ರಾಜ್ಯ

ಯಾದರಿಗಿ: ಗಾಂಜಾ ಬೆಳೆದಿದ್ದ ಜಮೀನುಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಇಬ್ಬರ ಬಂಧನ

Ramyashree GN

ಯಾದಗಿರಿ: ಕರ್ನಾಟಕ ಅಬಕಾರಿ ಇಲಾಖೆಯ ತಂಡಗಳು ಗುರುವಾರ ರಾಜ್ಯದ ಯಾದರಿಗಿ ಜಿಲ್ಲೆಯಲ್ಲಿ ಗಾಂಜಾ ಬೆಳೆಯುವ ಕೃಷಿ ಜಮೀನುಗಳ ಮೇಲೆ ದಾಳಿ ನಡೆಸಿವೆ.

ಅಬಕಾರಿ ಅಧಿಕಾರಿಗಳ ಪ್ರಕಾರ, ಯಾದಗಿರಿಯ ಸುರಪುರ ತಾಲೂಕಿನ ಉಳ್ಳೆಸುಗೂರು ಗ್ರಾಮದಲ್ಲಿ ಮೂರು ಮತ್ತು ಏವೂರು ಗ್ರಾಮದಲ್ಲಿ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮೂರು ಕೆ.ಜಿ ಒಣ ಗಾಂಜಾ ಮತ್ತು ಮೂರು ಕೆ.ಜಿ ತಾಜಾ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಗಾಂಜಾ ಬೆಳೆದು, ಸಂಗ್ರಹಿಸಿಟ್ಟು ಸಂಭಾವ್ಯ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್‌) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಎನ್‌ಡಿಪಿಎಸ್‌ ಕಾಯ್ದೆ ದೇಶದ ಅತ್ಯಂತ ಬಲಿಷ್ಠ ಕಾಯ್ದೆಗಳಲ್ಲಿ ಒಂದಾಗಿದೆ. ಮಾದಕ ವ್ಯಸನ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. 1985 ರಲ್ಲಿ ಅಂದಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಎನ್‌ಡಿಪಿಎಸ್ ಕಾಯ್ದೆಯನ್ನು ಜಾರಿಗೆ ತಂದರು.

SCROLL FOR NEXT