ಬಸವರಾಜ ಬೊಮ್ಮಾಯಿ 
ರಾಜ್ಯ

ಬೆಂಗಳೂರು: ಮಳೆ ಹಾನಿ ಪ್ರದೇಶಗಳ ವೀಕ್ಷಣೆ; ಅಧಿಕಾರಿಗಳ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ

ತಗ್ಗು ಪ್ರದೇಶದಲ್ಲಿ ನೀರು ಹೋಗಲು ದಾರಿ ಇಲ್ಲ. ಮನೆಗಳನ್ನು ಕಟ್ಟಲು ಅವಕಾಶ ನೀಡಿದವರ್ಯಾರು? ಇದಕ್ಕೆಲ್ಲಾ ಯಾರು ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಪ್ರಶ್ನಿಸಿದರು.

ಬೆಂಗಳೂರು: ತಗ್ಗು ಪ್ರದೇಶದಲ್ಲಿ ನೀರು ಹೋಗಲು ದಾರಿ ಇಲ್ಲ. ಮನೆಗಳನ್ನು ಕಟ್ಟಲು ಅವಕಾಶ ನೀಡಿದವರ್ಯಾರು? ಇದಕ್ಕೆಲ್ಲಾ ಯಾರು ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಪ್ರಶ್ನಿಸಿದರು.

ಸೆಪ್ಟೆಂಬರ್ 01ರಂದು ಬೆಂಗಳೂರು ನಗರದಲ್ಲಿ ಮಳೆಯಿಂದ ಆಗಿರುವ ಪ್ರದೇಶಗಳ ವೀಕ್ಷಣೆ ನಂತರ ಆಯೋಜಿತವಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಒತ್ತುವರಿ ತೆರೆವುಗೊಳಿಸುವುದಲ್ಲದೆ ಅಂದಾಜು ಪಟ್ಟಿ ಸಿದ್ಧಪಡಿಸಿ. ಎಲ್ಲವನ್ನೂ ವ್ಯವಸ್ಥಿತವಾಗಿ ವೈಜ್ಞಾನಿಕವಾಗಿ, ನೀರು ಸರಳವಾಗಿ ಹರಿದುಹೋಗುವ ರೀತಿಯಲ್ಲಿ ಮಾಡಬೇಕು.

ಒತ್ತುವರಿ ಆಗಿರುವುದನ್ನು ತೆಗೆಸಿ, ಖಾಸಗಿ ಜಮೀನು ಲಭ್ಯವಿದೆ, ನಕ್ಷೆಯಲ್ಲಿದ್ದರೆ ಪರಿಹಾರವನ್ನು ನೀಡಬೇಕಾದರೆ ನೀಡಲು ಸಿದ್ದವಿರುವುದಾಗಿ ತಿಳಿಸಿದರು. ಸಂಪೂರ್ಣವಾಗಿ ಆರ್.ಸಿ.ಸಿ ಕಟ್ಟಡವನ್ನು ಕಟ್ಟಿ. 30.ಮೀಟರ್ ಚರಂಡಿ ಮೂರು ಮೀಟರ್ ಗೆ ಇಳಿದಿದೆ.  ಇದಕ್ಕೆ ಶಾಶ್ವತ ಪರಿಹಾರವಾಗಿ ಎತ್ತರದ ಗೋಡೆ ಕಟ್ಟಿ ಎಂದು ಸೂಚಿಸಿದರು.

ಸಂಬಂಧಿಸಿದ ಇಂಜಿನಿಯರ್‌ಗಳು ಕಾರ್ಯಪ್ರವೃತ್ತನಾಗಬೇಕು. ಯಾವುದೇ ಒತ್ತುವರಿಯಾದರೂ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಸಮಸ್ಯೆ ಬಂದಾಗ ಮಾತ್ರ ಚರ್ಚೆ ಮಾಡ್ತೀರಾ. ರಾಜಕಾಲುವೆ ಮೇಲೆ ರಸ್ತೆ ಮಾಡಿದ್ದಾರೆ,ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು ಎದ್ದು ನಿಂತಿದೆ. ಅಕ್ರಮವಾಗಿ ಬೇಕಾದನ್ನು ಮಾಡುಸ್ತೀರಿ. ಮಳೆ ನೀರು ಕೊಯ್ಲು ಸರಿಯಾಗಿ ಆಗಿದೆ ಅಂತ ಸುಳ್ಳು ಹೇಳ್ತಿರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೊಡ್ಡ ಬಿಲ್ಡರ್‌ಗಳಿಗೆ ಒತ್ತುವರಿಗೆ ಯಾರೂ ಸಹಾಯ ಮಾಡಿದ್ದಾರೆ ಅನ್ನೋದನ್ನು ತನಿಖೆ ನಡೆಸಿ ವರದಿ ಪಡೆಯುತ್ತೇನೆ. ಒತ್ತುವರಿ ತೆಗೆಸಬೇಕು ಯಾವುದೇ ನಿರ್ಲಕ್ಷ್ಯ ಮಾಡುವಂತಿಲ್ಲ. ಯಾವುದೋ ಲೇಔಟ್ ಡೆವೆಲಪ್ ಮಾಡಿದ್ದಾರೆ ಅದರಲ್ಲಿ ಡ್ರೈನೇಜ್‌ಗೆ ಜಾಗ ಕೊಟ್ಡಿಲ್ಲ. ಬಿಲ್ಡರ್ ಮತ್ತು ಡೆವೆಲಪರ್ ಹೊಣೆ ಮಾಡಬೇಕು ಅಲ್ವಾ. ಬಿಲ್ಡರ್‌ಗಳಿಗೆ ಅವಕಾಶ ಮಾಡಿಕೊಟ್ಟವರು ಯಾರು. ಎಲ್ಲವನ್ನೂ ತೆಗೆಸುತ್ತೇನೆ, ಎಲ್ಲ ದಾಖಲೆ ತೆಗೆಸುತ್ತೇನೆ. ರಾಜಾ ಕಾಲುವೆಗಳ ಒತ್ತುವರಿಯಿಂದಾಗಿಯೂ ಸಮಸ್ಯೆ ಹೆಚ್ಚಾಗಿದೆ. ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು  ಒತ್ತುವರಿ ತೆರವಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಮಹದೇವಪುರ, ಬೊಮ್ಮನಹಳ್ಳಿ ಭಾಗದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಈ ಭಾಗದಲ್ಲಿ ಹೆಚ್ಚು ಕೆರೆಗಳು ಇರುವುದರಿಂದ ಅಪಾರ ಹಾನಿಯಾಗಿದೆ. ನಿರಂತರ ಮಳೆಯಿಂದ ಕೆರೆಗಳು ತುಂಬಿ ರಾಜಕಾಲುವೆಗಳಿಗೆ ಹರಿದಿದೆ. ಕೆರೆ ನೀರು, ಮಳೆ ನೀರು ಸೇರಿ ರಾಜಕಾಲುವೆ ಉಕ್ಕಿ ಹರಿದು ಸಮಸ್ಯೆ ಎದುರಾಗಿದ್ದು ರಾಜಕಾಲುವೆ ಒತ್ತುವರಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ರಾಜಕಾಲುವೆ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾವುದೇ ಒತ್ತಡಕ್ಕೆ ಮಣಿಯದೆ ತೆರವು ಗೊಳಿಸಲು ಸೂಚಿಸಿದ್ದೇನೆ. ಎಷ್ಟೇ ಪ್ರಭಾವಿಗಳಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ತಿಳಿಸಿದ್ದೇನೆ. ಒತ್ತುವರಿ ತೆರವು ಬಳಿಕ ರಾಜಾ ಕಾಲುವೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT