ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬಿಟ್ ಕಾಯಿನ್‌‌ ಪ್ರಕರಣ: ತನಿಖಾಧಿಕಾರಿಗಳ ಎದುರು ಹಾಜರಾಗದ ಆರೋಪಿ ಶ್ರೀಕಿ: ನಿಗೂಢವಾದ ಶ್ರೀಕಿ ನಡೆ

ಷರತ್ತು ಬದ್ಧ ಜಾಮೀನಿನಲ್ಲಿ ಪ್ರತಿ ಶನಿವಾರ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚನೆ ನೀಡಲಾಗಿತ್ತಾದರೂ ಶ್ರೀಕಿ ಕಳೆದ ಶನಿವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಿಲ್ಲ.

ಹ್ಯಾಕರ್ ಶ್ರೀಕಿ
Harshavardhan M
Updated On : 28 Nov 2021, 3:34 pm

ಬೆಂಗಳೂರು: ಜೈಲಿನಿಂದ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿರುವ ಬಿಟ್ ಕಾಯಿನ್‌‌ ಪ್ರಕರಣದ ಆರೋಪಿ ಶ್ರೀಕಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಆತನ‌ ನಡೆ ನಿಗೂಢವಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹ್ಯಾಕರ್ ಶ್ರೀಕಿ ಬಳಿಯಿಂದ 12 ಸಾವಿರದ 900 ಬಿಟ್ ಕಾಯಿನ್ ಗಳನ್ನು ಪೊಲೀಸ್ ಅಧಿಕಾರಿಗಳು, ರಾಜಕೀಯ ನಾಯಕರು ಪಡೆದುಕೊಂಡಿದ್ದಾರೆ: ಆರ್ ಟಿಐ ಕಾರ್ಯಕರ್ತ ಆರೋಪ

ಷರತ್ತು ಬದ್ಧ ಜಾಮೀನಿನಲ್ಲಿ ಪ್ರತಿ ಶನಿವಾರ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚನೆ ನೀಡಲಾಗಿತ್ತಾದರೂ ಶ್ರೀಕಿ ಕಳೆದ ಶನಿವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಿಲ್ಲ. ಅಲ್ಲದೇ ಠಾಣೆಗೆ ಹಾಜರಾಗದೇ ಇರುವುದಕ್ಕೆ ಶ್ರೀಕೃಷ್ಣ (ಶ್ರೀಕಿ) ಕಾರಣವನ್ನೂ ನೀಡಿಲ್ಲ. ಅಲ್ಲದೇ ಆತ ಮೊಬೈಲ್ ಪೋನನ್ನು ಸಹ ಬಳಸುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಆತನ ನಡೆ ನಿಗೂಢವಾಗಿದೆ. 

Advertisement

Advertisement

ಇದನ್ನೂ ಓದಿ: ಬಿಟ್ ಕಾಯಿನ್ ದಂಧೆ ಪ್ರಕರಣ: ಹ್ಯಾಕರ್ ಶ್ರೀಕಿಗೆ ಗನ್ ಮ್ಯಾನ್ ಭದ್ರತೆ

ಇನ್ನು ಕೆಲ ದಿನ ಕಾದು ಕೋರ್ಟ್ ಮುಂದೆ ವರದಿ ನೀಡಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೊಟೇಲ್ ಗಲಾಟೆ ಸಂಬಂಧ ಪೊಲೀಸರು ಶ್ರೀಕಿಯನ್ನು ಬಂಧಿಸಿದ್ದರು. ನಿರೀಕ್ಷಣಾ ಜಾಮೀನು ಪಡೆದು ಹೊರಬಂದಿರುವ ಶ್ರೀಕಿ ಖಾಕಿ ಕಣ್ಣಿಗೂ ಕಾಣಿಸದೇ ಮರೆಯಾಗಿದ್ದ, ಆತನನ್ನು ಪೊಲೀಸರು ಮತ್ತೆ ಬೆನ್ನುಹತ್ತಿದ್ದಾರೆ.

ಇದನ್ನೂ ಓದಿ:  ಬಿಟ್ ಕಾಯಿನ್ ಹಗರಣದ ಆರೋಪಿ ಶ್ರೀಕಿಗೆ ಭದ್ರತೆ ನೀಡುವಂತೆ ಗೃಹ ಸಚಿವರಿಗೆ ಸಿದ್ದರಾಮಯ್ಯ ಒತ್ತಾಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments