ಪುತ್ರಿಯ ಖಾಸಗಿ ಫೋಟೊ ತೋರಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್: ಸಾಲ ವಸೂಲಿಗೆ ವಿಕ್ಷಿಪ್ತ ಮಾರ್ಗ

2020ರಲ್ಲಿ ಗೋಮತಿ ಕುಟುಂಬದವರಿಗೆ ರಮೇಶ್ ಮನೆ ಖರೀದಿಗೆಂದು 50 ಲಕ್ಷ ರೂ.ಗಳ ಸಾಲ ನೀಡಿದ್ದರು. ಸಾಲ ಮರಳಿಸುವಂತೆ ಎಷ್ಟು ಕೇಳಿಕೊಂಡಿದ್ದರೂ ಗೋಮತಿ ಎಂಬುವವರು ಸಾಲ ಮರಳಿಸಿರಲಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಸಾಲ ಮರಳಿಸದಿದ್ದರೆ ಪುತ್ರಿಯ ಖಾಸಗಿ ಫೋಟೊಗಳನ್ನು ಬಹಿರಂಗಪಡಿಸುವುದಾಗಿ ಮಹಿಳೆಗೆ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ವಿ. ರಮೇಶ್ ಎಂಬುವವರು ಬಂಧಿತ ವ್ಯಕ್ತಿ. ತಮಿಳುನಾಡು ಮೂಲದ ಅವರು ಅಮೆರಿಕದಲ್ಲಿ ಹಲವು ದಶಕಗಳಂದ ನೆಲೆಸಿದ್ದರು. 2020ರಲ್ಲಿ ಗೋಮತಿ ಕುಟುಂಬದವರಿಗೆ ರಮೇಶ್ ಮನೆ ಖರೀದಿಗೆಂದು 50 ಲಕ್ಷ ರೂ.ಗಳ ಸಾಲ ನೀಡಿದ್ದರು.

ಸಾಲ ಮರಳಿಸುವಂತೆ ಎಷ್ಟು ಕೇಳಿಕೊಂಡಿದ್ದರೂ ಗೋಮತಿ ಎಂಬುವವರು ಸಾಲ ಮರಳಿಸಿರಲಿಲ್ಲ. ಹೀಗಾಗಿ ಅವರು ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದರು ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ. 

ನವೆಂಬರ್ 6ರಂದು ಆರೋಪಿ ರಮೇಶ್ ಒಂದು ತಿಂಗಳ ಕಾಲ ಭಾರತಕ್ಕೆ ಬಂದಿದ್ದರು. ಈ ಸಂದರ್ಭ ಅವರು ಗೋಮತಿ ಅವರ ಮನೆಗೆ ತೆರಳಿ ಅಮೆರಿಕದಲ್ಲಿ ನೆಲೆಸಿದ್ದ ಅವರ ಪುತ್ರಿಯ ಖಾಸಗಿ ಫೋಟೊಗಳನ್ನು ತೋರಿಸಿ ಬೆದರಿಕೆ ಒಡ್ಡಿದ್ದಾಗಿ ಗೋಮತಿ ದೂರಿನಲ್ಲಿ ತಿಳಿಸಿದ್ದಾರೆ.

ಅಮೆರಿಕದಲ್ಲಿ ನೆಲೆಸಿದ್ದ ಗೋಮತಿ ಅವರ ಪುತ್ರಿಗೆ ವಿವಾಹ ನಿಶ್ಚಯವಾಗಿದ್ದು, ಸಾಲ ಮರಳಿಸದಿದ್ದರೆ ಖಾಸಗಿ ಫೋಟೊಗಳನ್ನು ವರನ ಮನೆಯವರಿಗೆ ನೀಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾಗಿ ತಿಳಿದುಬಂದಿದೆ. ಆರೋಪಿ ಸದ್ಯ ಪೊಲೀಸರ ವಶದಲ್ಲಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com