ರಾಜ್ಯ

ಮೈಸೂರು ಸಂಸದ ಪ್ರತಾಪ್ ಸಿಂಹಗೆ ಕೊರೊನಾ

Srinivas Rao BV

ಬೆಂಗಳೂರು: ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ವಿಷಯವನ್ನು ಖುದ್ದು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.

ನಾನು ಶ್ರೀ. ಶಂತವೇರಿ ಗೋಪಾಲ್ ಗೌಡ ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಲು ಹೋಗಿದ್ದೆ. ಆಂಟಿಜೆನ್ ಟೆಸ್ಟ್ ಇತ್ತು. ಅಲ್ಲಿ ನೆಗೆಟಿವ್ ಎಂದು ಬಂದಿತ್ತು. ಆದರೂ ನಾನು ಆರ್‌ಟಿಪಿಸಿಆರ್‌ಗಾಗಿ ಹೋಗಿದ್ದೆ. ನನಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ನನ್ನೊಂದಿಗೆ ಸಂಪರ್ಕ ಹೊಂದಿದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ, ಪ್ರತ್ಯೇಕವಾಗಿ ಜಾಗೃತರಾಗಿರಿ ಎಂದು ಅವರು ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ್ದಾರೆ.

SCROLL FOR NEXT