ರಾಜ್ಯ

ಬೆಂಗಳೂರು: ಪರೀಕ್ಷೆಗೆ ಕಾಪಿ ಚೀಟಿ ತಂದಿದ್ದಕ್ಕೆ ಶಿಕ್ಷಕಿಯಿಂದ ನಿಂದನೆ; ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!

Vishwanath S

ಬೆಂಗಳೂರು: ಇತ್ತೀಚೆಗಷ್ಟೇ ಪರೀಕ್ಷೆಯಲ್ಲಿ ಕಾಪಿ ಹೊಡೆದ ಎಂದು ನಿಂದಿಸಿದ್ದಕ್ಕೆ ವಿದ್ಯಾರ್ಥಿ ಮೊಯಿನ್ ಖಾನ್ ಕಟ್ಟಡದ ಮೇಲಿನಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದನು. ಇದರ ಬೆನ್ನಲ್ಲೇ ವಿದ್ಯಾರ್ಥಿನಿಯೋರ್ವಳು ಪರೀಕ್ಷೆಗೆ ಕಾಪಿ ಚೀಟಿ ತಂದಿದ್ದಕ್ಕೆ ಶಿಕ್ಷಕಿ ನಿಂದಿಸಿದ್ದು ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದೆ.

ಬೆಂಗಳೂರಿನ ಒಎಂಬಿಆರ್ ಲೇಔಟ್ ನ ದೊಡ್ಡ ಬಾಣಸವಾಡಿಯ ಮರಿಯಂ ನಿಲಯ ಇಂಗ್ಲಿಷ್ ಸ್ಕೂಲ್ ವಿದ್ಯಾರ್ಥಿನಿ ಅಮೃತಾ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಅಮೃತಾ ನವೆಂಬರ್ 2ರಂದು ನಡೆದ ಪರೀಕ್ಷೆಗೆ ಕಾಪಿ ಚೀಟಿ ತಂದಿದ್ದಳು. ಇದಾದ ನಂತರ ಶಿಕ್ಷಕಿ ಶಾಲಿನಿ ವಿದ್ಯಾರ್ಥಿಗಳ ಮುಂದೆ ಪದೇ ಪದೇ ಅಮೃತಾಳನ್ನು ನಿಂದಿಸುತ್ತಿದ್ದರು. ಇದರಿಂದ ನೊಂದ ಅಮೃತಾ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. 

ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡಿರುವ ಪೋಷಕರ ಆಕ್ರೋಶ ಮುಗಿಲು ಮುಟ್ಟಿದೆ. ಇನ್ನು ಶಾಲಾ ಆವರಣದಲ್ಲಿ ಅಮೃತಾ ಮೃತದೇಹವಿಟ್ಟು ಪೋಷಕರು ಪ್ರತಿಭಟನೆ ನಡೆಸಿದರು. 

ಹೆಗಡೆನಗರ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಮೊಯಿನ್ ಖಾನ್ ಕಳೆದ ನವೆಂಬರ್ 8ರಂದು ಶಾಲೆಯಲ್ಲಿ ಕಿರುಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕಾಪಿ ಮಾಡುತ್ತಿದ್ದಾನೆಂಬ ಕಾರಣಕ್ಕೆ ಮೊಯಿನ್ ನ್ನು ಶಿಕ್ಷಕರು ಪರೀಕ್ಷೆಯಿಂದ ಹೊರಹಾಕಿದ್ದರು. ಇದರಿಂದ ಮನೊಂದು ಮೊಯಿನ್ ನಾಗವಾರದ ಆರ್ ಆರ್ ಸಿಗ್ನೇಚರ್ ಅಪಾರ್ಟ್ ಮೆಂಟ್ ನ 14ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದನು.

SCROLL FOR NEXT