ರಾಜ್ಯ

ಸಂಭ್ರಮದ ನಡುವೆ ಸೂತಕ; ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ವೇಳೆ ಕುಸಿದು ಬಿದ್ದು ನಿವೃತ್ತ ಸೈನಿಕ ಸಾವು

Srinivasamurthy VN

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ವೇಳೆ ಕುಸಿದು ಬಿದ್ದು ನಿವೃತ್ತ ಸೈನಿಕ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ಸೋಮವಾರ ವರದಿಯಾಗಿದೆ.

ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಸಾವನ್ನಪ್ಪಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದಲ್ಲಿ ನಡೆದಿದೆ. ಗಂಗಾಧರ ಗೌಡ ಎಂಬ ನಿವೃತ್ತ ಸೈನಿಕ ಮೃತ ಪಟ್ಟಿದ್ದಾರೆ.. ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ಹಳೆಸ್ಟೇಷನ್ ಅಮೃತ ಸರೋವರದ ಬಳಿ ಧ್ವಜಾರೋಹಣ ನೆರವೇರಿಸುವ ವೇಳೆ ನಿವೃತ್ತ ಸೈನಿಕ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ಬಳಿಕ ಆಸ್ಪತ್ರೆಗೆ ಸಾಗಿಸುವ ವೇಳೆ ನಿವೃತ್ತ ಸೈನಿಕ ಮೃತಪಟ್ಟಿದ್ದಾರೆ.

ಧ್ವಜಾರೋಹಣಕ್ಕೂ ಮುನ್ನ ನಿವೃತ್ತ ಯೋಧ ಗಂಗಾಧರ ಗೌಡ ಅವರು ಅತಿಥಿಗಳಿಗೆ ಹಾಗೂ ಸ್ಥಳೀಯರಿಗೆ ಮಾರ್ಗದರ್ಶನ ನೀಡುತ್ತಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಮಾರ್ಗದರ್ಶನ ನೀಡಿದ ನಂತರ, ಅವರು ಧ್ವಜ ಸ್ತಂಭದ ಬಳಿ ನಿಂತು ಧ್ವಜಾರೋಹಣ ಮಾಡಲು ಅತಿಥಿಗಳಿಗೆ ನಿರ್ದೇಶಿಸುತ್ತಿದ್ದರು. ಅತಿಥಿ ಧ್ವಜಾರೋಹಣಕ್ಕೆ ಸಿದ್ಧವಾದಾಗ, ನಿವೃತ್ತ ಸೈನಿಕ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು ಮತ್ತು ಸ್ಥಳೀಯರು ಅವರ ಸಹಾಯಕ್ಕೆ ಧಾವಿಸುತ್ತಾರೆ.

ನಿವೃತ್ತ ಯೋಧನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

SCROLL FOR NEXT