ರಾಜ್ಯ

ಬೆಂಗಳೂರು: ರಾಮಮೂರ್ತಿನಗರ ಕಟ್ಟಡ ಕುಸಿತ ಪ್ರಕರಣ; ಮನೆ ಮಾಲಕಿ ಬಂಧನ

Shilpa D

ಬೆಂಗಳೂರು: ಗುರುವಾರ ಸಂಜೆ ರಾಮಮೂರ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ತೂರಿ ನಗರದಲ್ಲಿ ಮೂರಂತಸ್ತಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮನೆಯ ಮಾಲಕಿ ಆಯೇಷಾ ಬೇಗಂ ಎಂಬುವರನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ.

ದೊಡ್ಡ ಬಾಣಸವಾಡಿ ನಿವಾಸಿ  ಆಯೇಷಾ ಬೇಗಂ ಅವರು ನಾಲ್ಕು ಮನೆಗಳಲ್ಲಿ ಮೂರು ಮನೆಗಳನ್ನು ಬಿಲ್ಡರ್‌ಗೆ ಮಾರಿದ್ದರು ಮತ್ತು ತಮ್ಮ ಕುಟುಂಬಕ್ಕಾಗಿ ಒಂದು ಮನೆಯನ್ನು ಇಟ್ಟುಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಬಿಬಿಎಂಪಿ ಅಧಿಕಾರಿಗಳು ತನಿಖೆ ನಡೆಸಿದ್ದು, 2013 ರಲ್ಲಿ ಎರಡು ಹೆಚ್ಚುವರಿ  ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸುವ ಮೂಲಕ ಸ್ಪಷ್ಟವಾದ ಉಲ್ಲಂಘನೆ ಮಾಡಿದ್ದು, ನಿರ್ಮಾಣ ಗುಣಮಟ್ಟ ಕಳಪೆಯಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ವಿಚಾರಣೆಗಾಗಿ ನಾವು ಆಯೇಷಾ ಬೇಗ್ ಅವರನ್ನು ಪೋಲಿಸ್ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಕನ್ ಸ್ಟ್ರಕ್ಟರ್ ಮತ್ತು ಎಂಜಿನಿಯರ್ ಸೇರಿದಂತೆ ಹೆಚ್ಚಿನ ಜನರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವಾರಗಳಲ್ಲಿ ನಡೆದ ಮೂರನೇ ಘಟನೆಯಲ್ಲಿ, ಕಸ್ತೂರಿ ನಗರದ ವೈದ್ಯರ ಬಡಾವಣೆಯಲ್ಲಿ ನಾಲ್ಕು ಅಂತಸ್ತಿನ ಅಪಾರ್ಟ್ ಮೆಂಟ್ ಕುಸಿದಿತ್ತು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಮೂವರು ಬಾಡಿಗೆದಾರರಾದ ಅಂಬರೀಶ್ ಪಾಂಡೆ, ಅಂಕುಶ್ ಅಗರ್ವಾಲ್ ಮತ್ತು ಸಂಜನಾ ಪಾವಟೆ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ರಕ್ಷಿಸಿದ್ದಾರೆ.

SCROLL FOR NEXT