ರಾಜ್ಯ

ರಾಜ್ಯದಲ್ಲಿ ಕೊರೋನಾದಿಂದ ಚೇತರಿಸಿಕೊಂಡ 151 ಮಂದಿಯಲ್ಲಿ ಕ್ಷಯರೋಗ ಪತ್ತೆ

Lingaraj Badiger

ಬೆಂಗಳೂರು: ಕರ್ನಾಟಕದಲ್ಲಿ ಒಂದು ತಿಂಗಳ ಕಾಲ ನಡೆದ ಕ್ಷಯರೋಗ ಸಮೀಕ್ಷೆಯಲ್ಲಿ ಒಟ್ಟು 225 ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. 225 ರಲ್ಲಿ ಕೋವಿಡ್ ನಿಂದ ಚೇತರಿಸಿಕೊಂಡ 151 ರೋಗಿಗಳಲ್ಲಿ ಟಿಬಿ ಪತ್ತೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಗಸ್ಟ್ 16 ರಿಂದ ಸೆಪ್ಟೆಂಬರ್ 11 ರ ನಡುವೆ ಒಂದು ಬಾರಿ ಮನೆ-ಮನೆಗೆ ಸಮೀಕ್ಷೆ ನಡೆಸಿದ್ದು, ಒಟ್ಟು 7,66,137 ಜನರನ್ನು ಪರೀಕ್ಷಿಸಿದೆ.

ಬೆಂಗಳೂರು ನಗರದಲ್ಲಿ(44), ಬಳ್ಳಾರಿ(25), ಮೈಸೂರು(14), ಚಿತ್ರದುರ್ಗ(13), ಕಲಬುರಗಿ(13) ಮತ್ತು ಕೊಪ್ಪಳ(13)ದಲ್ಲಿ ಅತಿಹೆಚ್ಚು ಟಿಬಿ ಪ್ರಕರಣಗಳು ವರದಿಯಾಗಿವೆ. ವಿಜಯಪುರ, ಕೋಲಾರ ಮತ್ತು ಯಾದಗಿರಿಯಲ್ಲಿ ಯಾವುದೇ ಟಿಬಿ ಪ್ರಕರಣಗಳು ವರದಿಯಾಗಿಲ್ಲ.

ಟಿಬಿ ಕಾಣಿಸಿಕೊಂಡಿರುವ 151 ಜನರಿಗೆ ಈ ವರ್ಷದ ಜನವರಿ ಮತ್ತು ಜೂನ್ ನಡುವೆ ಕೋವಿಡ್‌ ಸೋಂಕು ತಗುಲಿತ್ತು. ಅವರು ಆರು ತಿಂಗಳ ಕಾಲ ನಿರಂತರವಾಗಿ ಕ್ಷಯರೋಗ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ತಮ್ಮ ಮಾತ್ರೆಗಳನ್ನು ಕಳೆದುಕೊಂಡರೆ ಆಶಾ ಕಾರ್ಯಕರ್ತರು ಅವರ ಮನೆಗಳಿಗೆ ಭೇಟಿ ಮಾಡಿ ಮಾತ್ರೆ ನೀಡುತ್ತಾರೆ. ಬಳಸಿದ ಟ್ಯಾಬ್ಲೆಟ್ ಸ್ಟ್ರಿಪ್‌ಗಳನ್ನು ಅವರು ಹಿಂದಿರುಗಿಸಬೇಕು. ನಾವು ಅದನ್ನು ಪರಿಶೀಲಿಸುತ್ತೇವೆ. ಅಲ್ಲದೆ, ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಪೌಷ್ಠಿಕಾಂಶ ವೆಚ್ಚಕ್ಕಾಗಿ 500 ರೂ.ಗಳನ್ನು ಅವರಿಗೆ ನೀಡಲಾಗುತ್ತದೆ "ಎಂದು ಟಿಬಿಯ ರಾಜ್ಯ ಜಂಟಿ ನಿರ್ದೇಶಕ ಡಾ.ರಮೇಶ್ ರೆಡ್ಡಿ ಅವರು ಹೇಳಿದ್ದಾರೆ.

SCROLL FOR NEXT