ಟೌಕ್ಟೇ ಚಂಡಮಾರುತ: ಎಂಆರ್ ಪಿಎಲ್ ಗೆ ಕಾರ್ಗೊ ಸೇವೆ ನೀಡುತ್ತಿದ್ದ ಟಗ್ ಬೋಟ್ ನಾಪತ್ತೆ, ಒಬ್ಬ ಸಾವು, ಇಬ್ಬರ ರಕ್ಷಣೆ, 6 ಮಂದಿ ನಾಪತ್ತೆ
ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ ಲಿಮಿಟೆಡ್(ಎಂಆರ್ ಪಿಎಲ್)ಗೆ ಕಾರ್ಗೊ ಸೇವೆ ನೀಡುವ ಅಲೈಯನ್ಸ್ ಎನ್ನುವ ಟಗ್ ಬೋಟ್ ಟೌಕ್ಟೇ ಚಂಡಮಾರುತದ ಪರಿಣಾಮ ನಾಪತ್ತೆಯಾಗಿದ್ದು ಓರ್ವ ಮೃತಪಟ್ಟಿದ್ದಾರೆ. ಮತ್ತಿಬ್ಬರನ್ನು ರಕ್ಷಣೆ ಮಾಡಲಾಗಿದೆ ಎಂದು ಎಂಆರ್ ಪಿಎಲ್ ತಿಳಿಸಿದೆ.
ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ ಲಿಮಿಟೆಡ್(ಎಂಆರ್ ಪಿಎಲ್)ಗೆ ಕಾರ್ಗೊ ಸೇವೆ ನೀಡುವ ಅಲೈಯನ್ಸ್ ಎನ್ನುವ ಟಗ್ ಬೋಟ್ ಟೌಕ್ಟೇ ಚಂಡಮಾರುತದ ಪರಿಣಾಮ ನಾಪತ್ತೆಯಾಗಿದ್ದು ಓರ್ವ ಮೃತಪಟ್ಟಿದ್ದಾರೆ. ಮತ್ತಿಬ್ಬರನ್ನು ರಕ್ಷಣೆ ಮಾಡಲಾಗಿದೆ ಎಂದು ಎಂಆರ್ ಪಿಎಲ್ ತಿಳಿಸಿದೆ.
ಅಲೈಯನ್ಸ್ ಎಂಬ ಟಗ್ ವೆಸೆಲ್ ಎಂ/ಎಸ್ ಅಂಡರ್ ವಾಟರ್ ಸರ್ವಿಸ್ ಕಂಪೆನಿ ಲಿಮಿಟೆಡ್ ಗೆ ಸೇರಿದ್ದಾಗಿದ್ದು ದೋಣಿಯಲ್ಲಿ 9 ಮಂದಿ ಕಾರ್ಮಿಕರು ಕೆಲಸಕ್ಕೆ ಸಮುದ್ರಕ್ಕೆ ಇಳಿದಿದ್ದರು. ಇಬ್ಬರನ್ನು ಕಾಪಾಡಲಾಗಿದ್ದು 6 ಮಂದಿ ಕಣ್ಮರೆಯಾಗಿದ್ದಾರೆ. ಮೊನ್ನೆ ಶುಕ್ರವಾರ ಕಾರ್ಗೊ ಕಾರ್ಯನಿರ್ವಹಣೆ ಮುಗಿದು ದೋಣಿ ಅಂದೇ ವಾಪಸ್ಸಾಗಬೇಕಾಗಿತ್ತು. ಆದರೆ ನಿನ್ನೆ ಹಿಂತಿರುಗಿ ಬರುವಾಗ ಈ ದುರ್ಘಟನೆ ನಡೆದಿದೆ ಎಂದು ಎಂಆರ್ ಪಿಎಲ್ ತಿಳಿಸಿದೆ.
ಅಲೈಯನ್ ಟಗ್ ವೆಸೆಲ್ ಎಂಆರ್ ಪಿಎಲ್ ಗೆ ಎಸ್ ಪಿಎಂ ಹತ್ತಿರ ಕಾರ್ಗೊ ಸೇವೆಗೆ ಮತ್ತು ಬಂದರು ಜೊತೆ ಸಮನ್ವಯ ಕಾರ್ಯದಲ್ಲಿ ತೊಡಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.