ರಾಜ್ಯ

ಸಕಲೇಶಪುರ: ಆನೆ ತುಳಿದು ರೈತ ಸಾವು

Sumana Upadhyaya

ಮಡಿಕೇರಿ: ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಆನೆಯೊಂದು ರೈತನನ್ನು ತುಳಿದು ಕೊಂದುಹಾಕಿದ ಘಟನೆ ನಡೆದಿದೆ.

ಮೃತ ರೈತನನ್ನು 32 ವರ್ಷದ ಹೆಬ್ಬನಹಳ್ಳಿಯ ಮನು ಎಂದು ಗುರುತಿಸಲಾಗಿದೆ. ಮೃತ ಮನು ಇಂದು ಬೆಳಗ್ಗೆ ಗ್ರಾಮದ ಹೊರವಲಯದಲ್ಲಿರುವ ದೇವಸ್ಥಾನಕ್ಕೆ ತೆರಳಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. 

ಮನು ನಡೆದುಕೊಂಡು ಹೋಗುತ್ತಿದ್ದಾಗ ಆನೆಯು ದೂರದಿಂದ ಕಾಣಿಸಿಕೊಂಡು ನಂತರ ಬೆನ್ನಟ್ಟಿ ಓಡಿಸಿಕೊಂಡು ಬಂತು. ಅದರಿಂದ ತಪ್ಪಿಸಿಕೊಳ್ಳಲು ಮನುಗೆ ಸಾಧ್ಯವಾಗಲಿಲ್ಲ. ಘಟನೆ ನಡೆದು ಅರ್ಧ ಗಂಟೆಯಾದರೂ ಆನೆ ಸ್ಥಳದಿಂದ ಕದಲಲಿಲ್ಲ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. 

ಗ್ರಾಮಸ್ಥರ ಗುಂಪು ಜೋರಾಗಿ ಕೂಗಿದ ನಂತರ ಆನೆ ಸ್ಥಳದಿಂದ ತೆರಳಿದೆ. ಮನುವಿನ ಇಡೀ ದೇಹ ಒಡೆದು, ದೇಹದಿಂದ ಕಾಲು ಮತ್ತು ಕೈಯನ್ನು ಬೇರ್ಪಟ್ಟಿದೆ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕ್ರೋಶಗೊಂಡ ಜನರನ್ನು ಸಮಾಧಾನಪಡಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಳೆದೊಂದು ದಶಕದಲ್ಲಿ 75ಕ್ಕೂ ಹೆಚ್ಚು ಮಂದಿ ಆನೆಗಳ ಕಾಟಕ್ಕೆ ತುತ್ತಾಗಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು. ಆನೆ ಹಾವಳಿ ತಡೆಗೆ ರಾಜ್ಯ ಸರ್ಕಾರ ವಿಫಲ ಪ್ರಯತ್ನ ನಡೆಸುತ್ತಿದೆ ಎಂದು ಕಾಫಿ ಬೆಳೆಗಾರ ಲೋಕೇಶ್ ಆರೋಪಿಸುತ್ತಾರೆ.

ಎಲ್ಲಾ ಆನೆಗಳನ್ನು ಆನೆ ಪೀಡಿತ ಪ್ರದೇಶಗಳಿಂದ ಆನೆ ಶಿಬಿರಗಳಿಗೆ ಸ್ಥಳಾಂತರಿಸುವುದು ಅಪಾಯವನ್ನು ಎದುರಿಸಲು ಮಾತ್ರ ಪರಿಹಾರವಾಗಿದೆ. ಘಟನೆಯ ನಂತರ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಸವರಾಜ್, ಸಕಲೇಶಪುರ ತಾಲೂಕಿನಲ್ಲಿ ಮಾನವ ಮತ್ತು ಆನೆಗಳ ಸಂಘರ್ಷವನ್ನು ತಡೆಯಲು ಅರಣ್ಯ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಸಂತ್ರಸ್ತ ಕುಟುಂಬಕ್ಕೆ ಸರಕಾರ ಶೀಘ್ರವೇ ಪರಿಹಾರ ನೀಡಲಿದೆ. ಆನೆಗಳ ಚಲನವಲನದ ಬಗ್ಗೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲು ಆನೆ ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

SCROLL FOR NEXT