ಮೆಟ್ರೋ ರೈಲು 
ರಾಜ್ಯ

ಅಕ್ಟೋಬರ್ 21 ರಿಂದ ಬೆಂಗಳೂರು ಮೆಟ್ರೋಗೆ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್!

ಬೆಂಗಳೂರು ಮೆಟ್ರೋ ಸೇವೆ ಪ್ರಾರಂಭವಾಗಿ 10 ವರ್ಷಗಳು ಪೂರ್ಣಗೊಳ್ಳುತ್ತಿರುವ ಅಂಗವಾಗಿ ಬಿಎಂಆರ್ ಸಿಎಲ್ ಅ.21 ರಂದು, ಬಹುನಿರೀಕ್ಷಿತ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ನ್ನು ಬಿಡುಗಡೆ ಮಾಡುತ್ತಿದೆ.

ಬೆಂಗಳೂರು: ಬೆಂಗಳೂರು ಮೆಟ್ರೋ ಸೇವೆ ಪ್ರಾರಂಭವಾಗಿ 10 ವರ್ಷಗಳು ಪೂರ್ಣಗೊಳ್ಳುತ್ತಿರುವ ಅಂಗವಾಗಿ ಬಿಎಂಆರ್ ಸಿಎಲ್ ಅ.21 ರಂದು, ಬಹುನಿರೀಕ್ಷಿತ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ನ್ನು ಬಿಡುಗಡೆ ಮಾಡುತ್ತಿದೆ.

ಒಂದು ದೇಶ, ಒಂದು ಕಾರ್ಡ್ ಬಹು ನಿರೀಕ್ಷಿತವಾಗಿದ್ದು ಮೊದಲ ಬ್ಯಾಚ್ ನಲ್ಲಿ 25,000 ಕಾರ್ಡ್ ಗಳನ್ನು ಬಿಎಂಆರ್ ಸಿಎಲ್ ತರಿಸಿಕೊಳ್ಳಲಾಗುತ್ತಿದೆ. ಆದರೆ ಇವುಗಳನ್ನು ಗ್ರಾಹಕರಿಗೆ ತಲುಪಿಸುವುದಕ್ಕೆ ಬಿಎಂಟಿಸಿ ಇನ್ನೂ ಸಿದ್ಧಗೊಂಡಿಲ್ಲ. 

ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಎಂದರೇನು?

ರುಪೇ ಪೇಮೆಂಟ್ ವ್ಯವಸ್ಥೆಯ ಆಧಾರದಲ್ಲಿ ಈ ಕಾರ್ಡ್ ಕಾರ್ಯನಿರ್ವಹಣೆ ಮಾಡಲಿದ್ದು ಬಸ್, ಪಾರ್ಕಿಂಗ್, ಎಲ್ಲಾ ಕಡೆಯ ಮೆಟ್ರೋ ನೆಟ್ವರ್ಕ್, ರೀಟೇಲ್ ಶಾಪಿಂಗ್ ಗಳಲ್ಲಿ ಒಂದೇ ಕಾರ್ಡ್ ಮೂಲಕ ವ್ಯವಹರಿಸಬಹುದಾಗಿದೆ. 

ಎನ್ ಸಿಎಂಸಿಯ ಬಗ್ಗೆ ಬಿಎಂಆರ್ ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾತನಾಡಿದ್ದು, ಮೊದಲ ಹಂತದ ಮೆಟ್ರೋ ನಿಲ್ದಾಣದಲ್ಲಿ ಸ್ವಯಂಚಾಲಿತ ಪಾವತಿ ಗೇಟ್ ಗಳನ್ನು ಎನ್ ಸಿಎಂಸಿ ಕಾರ್ಡ್ ಗಳ ಬಳಕೆಗೆ ಅನುಗುಣವಾಗಿ ಬದಲಾವಣೆ ಮಾಡಲಾಗಿದೆ. ಎರಡನೇ ಹಂತದ ಮೆಟ್ರೋ ಸ್ಟೇಷನ್ ಗಳಲ್ಲಿ ಸಿದ್ಧಗೊಂಡಿದೆ. ರುಪೇ ಡೆಬಿಟ್ ಕಾರ್ಡ್ ಗಳು ಎಲ್ಲಾ ಬ್ಯಾಂಕ್ ಹಗೂ ಮೆಟ್ರೋ ಸ್ಟೇಷನ್ ಗಳಲ್ಲಿ ಲಭ್ಯವಿರಲಿದೆ" ಎಂದು ಅಂಜುಮ್ ಪರ್ವೇಜ್ ಹೇಳಿದ್ದಾರೆ. ಎನ್ ಸಿಎಂಸಿ ಬೆಲೆ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಅವರು, ಈ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿದೆ. ಆದರೆ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!