ರಾಜ್ಯ

ದಾಂಡೇಲಿಯಲ್ಲಿ ಮೊಸಳೆ ದಾಳಿ ಪ್ರಕರಣ ಹೆಚ್ಚಳ: ಪ್ರವಾಸಿಗರ ರಕ್ಷಣೆಗೆ ಎಚ್ಚರಿಕೆ ಫಲಕ ಹಾಕಿದ ಅಧಿಕಾರಿಗಳು!

Manjula VN

ಹುಬ್ಬಳ್ಳಿ: ಮೊಸಳೆ ದಾಳಿಯಿಂದ ಪ್ರವಾಸಿಗರ ರಕ್ಷಿಸಲು ದಾಂಡೇಲಿಯ ಕಾಳಿ ನದಿ ತೀರದಲ್ಲಿ ಅರಣ್ಯ ಇಲಾಖೆ ಎಚ್ಚರಿಕೆ ಫಲಕಗಳನ್ನು ಹಾಕಿದೆ.

ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆ ದಾಳಿಗೆ ಈ ವರ್ಷ ಮೂವರು ಬಲಿಯಾಗಿದ್ದಾರೆ. ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಇದೀಗ ನದಿ ತೀರದಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿದ್ದಾರೆ.

ನದಿಯಲ್ಲಿ ಮೊಸಳಗಳು ಹೆಚ್ಚಾಗಿದ್ದು, ಈ ಸೂಚನಾ ಫಲಕವು ಪ್ರವಾಸಿಗರು, ಭಕ್ತರು, ಮತ್ತು ಸ್ಥಳೀಯರು ಎಚ್ಚರಿಕೆಯಿಂದಿರಲು ಸಹಾಯ ಮಾಡುತ್ತದೆ ಮತ್ತು ಜಾಗೃತಿಯನ್ನೂ ಮೂಡಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಚ್ಚರಿಕೆಯ ಫಲಕದಲ್ಲಿ ಮೊಸಳಗಳಿಗೆ ಆಹಾರ ನೀಡದಿರಲು, ನೀರಿನಲ್ಲಿ ಈಜದಂತೆ, ರಾತ್ರಿಯಲ್ಲಿ ಓಡಾಡುವಾಗ ಎಚ್ಚರಿಕೆಯಿಂದಿರುವಂತೆ, ಪ್ರಾಣಿಗಳಿಗೆ ತೊಂದರೆ ನೀಡದಂತೆ ಹಾಗೂ ಮೊಸಳೆಗಳ ಹತ್ತಿರ ಮಕ್ಕಳನ್ನು ಕರೆದೊಯ್ಯದಂತೆ ಸೂಚಿಸಲಾಗಿದೆ.

ಪ್ರವಾಸಿಗರ ಹೊರತುಪಡಿಸಿ ನದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಭಕ್ತರು ಇಲ್ಲಿಗೆ ಬರುತ್ತಾರೆ. ನದಿಯ ಬಳಿ ದೇವಸ್ಥಾನ ಇರುವ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವವರು ನದಿ ಬಳಿ ಬರುತ್ತಾರೆ. ಅಸ್ತಿ ವಿಸರ್ಜನೆ ಮಾಡಲು, ಇತರೆ ಧಾರ್ಮಿಕ ಆಚರಣೆಗಳ ನಡೆಸಲು ಇಲ್ಲಿಗೆ ಬರುತ್ತಾರೆ. ನದಿಯ ನೀರು ನೋಡುತ್ತಿದ್ದಂತೆಯೇ ಮೊಸಳೆಗಳ ಬಗ್ಗೆ ತಿಳಿಯದೆಯೇ ಈಜಲು ಹೋಗಿ ತಮ್ಮ ಪ್ರಾಣ ಅಪಾಯ ಸಿಲುಕುವಂತೆ ಮಾಡುತ್ತಾರೆ. ಹೀಗಾಗಿ ನದಿಯಲ್ಲಿ ಮೊಸಳೆಗಳಿರುವ ಬಗ್ಗೆ ಬೋರ್ಡ್ ಹಾಕಲಾಗಿದ್ದು, ಇದು ಜನರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಹಳಿಯಾಳ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಂಡೇಲಿ ಮೂಲಕ ಹಾದು ಹೋಗುವ ಕಾಳಿ ನದಿಯಲ್ಲಿ ಹಲವು ವರ್ಷಗಳಿಂದ ಮೊಸಳೆಗಳ ಸಂಖ್ಯೆ ಹೆಚ್ಚಾಗಿ. ನೀರಿನ ಮಟ್ಟ ಕಡಿಮೆಯಾದಾಗ ಹಾವುಗಳು ಬಂಡೆಗಳ ಮೇಲೆ ಮತ್ತು ದಡದ ಉದ್ದಕ್ಕೂ ಸೂರ್ಯನ ಬಿಸಿಲಿಗೆ ತಮ್ಮ ಮೈಯನ್ನೊಡ್ಡಿ ಮಲಗುವುದು ಇಲ್ಲಿ ಸಾಮಾನ್ಯ ಎಂದಿದ್ದಾರೆ.

ದಾಂಡೇಲಿಯ ವನ್ಯಜೀವಿ ಹೋರಾಟಗಾರ ರಾಹುಲ್ ಬಾವಾಜಿ ಮಾತನಾಡಿ, ಹಲವು ವರ್ಷಗಳಿಂದ ದಾಂಡೇಲಿಯಲ್ಲಿ ಮೊಸಳೆ ದಾಳಿ ಪ್ರಕರಣಗಳು ನಡೆದಿರಲಿಲ್ಲ. ನದಿಯ ದಂಡೆಯಲ್ಲಿ ವಾಸಿಸುವ ಜನರು ಮತ್ತು ಮೊಸಳೆಗಳು ಸೌಹಾರ್ದಯುತವಾಗಿದ್ದರು. ಆದರೆ ಇತ್ತೀಚೆಗೆ ನದಿಯುದ್ದಕ್ಕೂ ನೀರು ತೆಗೆದುಕೊಳ್ಳುವುದು,  ಪೈಪ್ ಗಳ ಸಂಪರ್ಕದಿಂದಾಗಿ ಮೊಸಳೆಗಳ ಆವಾಸಸ್ಥಾನವನ್ನು ನಾಶಪಡಿಸುತ್ತಿವೆ. ಎಚ್ಚರಿಕೆಗಳ ಹೊರತಾಗಿಯೂ ಅವುಗಳ ನಿರ್ಲಕ್ಷ್ಯಿಸಿ ಕೆಲವರು ಸಾಹಸ ಮಾಡಲು ನದಿಗೆ ಇಳಿಯುತ್ತಾರೆಂದು ಹೇಳಿದ್ದಾರೆ.

SCROLL FOR NEXT