ಡಾ ಕೆ ಸುಧಾಕರ್ 
ರಾಜ್ಯ

"ನಮ್ಮ ಕ್ಲಿನಿಕ್‌" ಲೋಗೊ ಡಿಸೈನ್‌ ಮಾಡಿ, ಪ್ರಶಸ್ತಿ ಗೆಲ್ಲಿ

ರಾಜ್ಯದ ಜನತೆಯ ಆರೋಗ್ಯ ಸೇವೆಗೆ  ರಾಜ್ಯ ಸರ್ಕಾರ ಶ್ರೀಘ್ರದಲ್ಲೇ ನಮ್ಮ ಕ್ಲಿನಿಕ್‌ ಅನ್ನು ಆರಂಭ ಮಾಡಲಿದೆ. ಆದರೆ ಅದಕ್ಕೂ ಮುನ್ನವೇ ನಮ್ಮ ಕ್ಲಿನಿಕ್‌ ಜೊತೆ ಕೈ ಜೋಡಿಸಲು ಆರೋಗ್ಯ ಇಲಾಖೆ ಸುವರ್ಣಾವಕಾಶ ಮಾಡಿಕೊಟ್ಟಿದೆ. 

ಬೆಂಗಳೂರು: ರಾಜ್ಯದ ಜನತೆಯ ಆರೋಗ್ಯ ಸೇವೆಗೆ  ರಾಜ್ಯ ಸರ್ಕಾರ ಶ್ರೀಘ್ರದಲ್ಲೇ ನಮ್ಮ ಕ್ಲಿನಿಕ್‌ ಅನ್ನು ಆರಂಭ ಮಾಡಲಿದೆ. ಆದರೆ ಅದಕ್ಕೂ ಮುನ್ನವೇ ನಮ್ಮ ಕ್ಲಿನಿಕ್‌ ಜೊತೆ ಕೈ ಜೋಡಿಸಲು ಆರೋಗ್ಯ ಇಲಾಖೆ ಸುವರ್ಣಾವಕಾಶ ಮಾಡಿಕೊಟ್ಟಿದೆ. 

ಸರ್ಕಾರವು 'ನಮ್ಮ ಕ್ಲಿನಿಕ್‌"ಗೆ ವಿಶಿಷ್ಟವಾದ ಗುರುತನ್ನು ಎದುರು ನೋಡುತ್ತಿದೆ. ಸೃಜನಾತ್ಮಕ ಮತ್ತು ನವೀನ ಲೋಗೋ ವಿನ್ಯಾಸ ಮಾಡಲು ರಾಜ್ಯದ ಜನತೆ ಅವಕಾಶವಿದೆ. ನಮ್ಮ ಕ್ಲಿನಿಕ್‌ನ ವಿಭಿನ್ನ ಮತ್ತು ಆಕರ್ಷಕ ಗುರುತು ಹೇಗಿರಬೇಕು ಅನ್ನುವುದನ್ನು ನೀವು ನಿರ್ಧಾರ ಮಾಡಲು ಅವಕಾಶವಿದೆ.

ರಾಜ್ಯದಲ್ಲಿ ಸುಮಾರು 436 ಕಡೆಗಳಲ್ಲಿ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ. ಇದು ರಾಜ್ಯದ ಆರೋಗ್ಯ ವ್ಯವಸ್ಥೆಗೆ ಹೊಸ ಸ್ಪರ್ಶವನ್ನು ತಂದು ಕೊಡಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ ಕಾರ್ಯಾರಂಭ ಮಾಡಲಿದೆ.

ಆಡಳಿತ ಮತ್ತು ಅಭಿವೃದ್ಧಿಯಲ್ಲಿ ರಾಜ್ಯದ ಜನತೆಯ ಸಕ್ರಿಯ ಭಾಗವಹಿಸುವಿಕೆಯನ್ನು ಸರ್ಕಾರ ನಿರೀಕ್ಷೆ ಮಾಡುತ್ತಿದೆ. ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ಉದ್ದೇಶವನ್ನು ಬಿಂಬಿಸುವಂತೆ ಆಕರ್ಷಕ ಲೋಗೋ ವಿನ್ಯಾಸ ಮಾಡಿ logo4nammaclinic@gmail.com ಕಳುಹಿಸಬೇಕು. 

ಆಯ್ಕೆಯಾದ ವಿನ್ಯಾಸವನ್ನು ಡಿಸೈನ್‌ ಮಾಡಿದವರಿಗೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರಿಂದ ವಿಶೇಷ ವೈಯಕ್ತಿಕ ಗೌರವ ಸಿಗಲಿವೆ.  ಆಗಸ್ಟ್‌  5ರಿಂದ ಆಗಸ್ಟ್‌ 15ರ ಒಳಗೆ ಲೊಗೋ ವಿನ್ಯಾಸ ಕಳುಹಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT