ಆರಗ ಜ್ಞಾನೇಂದ್ರ 
ರಾಜ್ಯ

ಪೊಲೀಸ್ ಕ್ರಮದ ಹಿಂದೆ ಅಪರಾಧಗಳ ಹಿನ್ನೆಲೆ ಮಾತ್ರ ಪರಿಗಣನೆ; ಧರ್ಮ, ಅಲ್ಪಸಂಖ್ಯಾತ ಅಥವಾ ಬಹುಸಂಖ್ಯಾತ ಅಲ್ಲ: ಆರಗ ಜ್ಞಾನೇಂದ್ರ

ಪೋಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ, ಕೇವಲ ಅಪರಾಧಗಳ ಹಿನ್ನೆಲೆ ಮಾತ್ರ ಪರಿಗಣಿಸುತ್ತಾರೆಯೇ ವಿನಹ, ಅಲ್ಪಸಂಖ್ಯಾತ, ಬಹು ಸಂಖ್ಯಾತರು, ಜಾತಿ ಅಥವಾ ಧರ್ಮವನ್ನು ನೋಡಿ,ಅಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬೆಂಗಳೂರು: ಪೋಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ, ಕೇವಲ ಅಪರಾಧಗಳ ಹಿನ್ನೆಲೆ ಮಾತ್ರ ಪರಿಗಣಿಸುತ್ತಾರೆಯೇ ವಿನಹ, ಅಲ್ಪಸಂಖ್ಯಾತ, ಬಹು ಸಂಖ್ಯಾತರು, ಜಾತಿ ಅಥವಾ ಧರ್ಮವನ್ನು ನೋಡಿ, ಅಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ, ಇಂದು ಮಾತನಾಡಿದ ಸಚಿವರು, ಸಮಾಜದಲ್ಲಿ, ಶಾಂತಿ ಸುವ್ಯವಸ್ಥೆ, ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಯೊಂದಿಗೆ, ಎಲ್ಲರೂ ಸಹಕರಿಸಬೇಕು, ಎಂದು ಹೇಳಿದರು.

ಕಾನೂನನ್ನು ಕೈಗೆ ತೆಗೆದುಕೊಳ್ಳುವ ಯಾರ ವಿರುದ್ಧವೇ ಆಗಲಿ, ಕ್ರಮ ಜರುಗಿಸಲಾಗುತ್ತದೆ ಎಂದ ಸಚಿವರು, ಖಚಿತ ಮಾಹಿತಿ ಮೇರೆಗೆ ಎನ್ ಐ ಎ ಸಿಬ್ಬಂದಿಗಳು, ಹಲವು ಕಡೆ ಶೋಧ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಶಿವಮೊಗ್ಗ ಪೊಲೀಸರು, ಇಬ್ಬರು ವ್ಯಕ್ತಿಗಳು, ಭಯೋತ್ಪಾದಕ ಸಂಘಟನೆ ಜತೆ, ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ತನಿಖೆಯನ್ನು ಚುರುಕಿನಿಂದ ನಡೆಸಿರುವ ಶಿವಮೊಗ್ಗ, ಪೊಲೀಸರ, ಕಾರ್ಯ ಕ್ಷಮತೆಯ ಬಗ್ಗೆ, ಅಭಿನಂದಿಸುತ್ತೇನೆ, ಎಂದೂ ಸಚಿವರು ಹೇಳಿದರು.

ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪೇ- ಸಿಎಮ್ ಅಭಿಯಾನದ ಬಗ್ಗೆ, ಕಟುವಾಗಿ ಪ್ರತಿಕ್ರಿಯಿಸಿದ ಸಚಿವರು, ಜನರು ಪಕ್ಷದಿಂದ ದೂರವಾಗುತ್ತಿದ್ದು, ಇದರಿಂದ ಹತಾಶರಾದ ಕಾಂಗ್ರೆಸ್ ನಾಯಕರು, ಇಂಥಹ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರೂ ಮಾಜಿ ವಿಧಾನ ಸಭಾ ಸ್ಪೀಕರ್ ಸಹ ಆಗಿದ್ದ, ಕಾಂಗ್ರೆಸ್ ನಾಯಕರ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಹೇಳಿದ್ದು, ಕಾಂಗ್ರೆಸ್ ನಾಯಕರ ಬಣ್ಣ ಬಯಲು ಮಾಡಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT