ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ನಿರೂಪಕ ಅಮಿತಾಬ್ ಬಚ್ಚನ್ 
ರಾಜ್ಯ

ಮಂಗಳೂರು ವಿಚಾರವಾದಿಯಿಂದ ಪತ್ರ: ಕೌನ್ ಬನೇಗಾ ಕರೋಡ್ ಪತಿ ವಿಶೇಷ ಸಂಚಿಕೆ ಹಿಂತೆಗೆದುಕೊಂಡ ಸೋನಿ

ಸೋನಿ ಟಿವಿ ತನ್ನ ಪ್ರಖ್ಯಾತ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ 'ಮಿಡ್ ಬ್ರೈನ್ ಆಕ್ಟಿವೇಶನ್' ವಿಶೇಷ ಸಂಚಿಕೆಯನ್ನು ಹಿಂಪಡೆದುಕೊಂಡಿದೆ. 

ಮಂಗಳೂರು: ಸೋನಿ ಟಿವಿ ತನ್ನ ಪ್ರಖ್ಯಾತ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ 'ಮಿಡ್ ಬ್ರೈನ್ ಆಕ್ಟಿವೇಶನ್' ವಿಶೇಷ ಸಂಚಿಕೆಯನ್ನು ಹಿಂಪಡೆದುಕೊಂಡಿದೆ. ಅದಕ್ಕೆ ಕಾರಣವಾಗಿದ್ದು ಮಂಗಳೂರು ಮೂಲದ ನರೇಂದ್ರ ನಾಯಕ್ ಎನ್ನುವುದು ಅಚ್ಚರಿಯ ಸಂಗತಿ.

ಮೆದುಳನ್ನು ವಿಶೇಷ ಅನುಭವಗಳಿಗೆ ಜಾಗೃತಗೊಳಿಸುವ ಅರ್ಥವನ್ನು ನೀಡುವ ಈ ಸಂಚಿಕೆ ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಮಂಗಳೂರು ಮೂಲದ ವಿಚಾರವಾದಿ ನರೇಂದ್ರ ನಾಯಕ್ ಅವರು ಕಾರ್ಯಕ್ರಮ ನಿರೂಪಕ ಅಮಿತಾಬ್ ಬಚ್ಚನ್ ಅವರಿಗೆ ಓಪನ್ ಲೆಟರ್ ಬರೆದಿದ್ದರು.

ಅತೀಂದ್ರಿಯ ಶಕ್ತಿ ಕುರಿತಾಗಿ ಪ್ರಚಾರ ನೀಡುವುದರಿಂದ ಕಾಮನ್ ಸೆನ್ಸ್ ಗೆ ಅವಹೇಳನ ಮಾಡಿದಂತಾಗುತ್ತದೆ ಎಂದು ನರೇಂಡ್ರ ನಾಯಕ್ ಪತ್ರದಲ್ಲಿ ಹೇಳಿದ್ದರು. ನರೇಂದ್ರ ನಾಯಕ್ ಅವರು ಅಖಿಲ ಭಾರತ ವಿಚಾರವಾದಿಗಳ ಸಂಘದ ಅಧ್ಯಕ್ಷರಾಗಿದ್ದಾರೆ. 

ಹಾಗೊಂದು ವೇಳೆ ಅತೀಂದ್ರಿಯ ಶಕ್ತಿ ನಿಜಕ್ಕೂ ಎಂದಿದಲ್ಲಿ ಅದೊಂದು ಅತ್ಯದ್ಭುತ ಆವಿಷ್ಕಾರವಾಗುತ್ತಿತ್ತು. ಅದಕ್ಕೆ ನೊಬೆಲ್ ಪ್ರಶಸ್ತಿ ಕೊಡುತ್ತಿದ್ದರು ಎಂದು ನಾಯಕ್ ತಿಳಿಸಿದ್ದರು.  

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಸಂಘಟಕರು ನರೇಂದ್ರ ನಾಯಕ್ ಅವರಿಗೆ ಮೇಲ್ ಮೂಲಕ ತಾವು ಆ ವಿಶೇಷ ಸಂಚಿಕೆಯನ್ನು ಹಿಂಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೆ ಭೇಟಿ ನೀಡುವಂತೆ ತಾರಿಕ್ ರೆಹಮಾನ್‌ಗೆ ಪ್ರಧಾನಿ ಮೋದಿ ಆಹ್ವಾನ!

AI ಇಂಪ್ಯಾಕ್ಟ್ ಶೃಂಗಸಭೆ ಟಾರ್ಗೆಟ್: ವಿದೇಶಿಗರಿಂದ ದಾಳಿ ಸಾಧ್ಯತೆ, ಗುಪ್ತಚರ ವರದಿ ಬೆನ್ನಲ್ಲೇ G20 ಗ್ರೇಡ್ ಸೈಬರ್ ಭದ್ರತಾ ವ್ಯವಸ್ಥೆ!

T20 World Cup 2026: ಸ್ಕಾಟ್ಲೆಂಡ್ ವಿರುದ್ಧ ನೇಪಾಳಕ್ಕೆ 7 ವಿಕೆಟ್ ಗಳ ಭರ್ಜರಿ ಜಯ!

ಭಾರತದಲ್ಲಿ ವಯಸ್ಸಿನ ಆಧಾರದ ಮೇಲೆ 'ಸಾಮಾಜಿಕ ಜಾಲತಾಣ ನಿಷೇಧ' ಕುರಿತು ಚರ್ಚೆ: ಅಶ್ವಿನಿ ವೈಷ್ಣವ್

'ಕರಾವಳಿ' ಹೂಡಿಕೆ ವಿವಾದ: ಪ್ರಿಯಾಂಕ್ ಖರ್ಗೆ ಸಹಜವಾಗಿ ಹೇಳಿದ್ದಾರೆ, ಆದರೆ ದಕ್ಷಿಣ ಕನ್ನಡ ಬದಲಾಗುತ್ತಿದೆ; ಪರಮೇಶ್ವರ್

SCROLL FOR NEXT