ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ನೌಕರಿ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ, ನಕಲಿ ಸರ್ಕಾರಿ ಅಧಿಕಾರಿ ಬಂಧನ

ತಾನು ಕೇಂದ್ರ ಸರ್ಕಾರದ ಡೆಪ್ಯುಟಿ ಕಮಿಷನರ್ ಎಂದು ಹೇಳಿಕೊಂಡು ನಿರುದ್ಯೋಗಿ ಯುವಕರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚಿಸಿದ 39 ವರ್ಷದ ನಕಲಿ ಅಧಿಕಾರಿಯನ್ನು ಕೇಂದ್ರ ಅಪರಾಧ...

ಬೆಂಗಳೂರು: ತಾನು ಕೇಂದ್ರ ಸರ್ಕಾರದ ಡೆಪ್ಯುಟಿ ಕಮಿಷನರ್ ಎಂದು ಹೇಳಿಕೊಂಡು ನಿರುದ್ಯೋಗಿ ಯುವಕರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚಿಸಿದ 39 ವರ್ಷದ ನಕಲಿ ಅಧಿಕಾರಿಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಶನಿವಾರ ಬಂಧಿಸಿದ್ದಾರೆ. 

ಬಂಧಿತ ಆರೋಪಿಯು ಉಡುಪಿಯ ಕುಂದಾಪುರದ ಬಸರೂರು ಗ್ರಾಮದ ರಾಘವೇಂದ್ರ ಪೂಜಾರಿ ಎಂದು ಗುರುತಿಸಲಾಗಿದೆ. ರಾಘವೇಂದ್ರ ರಾಜ್ಯಾದ್ಯಂತ 18ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ 1 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

10ನೇ ತರಗತಿ ತೇರ್ಗಡೆಯಾಗಿ ಬೆಂಗಳೂರಿಗೆ ಬಂದಿದ್ದ ಆರೋಪಿ, ಸುಮಾರು 10 ವರ್ಷಗಳಿಂದ ಜೆಪಿ ನಗರದಲ್ಲಿ ನೆಲೆಸಿದ್ದ. ಆರೋಪಿ ಹಲವರಿಗೆ ವಂಚಿಸಿ ಕೋಟ್ಯಂತರ ಹಣ ಮಾಡಿದ್ದಾನೆ. ಸ್ವಂತ ಊರಿನಲ್ಲಿ ಒಂದು ಮನೆ, ತುಮಕೂರಿನಲ್ಲಿ ಹೋಟೆಲ್, ಕೆಂಗೇರಿಯಲ್ಲಿ ಫ್ಲ್ಯಾಟ್, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹೊಂದಿದ್ದಾನೆ. ಓಡಾಡುವುದಕ್ಕೆ 2 ಕಾರು ಕೂಡಾ ಖರೀದಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬನಶಂಕರಿ ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸಿಸಿಬಿಯು ಪ್ರಕರಣ ದಾಖಲಿಸಿಕೊಂಡು ಪೂಜಾರಿಯನ್ನು ಬಂಧಿಸಿದೆ ಎಂದು ಸಿಸಿಬಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡು ರಾಜ್ಯಾದ್ಯಂತ ಸಂಚರಿಸಿ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ವಂಚಿಸಿದ್ದಾರೆ. ತಾನು ಭೂಮಾಪನ ಇಲಾಖೆಯ ಡೆಪ್ಯುಟಿ ಕಮಿಷನರ್ ಎಂದು ನಕಲಿ ಗುರುತಿನ ಚೀಟಿ ತೋರಿಸಿ, ಅವರು ಕೇಳುವ ಕೆಲಸದ ಆಧಾರದ ಮೇಲೆ ಪ್ರತಿಯೊಬ್ಬರಿಂದ 4 ಲಕ್ಷದಿಂದ  12 ಲಕ್ಷ ರೂಪಾಯಿವರೆಗೆ ವಸೂಲಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Southern Zonal Council meet: ಜಲ ವಿವಾದಗಳ ಕುರಿತು ಮಾತುಕತೆಗೆ ಅಮಿತ್ ಶಾ ಕರೆಗೆ ರಾಜ್ಯಗಳ ಬೆಂಬಲ

ಹಿಸಾರ್ ಜಿಲ್ಲಾ ನ್ಯಾಯಾಲಯದ ಹೊರಗೆ ಗ್ಯಾಂಗ್‌ಸ್ಟರ್ ವಿನೋದ್ ಪನ್ನುಗೆ ಗುಂಡಿಕ್ಕಿ ಹತ್ಯೆ

ಎಲ್ಲರಿಗೂ ಕಾನೂನು ಒಂದೇ: ಅನುಮತಿ ಇಲ್ಲದೆ ತಮ್ಮ ಪೋಸ್ಟರ್‌ ಅಂಟಿಸಿದ್ದಕ್ಕೆ ಮೂರು FIR ದಾಖಲು!

'ಬಾಹುಬಲಿ'ಗೆ ಏನಾಯಿತು?: ಪ್ರಭಾಸ್ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಆತಂಕ!

ಕೇಂದ್ರದಿಂದ ಮಹತ್ವದ ನಿರ್ಧಾರ: ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಪೀಠ ಸ್ಥಾಪನೆ