ಸಂಗ್ರಹ ಚಿತ್ರ 
ರಾಜ್ಯ

ರಾಜ್ಯದಲ್ಲಿ ಆನೆಗಳ ಗಣತಿಯಲ್ಲಿ ಹೆಚ್ಚಳ: ಹುಷಾರು... ಅರಣ್ಯ ಪ್ರದೇಶಗಳ ಹೊರಗೆ ಅಡ್ಡಾಡುತ್ತಿವೆ 400 ಆನೆಗಳು!

ಆನೆ-ಹುಲಿಗಳು ಹೆಚ್ಚಾಗಿರುವ ರಾಜ್ಯವೆಂಬ ಹೆಗ್ಗಳಲಿಕೆ ಪಾತ್ರವಾಗಿರುವ ಕರ್ನಾಟಕದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಗಳು ಕಂಡು ಬಂದಿದೆ.

ಬೆಂಗಳೂರು: ಆನೆ-ಹುಲಿಗಳು ಹೆಚ್ಚಾಗಿರುವ ರಾಜ್ಯವೆಂಬ ಹೆಗ್ಗಳಲಿಕೆ ಪಾತ್ರವಾಗಿರುವ ಕರ್ನಾಟಕದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಗಳು ಕಂಡು ಬಂದಿದೆ.

ಈ ಸಂಘರ್ಷಗಳ ನಡುವೆಯೂ ರಾಜ್ಯದಲ್ಲಿ ಆನೆಗಳ ಗಣತಿಯಲ್ಲಿ ಹೆಚ್ಚಳಗಳು ಕಂಡು ಬಂದಿದೆ. 2017ರ ಸಮೀಕ್ಷ ಪ್ರಕಾರ ರಾಜ್ಯದಲ್ಲಿ 6,049 ಆನಗಳಿದ್ದವು. ಇದೀಗ ಈ ಸಂಖ್ಯೆ 7,000-7,500ಕ್ಕೆ ಏರಿಕೆಯಾಗಿದೆ. ಇಷ್ಟೇ ಅಲ್ಲ, 400ಕ್ಕೂ ಹೆಚ್ಚು ಆನೆಗಳು ಅರಣ್ಯ ಪ್ರದೇಶಗಳ ಹೊರಗೆ ಅಡ್ಡಾಡುತ್ತಿದ್ದು, ಈ ಪ್ರದೇಶವನ್ನು ತನ್ನ ವಾಸಸ್ಥಳಗಳನ್ನಾಗಿ ಮಾಡಿಕೊಂಡಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

4000 ಆನೆಗಳ ಪೈಕಿ 200 ಆನೆಗಳು ಕೊಡಗು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿವೆ. ಹಾಸನದಲ್ಲಿ 60-70 ಆನೆಗಳಿದ್ದು, 100-150 ಆನೆಗಳು ಕೃಷಿ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ಆನೆಗಳು ನೆಲೆಯೂರಲು ಕಾಡಿನ ಸಾಮರ್ಥ್ಯ ಕೂಡ ಕಡಿಮೆಯಿದೆ. ಕೆಲವು ಪ್ರದೇಶಗಳಲ್ಲಿ, ಒಂದು ಆನೆಯು 1-2 ಚದರ ಕಿಮೀ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಮಾನವ-ಪ್ರಾಣಿಗಳ ಸಂಘರ್ಷದ ಪ್ರಕರಣಗಳ ಸಮಸ್ಯೆಯನ್ನು ಪರಿಹರಿಸಲು, ರಾಜ್ಯ ಸರ್ಕಾರವು ಆನೆ ಸಂಘರ್ಷ ಕಾರ್ಯಪಡೆ ಮತ್ತು ಆನೆ ಕಾರಿಡಾರ್ ಎಂದು ಘೋಷಿಸಬಹುದಾದ ಪ್ರದೇಶಗಳನ್ನು ನಿರ್ಣಯಿಸಲು ವಿಶೇಷ ಸಮಿತಿಯನ್ನು ರಚಿಸಿದೆ. ಆನೆ ದಾಳಿಗೆ ಬಲಿಯಾದವರ ಕುಟುಂಬಗಳಿಗೆ ಹಾಗೂ ಬೆಳೆ ಹಾನಿ ಪರಿಹಾರವನ್ನು ಕೂಡ ಸರ್ಕಾರ ಹೆಚ್ಚಿಸಿದೆ. ಆದರೆ, ನಿಜವಾದ ಸಮಸ್ಯೆಗೆ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ಅಧಿಕಾರಿಗಳು ಮತ್ತು ತಜ್ಞರು ಹೇಳಿದ್ದಾರೆ.

ಎಲ್ಲೆಡೆ ಜನರು ಆಶ್ರಯಿಸುತ್ತಿರುವುದರಿಂದ ಪ್ರಾಣಿಗಳು ನೆಲೆಸಲು ತಾಣವಿಲ್ಲದಂತಾಗುತ್ತಿದೆ. ಇದರಿಂದ ಅರಣ್ಯ ಪ್ರದೇಶಗಳ ಹೊರಗೆ ಆನೆಗಳು ಹೆಚ್ಚು ಅಲೆದಾಡುತ್ತಿವೆ. ವಯಸ್ಸಾದ ಆನೆಗಳು ಸಂಘರ್ಷಕ್ಕಿಳಿಯುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ 12,000 ಕ್ಕಿಂತ ಹೆಚ್ಚು ಆನೆಗಳಿವೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ತಿಳಿಸಿದೆ.

ಈ ಹಿಂದೆ ತಮಿಳುನಾಡು ಆನೆಗಳನ್ನು ತಮ್ಮ ಕಾಡಿನಿಂದ ಓಡಿಸುತ್ತಿತ್ತು. ಅಲ್ಲಿಂದ ಆನೆಗಳು ಕರ್ನಾಟಕಕ್ಕೆ ಬರುತ್ತಿದ್ದವು. ನಂತರ ಇಲ್ಲಿ ಸಂಘರ್ಷಕ್ಕಿಳಿಯುತ್ತಿತ್ತು. ಇದೀಗ ಕರ್ನಾಟಕದ ಅರಣ್ಯಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಇದಷ್ಟೇ ಅಲ್ಲದೆ, ಅರಣ್ಯದಲ್ಲಿರುವ ಹೆಣ್ಣು ಆನೆಗಳು ಗಂಡಾನೆಗಳನ್ನು ಸೆಳೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT