ರಾಜ್ಯ

ಕೆಂಪೇಗೌಡ ಏರ್ ಪೋರ್ಟ್ ಗೆ 2024ರ ಡಿಸೆಂಬರ್ ಒಳಗೆ ಮೆಟ್ರೊ ಸಂಪರ್ಕ: ಸಿಎಂ ಬೊಮ್ಮಾಯಿ

Sumana Upadhyaya

ಬೆಳಗಾವಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ 2024ರ ವರ್ಷಾಂತ್ಯದೊಳಗೆ ಪೂರ್ಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಕಲಾಪ ವೇಳೆ ಈ ವಿಷಯ ತಿಳಿಸಿದ ಅವರು ಕೆಂಪೇಗೌಡ ಏರ್ ಪೋರ್ಟ್ ಗೆ ಮೆಟ್ರೊ ರೈಲು ಸಂಚಾರ ಸಂಪರ್ಕಿಸುವ ಕೆಲಸ ಭರದಿಂದ ಸಾಗುತ್ತಿದ್ದು ಇನ್ನೆರಡು ವರ್ಷಗಳಲ್ಲಿ ಪೂರ್ಣವಾಗಲಿದೆ ಎಂದು ತಿಳಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗಕ್ಕಾಗಿ ಭೂ ಸ್ವಾಧೀನ ಕೆಲಸ ಪೂರ್ಣಗೊಂಡಿದ್ದು, ಟೆಂಡರ್ ನೀಡುವಿಕೆ ಅಂತಿಮ ಹಂತದಲ್ಲಿದೆ. ಡಿಸೆಂಬರ್ 2024ರ ವೇಳೆಗೆ ಕೆಆರ್ ಪುರಂ- ವಿಮಾನ ನಿಲ್ದಾಣ ಮಾರ್ಗ ಪೂರ್ಣಗೊಳ್ಳುವ ವಿಶ್ವಾಸವನ್ನು ಈ ಹಿಂದೆ ಬಿಎಂಆರ್ ಸಿಎಲ್ ವ್ಯಕ್ತಪಡಿಸಿತ್ತು.

ಏರ್ ಪೋರ್ಟ್ ಮಾರ್ಗದಲ್ಲಿ ಬೆನ್ನಿಗಾನಹಳ್ಳಿ, ಹೊರಮಾವು, ಹೆಚ್ ಆರ್ ಬಿಆರ್ ಲೇಔಟ್, ಕಲ್ಯಾಣ್ ನಗರ, ಹೆಚ್ ಬಿಆರ್ ಲೇಔಟ್,. ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೋಡಿಗೆಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ, ಬಾಗಲೂರು ಕ್ರಾಸ್, ಬೆಟ್ಟ ಹಲಸೂರು, ದೊಡ್ಡ ಜಾಲ, ಏರ್ ಪೋರ್ಟ್ ಸಿಟಿ ಮತ್ತು ಕೆಐಎ ಟರ್ಮಿನಲ್ ಸೇರಿದಂತೆ 17 ಮೆಟ್ರೋ ನಿಲ್ದಾಣಗಳು ಬರಲಿವೆ.

SCROLL FOR NEXT