ಇಂಡಿಗೋ ವಿಮಾನದ ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ತಡವಾಗಿ ವಿಮಾನ ನಿಲ್ದಾಣ ತಲುಪಿದ ಇಬ್ಬರು ಇಂಡಿಗೋ ಪೈಲಟ್‌ಗಳು; ಕಾದು ಸುಸ್ತಾದ ಪ್ರಯಾಣಿಕರು

ಎರಡು ದೇಶಿ ಇಂಡಿಗೋ ವಿಮಾನಗಳ ಕ್ಯಾಪ್ಟನ್‌ಗಳು ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(ಕೆಐಎ) ತಡವಾಗಿ ತಲುಪಿದ್ದು, ಬೆಂಗಳೂರಿನಿಂದ ಪುಣೆ ಮತ್ತು ದೆಹಲಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಕಾದು ಕಾದು ಸುಸ್ತಾಗಿದ್ದರು.

ಬೆಂಗಳೂರು: ಎರಡು ದೇಶಿ ಇಂಡಿಗೋ ವಿಮಾನಗಳ ಕ್ಯಾಪ್ಟನ್‌ಗಳು ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(ಕೆಐಎ) ತಡವಾಗಿ ತಲುಪಿದ್ದು, ಬೆಂಗಳೂರಿನಿಂದ ಪುಣೆ ಮತ್ತು ದೆಹಲಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಕಾದು ಕಾದು ಸುಸ್ತಾಗಿದ್ದರು.

ಪ್ರಯಾಣಿಕರ ಪ್ರಕಾರ, ಇಂಡಿಗೋ ತನ್ನ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್‌ ನಿಂದಾಗಿ ಪೈಲಟ್ ಗಳು ಕರ್ತವ್ಯಕ್ಕೆ ತಡವಾಗಿ ವರದಿ ಮಾಡಿಕೊಂಡಿದ್ದಾರೆ ಎಂದು ಆನ್-ಬೋರ್ಡ್ ಪ್ರಕಟಣೆಗಳನ್ನು ಮಾಡಿತು ಮತ್ತು ಅವರೆಲ್ಲರೂ ನಂಬಿದ್ದಾರೆಂದು ತೋರುತ್ತದೆ.

ಆದರೆ ಶುಕ್ರವಾರ ನಗರದಲ್ಲಿ ಯಾವುದೇ ಪ್ರಮುಖ ಟ್ರಾಫಿಕ್ ಸಮಸ್ಯೆಗಳು ಇರಲಿಲ್ಲ ಎಂದು ಉನ್ನತ ಟ್ರಾಫಿಕ್ ಅಧಿಕಾರಿಗಳು ಹೇಳಿರುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ.

ಬೆಂಗಳೂರಿನಿಂದ ದೆಹಲಿಗೆ ಇಂಡಿಗೋ ವಿಮಾನ ನಿಗದಿತ ಸಮಯಕ್ಕಿಂತ 81 ನಿಮಿಷಗಳ ವಿಳಂಬವಾಗಿ ತೆರಳಿದ್ದು, ಅದರಲ್ಲಿದ್ದ ಸುಮಾರು 180 ಪ್ರಯಾಣಿಕರು ಪೈಲಟ್ ಗಾಗಿ ಕಾಯುತ್ತದ್ದರು. ವಿಮಾನ ಸಂಖ್ಯೆ. 6E 869 KIA ನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು 2. 50 ಗಂಟೆಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬೇಕಾಗಿತ್ತು. ಬದಲಿಗೆ ಮಧ್ಯಾಹ್ನ 1.21ಕ್ಕೆ ಹೊರಟು 77 ನಿಮಿಷ ತಡವಾಗಿ ಸಂಜೆ 4.07ಕ್ಕೆ ದೆಹಲಿ ತಲುಪಿದೆ.

ಇನ್ನು ವಿಳಂಬದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಇಂಡಿಗೋ, "ನಾವು ಸಮಯಕ್ಕೆ ಸರಿಯಾಗಿ ಹಾರಲು ಪ್ರಯತ್ನಿಸುತ್ತೇವೆ, ಆದಾಗ್ಯೂ, ಕೆಲವೊಮ್ಮೆ ನಮ್ಮ ಕಾರ್ಯಾಚರಣೆಯ ಅಂಶಗಳ ಅನಿಶ್ಚಿತ ಸ್ವಭಾವದಿಂದಾಗಿ, ವಿಮಾನದ ವೇಳಾಪಟ್ಟಿ ಬದಲಾವಣೆ ಅನಿವಾರ್ಯವಾಗುತ್ತವೆ. ನಿಮ್ಮ ಗಮ್ಯಸ್ಥಾನವನ್ನು ಆದಷ್ಟು ಬೇಗ ತಲುಪಲು ನಮ್ಮ ತಂಡವು ಪ್ರಯತ್ನಿಸುತ್ತಿದೆ" ಎಂದು ಟ್ವೀಟ್ ಮಾಡಿದೆ.

ಟ್ರಾಫಿಕ್ ಜಾಮ್‌ ಆರೋಪವನ್ನು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ ಎ ಸಲೀಂ ಸ್ಪಷ್ಟವಾಗಿ ತಳ್ಳಿಹಾಕಿದ್ದು, "ಇಂದು ಎಲ್ಲಿಯೂ ಯಾವುದೇ ಟ್ರಾಫಿಕ್ ಸಮಸ್ಯೆಗಳು ವರದಿಯಾಗಿಲ್ಲ. ಪೈಲಟ್‌ಗಳು ಯಾವ ರಸ್ತೆಗಳನ್ನು ಬಳಸಿದರು? ಕಳೆದ ಒಂದು ತಿಂಗಳಿನಿಂದ, ನಗರದಾದ್ಯಂತ ಟ್ರಾಫಿಕ್ ಜಾಮ್ ಕಣ್ಮರೆಯಾಗುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Yemen ಕರಾವಳಿಯಲ್ಲಿ ಭಾರತೀಯ ಧ್ವಜದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಸಮುದ್ರದಲ್ಲಿ ಮುಳುಗಿದ ಹಡಗು, 13 ಮಂದಿ ಭಾರತೀಯರು ಸೇರಿ ಎಲ್ಲಾ 14 ಸಿಬ್ಬಂದಿ ರಕ್ಷಣೆ..!

Hormuz ಜಲಸಂಧಿ ವಿವಾದ: 'ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವೇ ಇಲ್ಲ'; ಯಾರ ಅನುಮತಿ ಬೇಕಿಲ್ಲ ಎಂದ ಅಮೆರಿಕಕ್ಕೆ Iran ತಿರುಗೇಟು..!

ಮಾಧ್ಯಮಗಳ ಧ್ವನಿ ಅಡಗಿಸಲು ಪಾಕ್‌ ಮುಂದು? ಅನುಮತಿ ಇಲ್ಲದೆ ವರದಿಗಾರಿಕೆಗೆ ನಿಷೇಧ; ಸತ್ಯ ಮುಚ್ಚಿಡಲು ವಿದೇಶಿ ಮಾಧ್ಯಮಗಳ ರೆಕ್ಕೆ ಕತ್ತರಿಸಿದ ಸರ್ಕಾರ..!

Los Angeles ಭೇಟಿಗೂ ಮುನ್ನ ಟ್ರಂಪ್‌ಗೆ ಆಘಾತ; ಗಾಲ್ಫ್‌ ಮೈದಾನದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿ ಬಂಧನ, ಹತ್ಯೆಗೆ ಸಂಚು ಶಂಕೆ..!

ಭಾರತದ ಯುವಜನತೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ: ಭಾವನಾತ್ಮಕ Video ಮೂಲಕ ಮನದಾಳದ ಮಾತು ಹಂಚಿಕೊಂಡ ಸೋನಂ ವಾಂಗ್‌ಚುಕ್‌