ರಾಜ್ಯ

ಬಿಟ್ ಕಾಯಿನ್ ಹಗರಣ: ಆರೋಪಿ ಶ್ರೀಕಿ ಮಾದಕ ವ್ಯಸನ, ಖಿನ್ನತೆಯಿಂದ ಬಳಲುತ್ತಿರುವ ಶಂಕೆ

Harshavardhan M

ಬೆಂಗಳೂರು: ಬಿಟ್ ಕಾಯಿನ್ ಹಗರಣ ಆರೋಪಿ ಶ್ರೀಕಿ ವಶಕ್ಕೆ ಪಡೆದ ನಂತರ ಆತ ಇದ್ದ ಹೋಟೆಲ್ ಕೊಠಡಿಯನ್ನು ಪೊಲೀಸರು ಜಾಲಾಡಿದ್ದಾರೆ. ಈ ವೇಳೆ ಖಿನ್ನತೆ ನಿವಾರಕ ಮಾತ್ರೆಗಳು ದೊರೆತಿವೆ ಎಂದು ಹೇಳಲಾಗಿದೆ.

ಖಿನ್ನತೆ ಶಮನಕ್ಕೆ ತೆಗೆದುಕೊಳ್ಳುವ ಆಲ್ಟ್ರಾಜೋಲಮ್ ಟ್ಯಾಬ್ಲೆಟ್ಸ್ ಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿದಾಗ ತನಗೆ ಖಿನ್ನತೆ ಸಮಸ್ಯೆ ಇದೆ. ಅದರ ಶಮನಕ್ಕಾಗಿ ಮಾತ್ರೆ ತಗೆದುಕೊಳ್ಳುತ್ತಿದ್ದೇನೆ ಎಂದು ಶ್ರೀಕಿ ಹೇಳಿದ್ದಾನೆ ಎನ್ನಲಾಗಿದೆ. ಈತ ಮಾದಕವಸ್ತು ವ್ಯಸನಿಯೇ ಎಂಬುದರ ಕುರಿತೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಜಕೀಯ ರಂಗದವರೂ ಭಾಗಿಯಾಗಿರುವ ಶಂಕೆ ಇರುವ ಕಾರಣ ಪ್ರಕರಣ ರಾಜ್ಯಾದ್ಯಂತ ಸುದ್ದಿಗೆ ಗ್ರಾಸವಾಗಿದೆ. ಇತ್ತೀಚಿಗಷ್ಟೆ ಭೀಮಾ ಜುವೆಲರಿ ಮಾಲೀಕರ ಪುತ್ರ ವಿಷ್ಣುಭಟ್ ಹೊತೆ ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಬಂಧನವಾಗಿತ್ತು. ಈ ನಂತರ ಈತ ಬಳಸುತ್ತಿದ್ದ ಲ್ಯಾಪ್ ಟಾಪ್, ಪೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಮಾಹಿತಿ ಸಂಗ್ರಹಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. 

ಸ್ಟ್ರಾಂಗ್ ಪಾಸ್ ವರ್ಡ್ ಹಾಕಿರುವ ಮೊಬೈಲ್ ಪೋನ್ ಅನ್ನು ಶ್ರೀಕಿಯಿಂದ ಓಪನ್ ಮಾಡಿಸಿ ವಿಚಾರಣೆ ಮುಂದುವರಿಸಿದ್ದಾರೆ. ಆತನ ಬಳಿಯಿದ್ದ ಸಿಗರೇಟ್ ಪ್ಯಾಕ್ ಗಳನ್ನು ವಶಕ್ಕೆ ಪಡೆಯಲಾಗಿತ್ತು.

SCROLL FOR NEXT