ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕ ಹೈಕೋರ್ಟ್ ಉದ್ಯೋಗಿಗೆ ಹನಿಟ್ರ್ಯಾಪ್; 10 ಮಂದಿಯ ಖತರ್ನಾಕ್ ಗ್ಯಾಂಗ್ ಸೆರೆ

ಕರ್ನಾಟಕ ಹೈಕೋರ್ಟ್ ಉದ್ಯೋಗಿ ಜೈರಾಮ್ ಅವರನ್ನು ಹನಿಟ್ರ್ಯಾಪ್‌ಗೆ ಸಿಲುಕಿಸಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಉದ್ಯೋಗಿ ಜೈರಾಮ್ ಅವರನ್ನು ಹನಿಟ್ರ್ಯಾಪ್‌ಗೆ ಸಿಲುಕಿಸಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಎರಡು ವರ್ಷದಿಂದ ಜೈರಾಮ್‌ಗೆ ಪರಿಚಯವಾಗಿದ್ದ ಆರೋಪಿ ಅನುರಾಧ, ಕಾವ್ಯ, ಸಿದ್ದರಾಜು ಸೇರಿ ಗ್ಯಾಂಗ್ ನಲ್ಲಿದ್ದ 10 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಎರಡು ವರ್ಷದ ಹಿಂದೆ ಪ್ರಕರಣವೊಂದರ ಸಂಬಂಧ ಜೈರಾಮ್‌ಗೆ ಅನುರಾಧಾಳ ಪರಿಚಯವಾಗಿದೆ. ಆರು ತಿಂಗಳ ಹಿಂದೆ ಮನೆಯಲ್ಲಿ ಶಾರ್ಟ್ ಸೆರ್ಕ್ಯೂಟ್‌ನಿಂದ ಟಿವಿ, ಫ್ರಿಡ್ಜ್ ಎಲ್ಲಾ ಸುಟ್ಟು ಹೋಗಿದೆ ಎಂದು ಕಷ್ಟ ಹೇಳಿಕೊಂಡ ಅನುರಾಧ, ಜೈರಾಮ್‌ನಿಂದ 10 ಸಾವಿರ ಸಾಲಪಡೆದಿದ್ದಳು. ಈ ಹಣವನ್ನು ಅ.10 ರಂದು ಜೈರಾಮ್‌ಗೆ ಹಿಂದಿರುಗಿಸಿ ನಂತರ ಅ.25ರಂದು 5 ಸಾವಿರ ಸಾಲ ಕೇಳಿದ್ದಳು. ಅದರಂತೆ ಅ. 30 ರಂದು ಜೈರಾಮ್ ಆಕೆಯ ಮನೆಗೆ 5 ಸಾವಿರದೊಂದಿಗೆ ಬಂದಿದ್ದಾನೆ. ಇಲ್ಲೇ ಜೈ ರಾಮ್ ಸಿಕ್ಕಿಬಿದ್ದಿದ್ದಾರೆ.

ಐದು ಸಾವಿರ ಸಾಲು ನೀಡಲು ಮನೆಗೆ ಬಂದಿದ್ದ ಜೈರಾಮ್, ಹಣ ನೀಡಿ ಹೊರ ಬರುತ್ತಿದ್ದಂತೆ ನಾಲ್ವರು ಬಂದು ವಾಪಸ್ ಮನೆಯೊಳಗೆ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ಜೈರಾಮ್‌ನನ್ನು ಥಳಿಸಿ 2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಜೈರಾಮ್ ಪತ್ನಿ ಮತ್ತು ಮಕ್ಕಳಿಗೆ ಕರೆ ಮಾಡಿ ನನ್ನ ಪತ್ನಿಯನ್ನು ಅತ್ಯಾಚಾರ ಮಾಡಲು ಬಂದಿದ್ದಾಗಿ ಆರೋಪಿಯೊಬ್ಬ ಹೇಳಿದ್ದಾನೆ. 

ಘಟನೆ ಬಳಿಕ ಜೈರಾಮ್ ಪೊಲೀಸ್ ಠಾಣೆಗೆ ತೆರಳಿ ತನ್ನ ಬಳಿ ಇದ್ದ ಐದು ಸಾವಿರ ರೂ ಸುಲಿಗೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಅಷ್ಟಕ್ಕೂ ಹನಿಟ್ರ್ಯಾಪ್ ಬಲೆಗೆ ಜೈರಾಮ್ ಸಿಲುಕಿದ್ದು ಹೇಗೆ ಪೊಲೀಸರು ನಡೆಸಿದ ತನಿಖೆಯಿಂದ ಗೊತ್ತಾದ ಸತ್ಯನೇ ಬೇರೆಯಾಗಿತ್ತು. ಸಿದ್ದ, ಅನುರಾಧ ಮತ್ತವರ ಗ್ಯಾಂಗ್ ಸುಲಭವಾಗಿ ಹಣಗಳಿಸಲು ಸಂಚು ಮಾಡಿ ಅನುರಾಧರನ್ನು ಬಳಸಿಕೊಂಡಿದ್ದರು. ಜೈರಾಮ್ ಪರಿಚಯದ ಬಳಿಕ ಆತ್ಮೀಯವಾಗಿದ್ದ ಅನುರಾಧ ಮನೆಗೆ ಬಾ ಎಂದು ಜೈರಾಮ್‌ನನ್ನು ಕರೆಸಿಕೊಂಡಿದ್ದಾಳೆ. ಐದು ಸಾವಿರ ಹಣದೊಂದಿಗೆ ಬಂದಿದ್ದ ಜೈರಾಮ್, ಅನುರಾಧ ಕೈಗೆ ಐದು ಸಾವಿರ ಹಣವನ್ನು ನೀಡಿದ್ದಾನೆ. ಈ ವೇಳೆ ನಾಲ್ವರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ನಾಲ್ವರ ಪೈಕಿ ಓರ್ವ, ನನ್ನ ಪತ್ನಿ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಿಯಾ ಎಂದು ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ಮುಂದಿಟ್ಟುಕೊಂಡ ಗ್ಯಾಂಗ್ ಜೈರಾಮ್ ಬಳಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲ್ಲ ಎಂದಿದ್ದಕ್ಕೆ ಆರೋಪಿಯೊಬ್ಬ ಜೈರಾಮ್ ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಘಟನೆ ನಂತರ ಜೈರಾಮ್ ಕಾಮಾಕ್ಷಿಪಾಳ್ಯ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು, ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಿದ್ದ ಮೂಲತಃ ದಾವಣಗೆರೆಯವನಾಗಿದ್ದು, ನಗರದಲ್ಲಿ ರೌಡಿ ಚಟುವಟಿಕೆಯಲ್ಲಿ ತೊಡಗಿದ್ದನು. ಈತನ ಮೇಲೆ ಎರಡು ರಾಬರಿ ಸೇರಿದಂತೆ ಹಲವು ಪ್ರಕರಣಗಳಿವೆ. ಬಂಧಿತರ ವಿಚಾರಣೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT