ರಾಜ್ಯ

ಬೆಂಗಳೂರು: ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲು ಸೇತುವೆ ಕಾಮಗಾರಿ ಪರಿಶೀಲಿಸಿದ ಸಚಿವ ವಿ. ಸೋಮಣ್ಣ

Nagaraja AB

ಬೆಂಗಳೂರು: ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮೇಲು ಸೇತುವೆ  ಕಾಮಗಾರಿಯನ್ನು ಸ್ಥಳೀಯ ಶಾಸಕರು ಆದ ವಸತಿ ಸಚಿವ ವಿ. ಸೋಮಣ್ಣ ಗುರುವಾರ  ಪರಿಶೀಲನೆ ನಡೆಸಿದರು.

ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಿಗ್ನಲ್ ಮುಕ್ತ  ಕಾರಿಡಾರ್ ನಿರ್ಮಿಸುವ ಸಲುವಾಗಿ  ಮಂಜುನಾಥನಗರದ  ಬಳಿ ಮೇಲುಸೇತುವೆ, ಶಿವನಗರ 1 ಮತ್ತು 2ನೇ ಮುಖ್ಯರಸ್ಥೆಯ ಕೂಡು ಸ್ಥಳದಲ್ಲಿ ಕೆಳ ಸೇತುವೆ ಹಾಗೂ ಬಸವೇಶ್ವರ ನಗರ ವೃತ್ತದ ಏಕಮುಖ ಸಂಚಾರದ ಬಳಿ  ಮೇಲು ಸೇತುವೆಯ ಗ್ರೇಡ್ ಸೆಪರೇಟರ್ ಯೋಜನೆ ಕೈಗೊಳ್ಳಲಾಗಿತ್ತು. 

ಅದರಂತೆ  ಮಂಜುನಾಥ ನಗರ ಬಳಿ 18.18 ಕೋಟಿ ರೂ. ವೆಚ್ಚದಲ್ಲಿ 270.62 ಮೀಟರ್ ಉದ್ದದ ಮೇಲುಸೇತುವೆಯನ್ನು 2018ರಲ್ಲಿ ಹಾಗೂ ಶಿವನಗರ 1 ಮತ್ತು 8ನೇ ಮುಖ್ಯರಸ್ಥೆರ ಕೂಡು ಸ್ಥಳದಲ್ಲಿ ಕೆಳ ಸೇತುವೆ ಬದಲಿಗೆ 71.98 ಕೋಟಿ ರ. ವೆಚ್ಚದಲ್ಲಿ 655 ಮೀಟರ್ ಉದ್ದದ ಮೇಲು ಸೇತುವೆ ಕಾಮಗಾರಿಯನ್ನು ಕಳೆದ ವರ್ಷ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಿಸಲಾಗಿತ್ತು.

ಇನ್ನು ಶಿವನಗರದ ನಂತರದ ಜಂಕ್ಷನ್ ಗಳಾದ ಬಸವೇಶ್ವರ ನಗರ ಜಂಕ್ಷನ್ ಮತ್ತು 72ನೇ ಅಡ್ಡರಸ್ತೆಯ ಜಂಕ್ಷನ್ ಬಳಿ ಮೇಲುಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಬಸವೇಶ್ವರ ಜಂಕ್ಷನ್ ಬಳಿ ಹೆಚ್ಚುವರಿ ಏಕಮುಖ ಸಂಚಾರದ ಮೇಲುಸೇತುವೆಯನ್ನು 20.925 ಕೋಟಿ ರೂ. ವೆಚ್ಚದಲ್ಲಿ ಒಟ್ಟು 467.35 ಮೀ ಉದ್ದ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರಕಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ ಆಗಸ್ಟ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಚಿವರು ಆದೇಶಿಸಿದರು.

SCROLL FOR NEXT