ಜಿ20 ವಿಜ್ಞಾನ ಸಮೂಹಕ್ಕೆ ಐಐಎಸ್ ಸಿ 
ರಾಜ್ಯ

ಬೆಂಗಳೂರು: ಜಿ20 ವಿಜ್ಞಾನ ಸಮೂಹಕ್ಕೆ ಐಐಎಸ್ ಸಿ

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಜಿ20 ಯ ವಿಜ್ಞಾನ ಕಾರ್ಯ ಸಮೂಹ ಎಸ್.20 ಸಚಿವಾಲಯವಾಗಿ ಕಾರ್ಯನಿರ್ವಹಿಸಲಿದೆ.

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಜಿ20 ಯ ವಿಜ್ಞಾನ ಕಾರ್ಯ ಸಮೂಹ ಎಸ್.20 ಸಚಿವಾಲಯವಾಗಿ ಕಾರ್ಯನಿರ್ವಹಿಸಲಿದೆ.

ಜಿ20 ಗೆ ಭಾರತ ಅಧ್ಯಕ್ಷತೆ ವಹಿಸಿಕೊಂಡಿದ್ದು, ಬೆಂಗಳೂರು ಐಐಎಸ್ ಸಿ ಎಸ್ 20ಯ ಭಾಗವಾಗಿರಲಿದೆ.
 
ಜಿ20 ಹಲವು ವರ್ಷಗಳಿಂದ ಹವಾಮಾನ ಬದಲಾಣೆ ಹಾಗೂ ಸ್ಥಿರ ಅಭಿವೃದ್ಧಿ ಸೇರಿದಂತೆ ಜಾಗತಿಕ ಸವಾಲುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಹಲವು ಗುಂಪುಗಳನ್ನು ಹೊಂದಿದ್ದು ವಿಜ್ಞಾನ ಕಾರ್ಯ ಸಮೂಹ ಎಸ್.20 ಸಹ ಈ ಪೈಕಿ ಒಂದಾಗಿದೆ. 

ಆರ್ಥಿಕ ಬೆಳವಣಿಗೆ ಹಾಗೂ ಲಕ್ಷಾಂತರ ಮಂದಿಯನ್ನು ಬಡತನದಿಂದ ಮೇಲೆತ್ತುವುದಕ್ಕೆ ವಿಜ್ಞಾನ ಮಹತ್ವದ ಪಾತ್ರ ವಹಿಸುತ್ತದೆ. ಅರ್ಥಪೂರ್ಣ ಅಭಿವೃದ್ಧಿಗೆ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರದ ಅಗತ್ಯವಿರುತ್ತದೆ. ಈ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಅನುಭವಗಳು ಮತ್ತು ಪ್ರಗತಿಗಳನ್ನು ಪರಸ್ಪರ ಹಂಚಿಕೊಳ್ಳಬಹುದಾಗಿದೆ ಎಂದು ಐಐಎಸ್ ಸಿ ಹೇಳಿದೆ. 

ನವೀನ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಎಂಬುದು ಎಸ್ 20ಯ 20203 ರ ಥೀಮ್ ಆಗಿರಲಿದೆ, ವರ್ಷಪೂರ್ತಿ ಅಗರ್ತಲಾ, ಲಕ್ಷದ್ವೀಪ, ಭೋಪಾಲ್ ಗಳಲ್ಲಿ ಚರ್ಚೆಗಳು ನಡೆಯಲಿವೆ ಎಂದು ಐಐಎಸ್ ಸಿ ತಿಳಿಸಿದೆ.
 
ಜಾಗತಿಕ ಸಮಗ್ರ ಆರೋಗ್ಯ, ಹಸಿರು ಭವಿಷ್ಯಕ್ಕಾಗಿ ಶುದ್ಧ ಇಂಧನ, ಸಮಾಜ ಮತ್ತು ಸಂಸ್ಕೃತಿಗೆ ವಿಜ್ಞಾನವನ್ನು ಸಂಪರ್ಕಿಸುವ ಮೂರು ವಿಷಯಗಳ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿರಲಿದೆ ಎಂದು ಸಂಸ್ಥೆ ತಿಳಿಸಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT