ರಾಜ್ಯ

ಭಾರತ್ ಜೋಡೋ ಯಾತ್ರೆ: ಸೋನಿಯಾರ ಶೂ ಲೇಸ್ ಕಟ್ಟಿದ ರಾಹುಲ್ ಗಾಂಧಿ

Nagaraja AB

ಮಂಡ್ಯ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಳ್ಳುವ ಮೂಲಕ ಧೀರ್ಘ ಸಮಯದ ನಂತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. 

ಪಾಂಡವಪುರ ತಾಲ್ಲೂಕಿನಲ್ಲಿ ರಾಹುಲ್ ಗಾಂಧಿ ಅವರೊಂದಿಗೆ  ಯಾತ್ರೆಯಲ್ಲಿ ಪಾಲ್ಗೊಂಡ ಸೋನಿಯಾ ಗಾಂಧಿ, ಸ್ಥಳೀಯ ಮುಖಂಡರನ್ನು ಭೇಟಿಯಾಗುತ್ತಾ, ಅವರ ಜೊತೆಯಲ್ಲಿಯೇ ಮಾತನಾಡುತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕಂಡುಬಂದಿತು. ಪಾದಯಾತ್ರೆ ವೇಳೆ ಬಿಚ್ಚು ಹೋಗಿದ್ದ ತಾಯಿ  ಸೋನಿಯಾ ಗಾಂಧಿ ಅವರ ಶೂ ಲೇಸ್ ಕಟ್ಟಿದರು.

ಈ ಚಿತ್ರವನ್ನು ಎಐಸಿಸಿ ಟ್ವಿಟರ್ ಖಾತೆಯಲ್ಲಿ ಹೃದಯದ ಎಮೋಜಿಯೊಂದಿಗೆ ಹಂಚಿಕೊಂಡಿದೆ. ಪಕ್ಷದ ಕಾರ್ಯಕರ್ತರ ಜೈಕಾರ, ಘೋಷಣೆಗಳೊಂದಿಗೆ ರಾಹುಲ್ ಮತ್ತಿತರ ಮುಖಂಡರೊಂದಿಗೆ ಸೋನಿಯಾ ಗಾಂಧಿ ಕೆಲವು ದೂರ ಹೆಜ್ಜೆ ಹಾಕಿದರು.  

ಕೋವಿಡ್-19 ಸೋಂಕಿಯಿಂದ ಚೇತರಿಸಿಕೊಂಡ ಬಳಿಕ ಸೋನಿಯಾ ಗಾಂಧಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಸೋನಿಯಾ ಗಾಂಧಿಗೆ ಎರಡು ಬಾರಿ ಕೊರೋನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತದನಂತರ ಅವರು ಅನಾರೋಗ್ಯದ ಕಾರಣ ಧೀರ್ಘ ಸಮಯದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

2016 ಆಗಸ್ಟ್ ನಲ್ಲಿ ವಾರಾಣಸಿಯಲ್ಲಿ ರೋಡ್ ಶೋ  ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. 3,570 ಕಿಲೋ ಮೀಟರ್ ಉದ್ದದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 8 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಿದೆ. 

SCROLL FOR NEXT