ಸಾಂದರ್ಭಿಕ ಚಿತ್ರ 
ರಾಜ್ಯ

ಕೋಣೆಯೊಂದರಲ್ಲಿ ಪ್ರಿಯಕರನನ್ನು ಬಚ್ಚಿಟ್ಟು, ಇನ್ನೊಂದು ಕೋಣೆಯಲ್ಲಿ ಪತಿಯನ್ನು ಕೊಂದ ಮಹಿಳೆ!

ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರಹಳ್ಳಿಯ ನಿವಾಸದಲ್ಲಿ ಐವತ್ತೆರಡು ವರ್ಷದ ವ್ಯಕ್ತಿಯನ್ನು ಆತನ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಹತ್ಯೆಗೈದಿರುವ ಘಟನೆ ನ.06 ರಂದು ನಡೆದಿದೆ. ಆಘಾತಕಾರಿ ಸಂಗತಿಯೆಂದರೆ, ಅದೇ ಮನೆಯ ಮತ್ತೊಂದು ಕೋಣೆಯಲ್ಲಿದ್ದ ಪ್ರಿಯಕರ ಮತ್ತು ಸಂತ್ರಸ್ತನ ಪತ್ನಿ ಸೇರಿ ಕೊಲೆಗೆ ಸಂಚು ರೂಪಿಸಿದ್ದರು.

ಬೆಂಗಳೂರು: ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರಹಳ್ಳಿಯ ನಿವಾಸದಲ್ಲಿ ಐವತ್ತೆರಡು ವರ್ಷದ ವ್ಯಕ್ತಿಯನ್ನು ಆತನ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಹತ್ಯೆಗೈದಿರುವ ಘಟನೆ ನ.06 ರಂದು ನಡೆದಿದೆ. ಆಘಾತಕಾರಿ ಸಂಗತಿಯೆಂದರೆ, ಅದೇ ಮನೆಯ ಮತ್ತೊಂದು ಕೋಣೆಯಲ್ಲಿದ್ದ ಪ್ರಿಯಕರ ಮತ್ತು ಸಂತ್ರಸ್ತನ ಪತ್ನಿ ಸೇರಿ ಕೊಲೆಗೆ ಸಂಚು ರೂಪಿಸಿದ್ದರು.

ಸಂತ್ರಸ್ತ ರಾಕೇಶ್ ತೋಮಂಗಾ ಮತ್ತು ಆರೋಪಿ ದೇವಿ (46) ಮದುವೆಯಾಗಿ 10 ವರ್ಷಗಳು ಕಳೆದಿವೆ. ರಾಕೇಶ್ ಕಳೆದ 30 ವರ್ಷಗಳಿಂದ ನಗರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ಸಂತ್ರಸ್ತನ ಮನೆಯಲ್ಲಿ ಎರಡು ಕೊಠಡಿಗಳಿವೆ. ಒಂದು ಕೋಣೆಗೆ ದಂಪತಿ ಮಲಗಲು ಬಳಸುತ್ತಾರೆ ಮತ್ತು ಎರಡನೇ ಕೋಣೆಯಲ್ಲಿ ವಸ್ತುಗಳನ್ನು ಸಂಗ್ರಹಿಸಲು ಬಳಸುತ್ತಾರೆ. ಮಹಿಳೆಯ ಪ್ರಿಯಕರ 30 ವರ್ಷದ ಜೈನುಲ್ ಅಲಿ ಅಲಿಯಾಸ್ ಬಾಬು ಸುಮಾರು 10 ದಿನಗಳ ಕಾಲ ಲಗೇಜ್ ರೂಮಿನಲ್ಲಿದ್ದ. ಆದರೆ, ಇದನ್ನು ಸಂತ್ರಸ್ತ ಗಮನಿಸಿರಲಿಲ್ಲ. ದೇವಿಯು ತನ್ನ ಪತಿಗೆ ಲೈಂಗಿಕತೆಯಲ್ಲಿ ಆಸಕ್ತಿಯ ಕೊರತೆಯಿಂದಾಗಿ ಹತಾಶೆಗೊಂಡಿದ್ದಳು. ತನ್ನ ಗಂಡನ ಸಹೋದ್ಯೋಗಿಯಾಗಿದ್ದ ರಾಕೇಶ್‌ಗೆ ಪ್ರತಿದಿನ ಮಧ್ಯಾಹ್ನ ಊಟವನ್ನು ತೆಗೆದುಕೊಂಡು ಹೋಗುತ್ತಿದ್ದಳು ಮತ್ತು ಅವನಿಗೆ ಹತ್ತಿರವಾಗುತ್ತಿದ್ದಳು.

ಸಂತ್ರಸ್ತ ಕುಡಿತದ ಚಟ ಹೊಂದಿದ್ದು, ನಿತ್ಯ ಕುಡಿದು ಮನೆಗೆ ಬರುತ್ತಿದ್ದ. ಅಕ್ಟೋಬರ್ 28 ರಂದು ದೇವಿ ಮತ್ತು ಬಾಬು ಸೇರಿ ರಾಕೇಶ್‌ನನ್ನು ಕೊಲ್ಲಲು ಬಯಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಅಂದಿನಿಂದಲೂ ಬಾಬು ಸಂತ್ರಸ್ತನ ಮನೆಯಲ್ಲಿಯೇ ಇದ್ದ. ಕೊಲೆಯ ನಂತರ ಮಹಿಳೆ ತನ್ನ ಪತಿ ವಿಪರೀತ ಕುಡಿತದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾಳೆ. ರಾಕೇ‌ಶ್‌ನನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದುಬಂದಿದೆ. ಮಹಿಳೆ ಸಂತ್ರಸ್ತನ ಎರಡನೇ ಪತ್ನಿ. ಅವನ ಮೊದಲ ಹೆಂಡತಿ ಆತನನ್ನು ತೊರೆದಿದ್ದಳು.

'ತನ್ನ ಪತಿಯನ್ನು ಕೊಂದ ನಂತರ, ಹಿಂದಿನ ರಾತ್ರಿ ಎರಡು ಮದ್ಯದ ಬಾಟಲಿಗಳೊಂದಿಗೆ ರಾಕೇಶ್ ಮನೆಗೆ ಬಂದಿದ್ದಾಗಿ ದೇವಿ ಹೇಳಿಕೊಂಡಿದ್ದಾಳೆ. ಮದ್ಯಪಾನ ಮಾಡುವಾಗ ಆಮ್ಲೆಟ್ ಮತ್ತು ಕಬಾಬ್ ಸೇವಿಸಿದ್ದರು. ನಂತರ, ಷುಗರ್ ಮಾತ್ರೆಗಳನ್ನು ತೆಗೆದುಕೊಂಡು ಗಂಟಲು ನೋವುತ್ತಿರುವುದಾಗಿ ಕಿರುಚಿದರು. ಬಳಿ ನೀರು ಕುಡಿದು ಮಲಗಿಕೊಂಡರು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆತ ಮೃತಪಟ್ಟಿರುವುದನ್ನು ಗಮನಿಸಿದ್ದಾಗಿ ತಿಳಿಸಿದ್ದಾಗಿ ಪೊಲೀಸರಿಗೆ ರಾಕೇಶ್ ಅವರ ಸೋದರಸಂಬಂಧಿ ವಿಶಾಲ್ ತಮಂಗ ತಿಳಿಸಿದ್ದಾರೆ.

'ಕೊಲೆಯ ನಂತರ ದೇವಿ ತನ್ನ ಗಂಡನ ಬ್ಯಾಂಕ್ ಖಾತೆಯಿಂದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾಳೆ. ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ, ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಪತಿಯನ್ನು ಕೊಲ್ಲುವುದಾಗಿ ಆಕೆ ಸವಾಲು ಹಾಕಿದ್ದಳು ಎಂದು ಆಕೆಯ ಪ್ರಿಯಕರ ಬಾಬು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India vs South Africa: ತವರಿನಲ್ಲಿ ಭಾರತಕ್ಕೆ ಮುಖಭಂಗ: ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಬವುಮಾ ಪಡೆ!

‘ಭಾರತದ ಒಂದೇ ಜಿಲ್ಲೆಗೆ 2,20,000 H-1B ವೀಸಾ ಮಂಜೂರು’: ದೊಡ್ಡ ಪ್ರಮಾಣದ ಹಗರಣ, ಯುಎಸ್ ಅರ್ಥಶಾಸ್ತ್ರಜ್ಞ ಡಾ.ಡೇವ್ ಬ್ರಾಟ್ ಆರೋಪ

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಜನಸ್ನೇಹಿ ಅಧಿಕಾರಿ ಪ್ರಾಣ ಕಸಿದ ಶ್ವಾನ: ಮುಗಿಲು ಮುಟ್ಟಿದ ಬೀಳಗಿ ಕುಟುಂಬಸ್ಥರ ಆಕ್ರಂದನ; ಬಡತನದಲ್ಲಿ ಅರಳಿದ್ದ ಧೀಮಂತ ಪ್ರತಿಭೆ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

SCROLL FOR NEXT