆ.ದಕ್ಷಿಣ ಕನ್ನಡ 374 ಮತ್ತು ಹಾಸನ 309 ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಬೆಂಗಳೂರು ನಗರ ನ್ 803 ಹೊಸ ಪ್ರಕರಣಗಳು, 1,745 ಡಿಸ್ಚಾರ್ಜ್ಮತ್ತು 26 ಸಾವನ್ನು ದಾಖಲಿಸಿದೆ. ದಕ್ಷಿಣ ಕನ್ನಡದಲ್ಲಿ 15 ಸಾವುಗಳು, ಮೈಸೂರು (11), ದಾವಂಗೆರೆ ಮತ್ತು ಕೋಲಾರ (9), ಮಂಡ್ಯ (8) ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರದಲ್ಲಿ ಒಟ್ಟು ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಈಗ 12,07,096 ಆಗಿದ್ದು, ನಂತರದ ಸ್ಥಾನಗಳಲ್ಲಿ ಮೈಸೂರು 1,63,115 ಮತ್ತು ತುಮಕೂರು 1,14,011 ಇವೆ.

SCROLL FOR NEXT