ರಾಜ್ಯ

ಉತ್ತರ ಕನ್ನಡ ಜಿಲ್ಲೆಯ ಐದು ಬಂದರುಗಳಲ್ಲಿ ಹೂಳೆತ್ತುವ ಕಾರ್ಯ ಶೀಘ್ರ ಆರಂಭ: ಕೋಟಾ ಶ್ರೀನಿವಾಸ ಪೂಜಾರಿ

Nagaraja AB

ಕಾರವಾರ: ದೋಣಿ ಅವಘಡಗಳಿಗೆ ಕಾರಣವಾಗುವ ಮರಳು ಶೇಖರಣೆಗೊಂಡಿರುವ ಐದು ಮೀನುಗಾರಿಕಾ ಬಂದರುಗಳು ಮತ್ತು ಅಳಿವೆಗಳ ಹೊಳೆತ್ತುವ ಕಾರ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಡಳಿತ ತಿಳಿಸಿದೆ. ನಿತ್ಯ ಮೀನುಗಾರಿಕೆ ನಡೆಸಲು ತೊಂದರೆ ಅನುಭವಿಸುತ್ತಿರುವ ಮೀನುಗಾರರ ಬಹುದಿನಗಳ ಬೇಡಿಕೆಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ. 

ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಜಿಲ್ಲಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಎಲ್ಲಾ ಐದು ಬಂದರುಗಳು ಮತ್ತು ಇತರ ಮೂರು ಜಿಲ್ಲೆಗಳಲ್ಲಿ ಮರಳು ಶೇಖರಣೆಯನ್ನು ಹೂಳೆತ್ತುವ ಮೂಲಕ ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ತದಡಿ, ಭಟ್ಕಳ, ಹೊನ್ನಾವರ, ಕಾರವಾರ ಮತ್ತು ಅಮದಹಳ್ಳಿಯಲ್ಲಿ ಹೂಳೆತ್ತಲಾಗುವುದು, ಇದರಿಂದ ಇಲ್ಲಿ ಮೀನುಗಾರಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದರು.ಆಶ್ಚರ್ಯಕರ ಸಂಗತಿಯೆಂದರೆ, ಮೀನುಗಾರರಿಗೆ ಇದರ ಬಗ್ಗೆ ಯಾವುದೇ ಆಶಾಭಾವನೆ ಇಲ್ಲ. “ಕಳೆದ ಒಂದು ದಶಕದಿಂದ ಬಂದರುಗಳ ಹೂಳು ತೆಗೆಯುವ ಬಗ್ಗೆ ನಾವು ಕೇಳುತ್ತಿದ್ದೇವೆ. ಆದಷ್ಟು ಬೇಗ ಆಗಬೇಕಿದೆ’ ಎಂದು  ಮೀನುಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ನಾಗೇಂದ್ರ ಖಾರ್ವಿ ಹೇಳಿದರು. 

SCROLL FOR NEXT